ಪುಟ:ಪ್ರೇಮ ಮಂದಿರ.djvu/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಾಗೂ ಷಣ.

    1. # # 3 + 4 + + ++ - *

• • • • • • •• • •••••• • • • • • • • •••••••••••• ಆ ತರುಣನು ತನ್ನ ಕುದುರೆಯನ್ನು ಸಮೀಪದಲ್ಲಿಯೇ ಒಂದು ಒಣ ಮರದ ಬೇರಿಗೆ ಕಟ್ಟಿದ್ದನು. ಅಲ್ಪಾವಧಿಯಲ್ಲಿಯೇ ಆತನು ಅದರ ಹತ್ತಿರ ಹೋಗಿ, ಲಗುಬಗೆಯಿಂದ ಅದರ ಬೆನ್ನು ಚಪ್ಪರಿಸಿ ಟಣ್ಣನೆ ಹಾರಿ ಅದರ ಮೇಲೆ ಕುಳಿತು ಮಾತನಾಡಿದನು. ( ಮಗೂ, ಅಜಯಾ! ನಡೆ. ಇಂದು ನಮಗೆ ವಿರಾಮವು ದೊರೆಯಲೇ ಇಲ್ಲ. ಅಜಯನನ್ನು ವೇಗವಾಗಿ ನಡೆಯಿಸುತ್ತ ಆ ಶಿಪಾಯಿಯು ಆ ಆಕ್ರಂದನದ ಧೋರ ಣೆಯಿಂದಲೇ ಮಾರ್ಗವನ್ನು ಕ್ರಮಿಸಹತ್ತಿದನು. ಆ ಗುಡ್ಡಗಾಡ ಪ್ರದೇಶದಲ್ಲಿ ಹೆಚ್ಚಾಗಿ ತಗ್ಗು ಮಿಟ್ಟಿಗಳಿದ್ದದರಿಂದ ಇಷ್ಟ ಸ್ಥಳವನ್ನು ಮುಟ್ಟಲು ಆತನಿಗೆ ಸ್ವಲ್ಪ ಅವಕಾಶವು ಬೇಕಾ ಆಯಿತು. ಆ ಸ್ಥಳಕ್ಕೆ ಬಂದೊಡನೆಯೇ ಅವನೊಂದು ವಿಲಕ್ಷಣವಾದ ನೋಟವನ್ನು ಕಂಡ ನು. ಅತ್ಯಂತ ರೂಪವತಿಯಾದ ಒಬ್ಬ ತರುಣ ಸ್ತ್ರೀಯನ್ನು ಒಂದು ಗಿಡಕ್ಕೆ ಬಿಗಿದು, ಪಿಶಾ ಚಾಕಾರನಾದ ಒಬ್ಬ ಪುರುಷನು ಕೆಂಗಣ್ಣಿನಿಂದ ನೋಡುತ್ತ ಅವಳ ಎದುರಿನಲ್ಲಿ ನಿಂತು ಕೊಂಡಿದುದು ಅವನ ಕಣ್ಣಿಗೆ ಬಿತ್ತು. ಆ ಪುರುಷನು ನರಕಲೋಕದ ಭಯಂಕರನಾದ ದ್ವಾರಪಾಲಕನೋ ಎಂಬ ಸಂಶಯವು ನಮ್ಮ ಶಿಪಾಯಿಯ ಮನಸ್ಸಿನಲ್ಲಿ ಹುಟ್ಟಿತು. ಸಮೀ ಪದಲ್ಲಿಯೇ ಒಂದು ಮೇಣೆಯು ತುಂಡುತುಂಡಾಗಿ ಮುರಿದು ಬಿದ್ದಿತ್ತು. ನಮ್ಮ ತರುಣವೀರನು ಅಲ್ಲಿ ಬಂದೊಡನೆಯೇ ಕೈಯೊಳಗಿನ ಕತ್ತಿಯನ್ನು ಒರೆ ಯೊಳಗಿಂದ ಹಿರಿದನು, ಮತ್ತು ಬಡ್ಡದ ಹಿಡಿಕೆಯಿಂದ ಆತನ ಭುಜದ ಮೇಲೊಂದು ಬಲವಾದ ಏಟನ್ನು ಕೊಟ್ಟು ಕೊಧಕ೦ಪಿತ ಸ್ವರದಿಂದ ಗರ್ಬಿಸಿದನು. ((ನೀನು ಯಾರು ? ” ಭಯದಿಂದ ಬೆದರಿ ನಡುಗುತ್ತ ನಡುಗುತ್ತ ಆ ಪುರುಷನು ಉತ್ತರವಿತ್ತನು. ಮಹಾ ಸ್ವಾಮಿ, ದಯವಿಟ್ಟು ನನ್ನನ್ನು ಕ್ಷಮಿಸಿರಿ. ನಾನು ಅಪ್ಪಣೆಯಂತೆ ನಡೆಯುವ ಸೇವಕನು. ನಾನು ಸ್ವಲ್ಪಾದರೂ ಅಪರಾಧವನ್ನು ಮಾಡಿಲ್ಲ. ” (ನಿನ್ನ ಒಡೆಯನು ಎಲ್ಲಿ ಇದ್ದಾನೆ ? ” (( ಅವರು ಮೇಣಾವಾಹಕರನ್ನು ಬೆನ್ನಟ್ಟಿ ಹೋಗಿದ್ದಾರೆ. ” ( ಈ ಮುರಕ ಮೇಣೆಯು ಯಾರದು? ಅದನ್ನು ಹೊರುವವರು ಎಲ್ಲಿಹೋದರು ?” ಜೀವದ ಆಶೆಯಿಂದ ಅವರು ಓಡಿಹೋದರು. ಈ ಮೇಣೆಯು ಈ ಅಮ್ಮನವರದು, ದೇವದರ್ಶನವನ್ನು ಮಾಡಿಕೊಂಡು ಇವರು ಈ ದಾರಿಯಿಂದ ಹೋಗುತ್ತಿರಲು ನಮ್ಮ ಯಜಮಾನರು ಮೇಣವಾಹಕರನ್ನು ಹೊಡೆದು ಓಡಿಸಿದರು. ” 'ನೀನು ಯಾರು? ರಜಪೂತನೋ ? ” ಹೌದು-ನಾನು ಚಂದ್ರಾವತನು. ” `««ದುಷ್ಟನಾದ ಆ ನಿನ್ನ ಯಜಮಾನನು ಯಾರು ? ೨೨ (ಅವರೂ ಚಂದ್ರಾವತರೇ,