ಪುಟ:ಪ್ರೇಮ ಮಂದಿರ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ. 24 ,, ,, , , , , , 4 # #Y * * * * * * *

  • : - vv * * * * * * *
    • * * * * *

ಕತ್ತಲೆಯಲ್ಲಿ ಹೊಳೆಯಹತ್ತಿದುವು! ಕರುಣಸಿಂಹನು ಒಬ್ಬನೇ; ಅದರಲ್ಲಿಯೂ ಅನಾಥ ಳಾದ ಅಬಲೆಯೊಬ್ಬಳು ಆತನ ಆಶ್ರಯದಲ್ಲಿದ್ದಳು. ಬಂದಂತಹ ಆ ಜನರು ಇವರಿಬ್ಬರ ಮೇಲೆಯೂ ಸಾಗಿಬಂದರು. ಆ ಸ್ತ್ರೀಯನ್ನು ತನ್ನ ಬೆನ್ನ ಹಿಂದೆ, ತೆಗೆದುಕೊಂಡು, ವಿಷ ಧ್ವಂಜಕನಾದ ಪರಮೇಶ್ವರನನ್ನು ಸ್ಮರಿಸಿ ಕರುಣಸಿಂಹನು ಕತ್ತಿಯನ್ನು ಒರೆಯಿಂದ ಹಿರಿ ದನು. ಮತ್ತು ಎದುರಾಳಿಗಳನ್ನು ಪ್ರತಿಭಟಿಸಿ ನಿಂತನು. ತನ್ನ ಮೇಲೆ ನಾಗಿಬಂದಿರುವ ಸಮೂಹದಲ್ಲಿ ಮೊದಲು ಮೋಸಗಾರಿಕೆಯಿಂದ ಓಡಿಹೋದ ಚಂದ್ರಾವತನೂ ಸೇರಿರುವುದು ಕರುಣಸಿಂಹನ ಕಣ್ಣಿಗೆ ಬಿತ್ತು. ಆದುದ ರಿಂದ ಆ ನೀಚನೇ ಈ ಸಂಕಟವನ್ನು ತನಗೆ ಉಂಟುಮಾಡಿರಲಿಕ್ಕೆ ಬೇಕೆಂದು ಅವನು ಊಹಿಸಿದನು. ಕರುಣಸಿಂಹನು ಕತ್ತಿಯ ಒಂದೇ ಒಂದು ಹೊಡತದಿಂದ ಮೊಟ್ಟಮೊ ದಲು ಆತನ ತಲೆಯನ್ನು ಮುಂಡದಿಂದ ಬೇರೆ ಮಾಡಿದನು. ಉಳಿದವರೆಲ್ಲರೂ ಒಳ್ಳೆ ಆವೇಶದಿಂದ ಆತನ ಮೇಲೆ ಕೈಮಾಡಿದರು. ಕರುಣಸಿಂಹನು ಅತ್ಯಂತ ಚಾತುರ್ಯ ದಿಂದ ಅವರೆಲ್ಲರ ಮೇಲೂ ತನ್ನ ಖಡ್ಗವನ್ನು ನಡೆಯಿಸುತ್ತಿದ್ದನು ! ಆದರೆ ಏಳೆಂಟು ಜನರ ಮುಂದೆ ಒಬ್ಬನ ಆಟವು ಎಷ್ಟು ಹೊತ್ತಿನವರೆಗೆ ನಡೆಯಬೇಕು ? ಹಾಯ ! ಕರುಣ ಸಿಂಹನು ಅಸಹಾಯನಾಗಿ ಬಿದ್ದು ಕೊಂಡನು. ನಮ್ಮ ಶಿಪಾಯಿಯು ಈ ಪ್ರಕಾರ ಸಂಕಟಕ್ಕೆ ಒಳಗಾಗಿರಲು, ಮೇಲ್ಗಡೆಯ ಪರ್ವತಪ್ರದೇಶದಲ್ಲಿ ಬೇರೊಂದು ಸಂಗತಿಯು ನಡೆದಿತ್ತು. ಐವತ್ತು ಜನ ಸೈನಿಕರ ಒಂದು ಪದಕದೊಡನೆ ಒಬ್ಬ ವೀರಪುರುಷನು ಸರ್ವತದ ತಟದಿಂದ ಕೆಳಗೆ ಇಳಿಯುತ್ತಿದ್ದನು, ಕೆಳಗಡೆಯಲ್ಲಿ ಜರುಗುತ್ತಿದ್ದ ಪ್ರಕಾರವನ್ನು ಆತನು ಮೇಲಿಂದಲೇ ನೋಡಿದನು. ಕy ಲೆಯು ಈಗ ಹೆಚ್ಚಾಗಿದ್ದುದರಿಂದ ಗುಡ್ಡದಿಂದ ಕೆಳಗೆ ಇಳಿಯುವುದಕ್ಕೆ ಸ್ವಲ್ಪ ತೊಂದ ರೆಯಾಗುತ್ತಿತ್ತು. ಆತನು ಗಂಭೀರಸ್ವರದಿಂದ ತನ್ನ ಅನುಯಾಯಿಗಳಿಗೆ ಅಪ್ಪಣೆ ಮಾಡಿ ದನು. “ ನಿಮ್ಮೊಳಗಿಂದ ಸುಮಾರು ಹದಿನೈದು ಇಪ್ಪತ್ತು ಜನರು ಈಗಲೇ ಕೆಳಗೆ ಇಳಿದು ಹೋಗಿ ಆತನನ್ನು ಸಂರಕ್ಷಿಸಿರಿ, ” ಅಲ್ಪಾವಕಾಶದಲ್ಲಿಯೇ ಆ ಪ್ರದೇಶವೆಲ್ಲ ( ಅಲ್ಲಾ ಹೋ ಅಕಬರ ! ಎಂಬ ಪ್ರಚಂಡವಾದ ಕೂಗಾಟದಿಂದ ಪ್ರತಿಧ್ವನಿತವಾಯಿತು. ಇದೇ ಸಂಧಿಯಲ್ಲಿ ಕರುಣ ಸಿಂಹನು ಮನಸ್ಸಿನಲ್ಲಿಯೇ ಪರಮೇಶ್ವರನಿಗೆ ಧನ್ಯವಾದಗಳನ್ನು ಕೊಡುತ್ತ ಮತ್ತೆ ಇಬ್ಬರು ಪ್ರತಿಸ್ಪರ್ಧಿಗಳನ್ನು ತುಂಡರಿಸಿದನು. ತಮಗಿಂತಲೂ ದೊಡ್ಡದಾದ ಮೊಗಲ ಸೈನ್ಯವನ್ನು ನೋಡಿ ಕರುಣಸಿಂಹನೊಡನೆ ಕಾದಾಡುತ್ತಿದ್ದವರು ಓಡಿ ಹೋಗುವುದಕ್ಕೆ ಪ್ರಯತ್ನ ಮಾಡಹತ್ತಿದರು. ಆದರೆ ಹಾಗೆ ಓಡಿಹೋಗಲು ಈಗ ಅವರು ಮೊದಲಿನಷ್ಟು ಸ್ವತಂತ್ರರಿದ್ದಿಲ್ಲ; ಅವರೊಳಗಿನ ಕೆಲವರು ಗಾಯಪಟ್ಟವರಾಗಿ ಬಿದ್ದು ಕೊಂಡಿದ್ದರು. ಅವರ ರಕ್ತದಿಂದ ಆ ಗುಹೆಯು ಕೆಂಪಗಾಗಿತ್ತು.