ವಿಷಯಕ್ಕೆ ಹೋಗು

ಪುಟ:ಪ್ರೇಮ ಮಂದಿರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, • “+++++ +++ +,, My • • • • •

  • * * * *

ಮೇಲೆ ಒಂದು ಪ್ರಕಾರದ ಆನಂದರಸವು ಹರಿದಾಡುತ್ತಿತ್ತು. ಕೆಲಹೊತ್ತಿಗೆ ಮುಂಚೆ ಕರುಣಸಿಂಹನು ಆ ಸುಂದರಿಯೊಡನೆ ನಿಃಸಂಕೋಚವಾಗಿ ಮಾತನಾಡುತ್ತಿದ್ದನು; ಆದರೆ ಈಗ ಅವಳೊಡನೆ ಮಾತನಾಡಲು ಒಂದು ತರದ ಸಂಕೋಚಭಾವವು ಅವನ ಮನಸ್ಸಿ ನಲ್ಲಿ ಆಕಸ್ಮಿಕವಾಗಿ ಉದ್ಭವಿಸಿತು. ಅಲ್ಪಕಾಲದಲ್ಲಿಯೇ ಈ ರಮಣಿಯನ್ನಗಲಿ ಹೋಗ ಬೇಕಾಗುವುದೆಂಬ ವಿಚಾರದಿಂದ ಆತನ ಮನಸ್ಸಿಗೆ ವ್ಯಥೆಯಾಗಹತ್ತಿತು. ಯಾವನು ಏಕಾಕಿಯಾಗಿದ್ದರೂ ಕರ್ತವ್ಯಪಾಲನಕ್ಕೋಸ್ಕರವಾಗಿ ಸಂಕಟವನ್ನು ಸಹ ಲೆಕ್ಕಿಸದೆ ಓಡಿ ಬಂದಿದ್ದನೋ ಅದೇ ಕರುಣಸಿಂಹನಿಗೆ ಈಗ ಕರ್ತವ್ಯದ ಸ್ಮರಣೆಯೇ ಇಲ್ಲ ದಾಯಿತು. ನಿಶಾದೇವಿಯು ತನ್ನ ಕೃಷ್ಟ ಕರಾಲವಾದ ಛಾಯೆಯಿಂದ ಮೆಲ್ಲ ಮೆಲ್ಲನೆ ಜಗ ಇನ್ನು ಗಭೀರವಾಗಿ ವ್ಯಾಪಿಸುತ್ತಿರುವುದು ಈಗ ನಮ್ಮ ತರುಣವೀರನಿಗೆ ಗೊತ್ತಾಯಿತು. ಆ ಪರ್ವತಪ್ರದೇಶದ ನೈಸರ್ಗಿಕವಾದ ಶ್ಯಾಮಲತೆಯು ಇಲ್ಲದಂತಾಗಿ ಕಪ್ಪು ಬಣ್ಣದ ತೆರೆಯು ಅದರ ಮೇಲೆ ಬೀಳತೊಡಗಿತು. ಕರುಣಸಿಂಹನು ಈಗ ಚಿಂತಾಮಗ್ನನಾದನು. ಆಗಲವನು ಪ್ರೇಮದ ಸರದಿಂದ ಆ ಸೀಯನು ಕುರಿತು ಮಾತನಾಡಿದನು. • ಸುಂದರೀ, ಕಷ್ಟಕರವಾದ ಈ ಗುಡ್ಡದ ದಾರಿಯಲ್ಲಿ ಮಾರ್ಗವನ್ನು ಕ್ರಮಿಸುವುದು ನಿನ್ನಿಂದ ಹೇಗೆ ಸಾಧ್ಯವೋ ನಾನರಿಯೆನು ! ಆದುದರಿಂದ ನನ್ನ ಕೈಯನ್ನು ಹಿಡಿ. ಸಮೀಪದಲ್ಲಿಯೇ ನನ್ನ ಕುದುರೆಯನ್ನು ಕಟ್ಟಿದ್ದೇನೆ; ಅಲ್ಲಿಯವರೆಗೆ ಹೋಗುವ, ” ಇನ್ನಾವುದಾದರೂ ಸಂದರ್ಭವಿದ್ದರೆ ಆ ತರುಣಿಯು ಪರಪುರುಷನ ಹಸ್ತವನ್ನು ಹಿಡಿಯಲು ಒಡಂಬಡುತ್ತಿದ್ದಿಲ್ಲ. ಆದರೆ ಈಗ ಗತ್ಯಂತರವೇ ಇದ್ದಿಲ್ಲ. ಗುಡ್ಡಗಾಡಿನ ದಾರಿಯು ಅತ್ಯಂತ ಕಷ್ಟಕರವಾಗಿತ್ತು; ಸಾಲದುದಕ್ಕೆ ಸಂಧ್ಯಾಕಾಲವಾಗಿ ಅಂಧಕಾ ರವು ಎಲ್ಲೆಡೆಯಲ್ಲಿಯೂ ಪಸರಿಸುತ್ತಿತ್ತು. ಅದರಲ್ಲಿಯೂ ಶತ್ರುಗಳು ಬಂದು ಯಾವಕಾ ಲಕ್ಕೆ ತೊಂದರೆ ಕೊಡುವರೋ ಎಂಬ ಅಂಜಿಕೆ, ಆದುದರಿಂದ ಅವಳು ಕರುಣಸಿಂಹನ ಕೈಯನ್ನು ಹಿಡಿದಳು. ಇಬ್ಬರೂ ಒಳ್ಳೇ ಜಾಗರೂಕತೆಯಿಂದ ನಡೆಯಹತ್ತಿದರು. ದಾರಿಯು ಮೊದಲೇ ಸಂಕುಚಿತವಾಗಿತ್ತು; ಅದರಲ್ಲಿಯೂ ಕಲ್ಲು-ಬಂಡೆಗಳೂ ತಗ್ಗು-ಮಿಟ್ಟಿಗಳೂ ಎಲ್ಲೆಡೆಯಲ್ಲಿಯೂ ತುಂಬಿದ್ದುವು. ಎರಡೂ ಪಕ್ಕಗಳಲ್ಲಿ ಎತ್ತರವಾದ ಗುಡ್ಡದ ತುದಿಗಳು ನಿಂತಿದ್ದುವು. ನಾಲ್ಕೂ ಕಡೆಗಳಲ್ಲಿಯೂ ಶ್ಯಾಮಲಪತ್ರಗಳಿಂದ ಆಚ್ಛಾ ದಿತವಾದ ಚಿಕ್ಕ-ದೊಡ್ಡ ಸಾಸಿರಾರು ವೃಕ್ಷಗಳಿದ್ದುವು. ಎಲ್ಲೆಡೆಯಲ್ಲಿಯೂ ನಿಸ್ತಬ್ಧತೆ. ಅಸ್ತಗಾಮಿಯಾದ ಸೂರ್ಯನ ಆರಕ್ತ ಕಿರಣಗಳು ಮಲಿನವಾಗಿದ್ದುವು. ಈ ಮೇಲೆ ಹೇಳಿದಂತೆ ಅವರಿಬ್ಬರೂ ಮೆಲ್ಲ ಮೆಲ್ಲನೆ ಹೋಗುತ್ತಿರಲು, ಗುಡ್ಡದೊಳ ಗಿನ ಒಂದು ಗುಹೆಯಿಂದ ಎಂಟು ಹತ್ತು ಜನರು ಹೊರಬಿದ್ದು ಅವರ ದಾರಿಗೆ ಅಡ್ಡ ಬಂದರು. ಎಂಟು ಹತ್ತು ತೀಕ್ಷವಾದ ನಗ್ನ ಖಡ್ಡಗಳು ಸಾಯಂಕಾಲದ ಕ್ಷೀಣವಾದ