ಪುಟ:ಪ್ರೇಮ ಮಂದಿರ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ. ಮನೋಹರ ವಿಲಾಸದ ಕ್ರೀಡಾಂಗಣವಾಗಿತ್ತು! ವಿಶಾಲವೂ ತೇಜಃಪುಂಜವೂ ಆದ ಲೋಚನಯುಗಲದ ನೋಟವು ಎಷ್ಟು ಚಂಚಲ! ಎಷ್ಟು ಮೋಹಕ !! ವೇನೇರೂಪ ದಿಂದ ಬಂಧಿತವಾದ, ಭ್ರಮರಗಳಂತೆ ಶೋಭಾಯಮಾನವಾದ ಕೃಷ್ಣಕೇಶರಾಜಿಯು ಎಷ್ಟು ಮನೋಹರ ! ಅವಳ ಬಾಹುಯುಗ್ಯವು ಎಷ್ಟು ಚಿತ್ತಾಕರ್ಷಕ ! ಎಷ್ಟು ರಮ್ಮ!! ಹೆಚ್ಚು ಎತ್ತರವಾಗಿಯೂ ಹೆಚ್ಚು ಗಿಡ್ಡವಾಗಿಯೂ ಅಲ್ಲದ ಮಧ್ಯಮಾಕಾರದ ಅವಳ ದೇಹಯಷ್ಟಿಯು ಎಷ್ಟು ಸೂಕ್ಷ್ಮ! ವಿಧಾತೃವಿನ ಈ ಸುಂದರವಾದ ಸೃಷ್ಟಿಯನ್ನು ನೋಡುತ್ತಿರುವಾಗ ಕಣ್ಣ ರೆಪ್ಪೆಗಳು ಅಲೆಯುವುದೇ ಇಲ್ಲ! ಒಮ್ಮೆ ನೋಡಿದರೆ ಸಾಕುದರ್ಶನಾಪೇಕ್ಷೆಯು ಹೆಚ್ಚುತ್ತಲೇ ಹೋಗುವುದು; ಜನ್ಮ ಜನ್ಮಾಂತರಗಳಲ್ಲಿಯೂ ದರ್ಶ ನೇಚ್ಚೆಯು ತೃಪ್ತವಾಗುವುದಿಲ್ಲ. ಪ್ರಿಯವಾಚಕರೇ, ವಸಂತಋತುವಿನ ಮೃದುಶೀತಲವಾಯುವಿನಿಂದ ಪ್ರೇಮಭರ ದಿಂದ ಚುಂಬಿತವಾದ ಉಳ್ಳ ಲರ್ದ ಗುಲಾಬಿಯ ಸೌಂದರ್ಯವನ್ನು ನೀವು ಎಂದಾದರೂ ನೋಡಿರುವಿರೋ? ಹೇಮಂತಋತುವಿನ ತಂಪಾದ ಇಬ್ಬನಿಯಿಂದ ಸ್ವಾತವಾದ ಮುಗ್ಧ ವಾದ ಜಾದಿಯ ಕಲಿಕೆಯ ಮನೋರಮವಾದ ಲಾವಣ್ಯವನ್ನು ನೀವು ಎಂದಾದರೂ ಅವಲೋಕಿಸಿರುವಿರೋ? ವರ್ಷಾಕಾಲದ ತುಂತುರದೃಷ್ಟಿಯಿಂದ ಭೌತವಾದ ಪೂರ್ಣ ವಿಕಸಿತವಾದ ಚಂಪಕದ ಗೌರಕಾಂತಿಯ ರಮ್ಯಜ್ಞಾಯೆಯನ್ನು ನೀವು ಎಂದಾದರೂ ನಿರೀಕ್ಷಿಸಿರುವಿರೋ? ನೀಲಮೇಘಗಳಿಂದ ಅಚ್ಚನ್ನ ವಾದ ವಿಸ್ತೀರ್ಣವಾದ ಗಗನದಲ್ಲಿ ಥಳಥಳಿಸುವ ಸೌದಾಮಿನಿಯ ಪ್ರಖರರೂಪಜ್ಯೋತಿಯನ್ನು ನೀವು ಎಂದಾದರೂ ಕಂಡಿ ರುವಿರೋ? ಬ್ರಹ್ಮದೇವನ ಈ ಮನೋಹರವಾದ ಸೃಷ್ಟಿಯನ್ನು ನೋಡಿ ನಿಮ್ಮ ಮನಸ್ಸು ಕ್ವಚಿತ್ಪಸಂಗದಲ್ಲಿ ಮೋಹಿತವಾಗಲಿಕ್ಕಿಲ್ಲ; ಆದರೆ ಆ ರಜಪೂತ ಬಾಲಿಕೆಯನ್ನು ನೋಡಿ ಸೃಷ್ಟಿಕರ್ತನ ಸೃಷ್ಟಿಚಾತುರ್ಯದ ವಿಷಯಕ್ಕೆ ಅಚ್ಚರಿಪಡುತ್ತ ಮೂಢರಾಗುವಿರಿ; ಆ ಲಾವಣ್ಯಮಾಧುರಿಯಿಂದ ನಿಶ್ಚಯವಾಗಿಯೂ ವಿಸ್ಕೃತಿಯನ್ನು ಹೊಂದುವಿರಿ! ನಮ್ಮ ತರುಣ ಶಿಪಾಯಿಯು ಆ ಮನೋಮೋಹಿನಿಯ ಸ್ಥಿರವೂ ಉಜ್ವಲವೂ ಆದ ನೇತ್ರ ಕಟಾಕ್ಷದ ಬಲೆಯಲ್ಲಿ ಸಿಕ್ಕಿದನೋ ಇಲ್ಲವೋ ಎಂಬುದನ್ನು ಖಂಡಿತವಾಗಿ ಹೇಳ ಲಾರೆವು. ಆದರೂ ಇಂದಿನವರೆಗೆ ಯಾವ ಕರುಣಸಿಂಹನ ಹೃದಯದ ಮೇಲೆ ರಮಣೀ ಪ್ರೇಮದ ಅಮೋಘಶಕ್ತಿಯಿಂದ ಲವಮಾತ್ರವಾದರೂ ಪರಿಣಾಮವಾಗಿದ್ದಿಲ್ಲವೋ ಅಂತಹ ಆತನ ಅಭೇದ್ಯ ಹೃದಯವು ಇಂದು ಕಂಪಿಸತೊಡಗಿತೆಂಬುದನ್ನು ಮಾತ್ರ ನಿಶ್ಚಯವಾಗಿ ಹೇಳಬಲ್ಲೆವು. ಪ್ರವಾಸದ ದಣುವಿನಿಂದ ಕರುಣಸಿಂಹನು ದಣಿದಿದ್ದ ನೆಂಬುದು ವಾಚಕರಿಗೆ ಗೊತ್ತೇ ಇದೆ. ಅದರಲ್ಲಿಯೂ ಆತನ ದುರ್ದೈವದಿಂದ ಅತ್ಯಂತ ವಾಗಿದ್ದ ತನ್ನ ನೀರಡಿಕೆಯನ್ನು ಕಳೆದುಕೊಳ್ಳುವುದಕ್ಕೆ ಕೂಡ ಅವಕಾಶವಾಗಲಿಲ್ಲ! ಈ ಪ್ರಕಾರ ಆತನು ಅತ್ಯಂತ ಕ್ಲಾಂತನಾಗಿದ್ದರೂ ಈ ಸಮಯದಲ್ಲಿ ಆತನ ಮುಖದ