ಪುಟ:ಪ್ರೇಮ ಮಂದಿರ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ. MvÀ » 1 2 1 1 • • • • • • • “ನೀವು ಚಂದ್ರಾವತ ರಜಪೂತಜಾತಿಗೆ ನಿಜವಾಗಿಯೂ ಕಲಂಕಪ್ರಾಯರು. ಈ ಹೆಣ್ಣು ಮಗಳು ಯಾರೆಂಬದನ್ನು ನೀನು ಬಲ್ಲೆಯಾ ? ೨೨ (ನಾನರಿಯೆನು, ” ಕತ್ತಿಯ ಅಲಗನ್ನು ಆತನ ಹೆಗಲಮೇಲಿಟ್ಟು ನಮ್ಮ ತರುಣ ಶಿಪಾಯಿಯು ಕರ್ಕ ಶಸ್ವರದಿಂದ ಮಾತಾಡಿದನು. ನಿಜವಾಗಿ ಹೇಳು, ಮೂರ್ಖಾ ! ಇಲ್ಲದಿದ್ದರೆ ನಿನ್ನ ಸಂತೆ ಯು ಮುಗಿಯಿತೆಂದು ತಿಳಿ, ” ನಡುಗುತ್ತ ನಡುಗುತ್ತ ಆ ಪುರುಷನು ಹೇಳಿದನು. “ಏಕಲಿಂಗದೇವರ ಶಪಥದಿಂದ ಹೇಳುತ್ತೇನೆ. ನಿಜವಾಗಿ ನನಗೆ ಯಾವ ಸಂಗತಿಯೂ ಗೊತ್ತಿಲ್ಲ. ” 'ಈ ಹೆಣ್ಣು ಮಗಳನ್ನು ಇಲ್ಲಿ ಕಟ್ಟಿದವರಾರು ? ” (ಯಜಮಾನರವರೇ” ಆತನ ಹೆಗಲಮೇಲಿನ ಖಡ್ಗವನ್ನು ತೆಗೆದುಕೊಂಡು ನಮ್ಮ ತರುಣನು ಉಚ್ಚಸ್ವರ ದಿಂದ ಆ ಪುರುಷನನ್ನು ಬೆದರಿಸುತ್ತ ಮಾತನಾಡಿದನು. ಇಲ್ಲಿಂದ ಓಡಿಹೋಗುವದಕ್ಕೆ ಕೊಂಚಮಟ್ಟಿಗಾದರೂ ಪ್ರಯತ್ನ ಪಡುವೆಯಾದರೆ ಸತ್ತೆಯೆಂದೇ ತಿಳಿದುಕೋ ! ನನ್ನ ಕೆಲಸವೆಲ್ಲ ಮುಗಿಯುವ ವರೆಗೆ ಬಾಯಿಮುಚ್ಚಿಕೊಂಡು ಇಲ್ಲಿ ನಿಲ್ಲು, ” ಹೀಗೆ ಆತನನ್ನು ಆಜ್ಞಾಪಿಸಿ, ಮೃತಪ್ರಾಯಳಾದ ಆ ರಮಣಿಯ ಕಟ್ಟಿನ ಹಗ್ಗಗ ಳನ್ನು ತ್ವರೆಯಿಂದ ಹರಿದು ಆಕೆಯನ್ನು ಬಂಧನದಿಂದ ಬಿಡಿಸಿದನು. ಚೋರರಿಂದ ತನಗೆ ಪ್ರಾಪ್ತವಾದ ಅವಸ್ಥೆಯಮೂಲಕ ಆ ಕೋಮಲಾಂಗಿಯು ಗದಗದ, ನಡುಗುತ್ತಿದ್ದಳು. ಶೂನ್ಯದೃಷ್ಟಿಯಿಂದ ಅವಳು ಆ ತರುಣವೀರನನ್ನು ನೋಡಹತ್ತಿದಳು. ಪರಿಪರಿಯಿಂದ ಅವಳಿಗೆ ಅಭಯವನ್ನಿತ್ತು ನಮ್ಮ ತರುಣವೀರನು ಕೋಮಲ ಸ್ವರ 'ದಿಂದ ಮಾತಾಡಿದನು. ( ಇನ್ನು ಮೇಲೆ ತಾವು ಹೆದರಬೇಕಾದುದಿಲ್ಲ. ತಾವು ಈಗ ಸಂಕಟದೊಳಗಿಂದ ಪಾರಾಗಿರುವಿರಿ. ತಾವು ಯಾರೆಂಬುದನ್ನು ನನಗೆ ನಿರ್ಭಯದಿಂದ ಹೇಳುವದಾಗಬೇಕು. ನನ್ನ ಹೆಸರು ಕರುಣಸಿಂಹ, ನಾನು ಅಕಬರಬಾದಶಹನ ಸೇನಾ ಪತಿಗಳಲ್ಲೊಬ್ಬನು. ಮೊಗಲರು ರಾಜಸ್ಥಾನದಲ್ಲಿ ಹೊಸದಾಗಿ ಗೆದ್ದುಕೊಂಡಿರುವ ಪ್ರದೇ ಶಕ್ಕೆ ನಾನೊಬ್ಬ ಪ್ರಮುಖನಾದ ಅಧಿಕಾರಿಯಾಗಿದ್ದೇನೆ. ನಿಃಸಂದೇಹವಾಗಿ ತಾವು ನನ್ನ ಮೇಲೆ ವಿಶ್ವಾಸವನ್ನಿಡಿರಿ. ” ಕರುಣಸಿಂಹನ ಪರಿಚಯದಿಂದ ಆ ಹೆಂಗಸು ಚಕಿತಳಾದಳು. “ ಕರುಣಸಿಂಹ! ಕರುಣಸಿಂಹ! ಆ ಪ್ರಸಿದ್ಧರಾದ ಕರುಣಸಿಂಹರು ಇವರೇ ಏನು? !ಆ ರಮಣಿಯ ಹೃದಯದಲ್ಲಿದ್ದ ಭಯದ ಸ್ಥಳದಲ್ಲಿ ಈಗ ಆನಂದವು ತಾಂಡವವನ್ನು ಮಾಡತೊಡಗಿತು. ಇನ್ಯಾವನಾದರೂ ಒಬ್ಬ ಪುರುಷನಿಗೆ ಈ ಪ್ರಸಂಗದಲ್ಲಿ ತನ್ನ ಪರಿಚಯವನ್ನು ಸಹಜವಾಗಿ ಹೇಳಿಬಿಡಬಹುದಾಗಿತ್ತು; ಆದರೆ ಈ ವೀರನಿಗೆ ತನ್ನ ಪರಿಚಯವನ್ನುಂಟುಮಾಡಿಕೊಡು