ಪುಟ:ಪ್ರೇಮ ಮಂದಿರ.djvu/೧೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇ . ಪಾಗ್ಯೂಷಣ. ) * ಸುಂದರವಾದ ಮೈಕಟ್ಟಿನ ಒಬ್ಬ ಸೌಮ್ಯಾಕೃತಿಯ ಪುರುಷನು ಕರುಣಸಿಂಹನ ಮುಂದೆ ಬಂದು ನಿಂತನು. ಮತ್ತು ತನ್ನ ಅನುಯಾಯಿಗಳನ್ನು ಕುರಿತು ಹೀಗೆ ಹೇಳಿ ದನು. ವೀರರೇ, ಶಾಂತರಾಗಿರಿ. ಇನ್ನು ರಕ್ತಪಾತವನ್ನುಂಟು ಮಾಡುವ ಕಾರಣ ವಿಲ್ಲ. ಗುಡ್ಡದೊಳಗಿನ ಇಲಿಗಳಂತಿರುವ ಇವರನ್ನು ಸೆರೆ ಹಿಡಿಯಿರಿ, ” ಇದಕ್ಕಿಂತ ಸ್ವಲ್ಪ ಹೊತ್ತು ಮುಂಚಿತವಾಗಿಯೇ ನಮ್ಮ ರಜಪೂತ ವೀರನ ಹೆಗಲ ಮೇಲೊಂದು ಬಲವಾದ ಪೆಟ್ಟು ತಗಲಿತ್ತು. ಅದರೊಳಗಿಂದ ನೆತ್ತರವು ಪುಟಿಯ ಹತ್ತಿ ದುದರಿಂದ ಆತನು ಕ್ವಾಂತನಾಗಿದ್ದನು. ಹಿಂದಿನಿಂದ ಬಂದ ಆ ವೀರಪುರುಷನು ತನ್ನ ಬಹುಮಲ್ಯವಾದ ಉತ್ತರೀಯ ವಸ್ತದಿಂದ ಕರುಣಸಿಂಹನ ಗಾಯವನ್ನು ತಾನೇ ಕಟ್ಟಿದನು. ಆ ಮೇಲೆ ಪ್ರೇಮಲ ಸ್ವರದಿಂದ ಮಾತನಾಡಿದನು. (( ಕರುಣಾ, ಏಟು ಬಲ ವಾಗಿ ತಾಗಿದಂತೆ ತೋರುತ್ತದೆ. ನಿನ್ನನ್ನು ಈ ಕಡೆಗೆ ಒಬ್ಬನನ್ನೇ ಕಳಿಸಿದುದು ನನ್ನ ಮನಸ್ಸಿಗೆಕೋ ನೆಟ್ಟಗೆನಿಸಲಿಲ್ಲ. ಆದುದರಿಂದ ನಾನೂ ನಿನ್ನ ಬೆನ್ನ ಹಿಂದಿಂದೆಯೇ ಬಂದೆನು. ನಿನ್ನ ಕುದುರೆಯನ್ನು ನೋಡಿದ ಮೇಲೆ ನಮಗೆ ದಾರಿಯು ಗೊತ್ತಾಯಿತು. ಕರುಣಾ, ಸಮಯಕ್ಕೆ ಸರಿಯಾಗಿ ನಾನು ಈ ಹೊತ್ತು ಬರದೆ ಹೋದ ಪಕ್ಷದಲ್ಲಿ ನಿನ್ನ ನ್ನು ಕಳೆದುಕೊಂಡು ಕೂಡಬೇಕಾಗುತ್ತಿತ್ತು. ಕರುಣಸಿಂಹನು ಕೃತಜ್ಞತೆಯ ಸ್ವರದಿಂದ ಮಾತನಾಡಿದನು. (( ಜಹಾಪನಾಹ, ಈಶ್ವರನು ತಮಗೆ ಮಂಗಲವನ್ನುಂಟು ಮಾಡಲಿ. ತಾವು ಹೀಗೆ ಪ್ರೇಮಪೂರ್ವಕವಾಗಿ ದಯ ತೋರಿಸಿದುದನ್ನು ನಾನು ಜನ್ಮ ಜನ್ಮಾಂತರಗಳಲ್ಲಿಯೂ ಮರೆಯಲಾರೆನು. ” ಆ ಎರಡನೆಯ ನೀರನು ವೃಕ್ಷದ ಹಿಂದುಗಡೆಯಲ್ಲಿ ನಿಂತುಕೊಂಡಿರುವ ಆ ತರು ಣಿಯನ್ನು ಇನ್ನೂ ವರೆಗೆ ನೋಡಿದ್ದಿಲ್ಲ. ಈಗ ಅಕಸ್ಮಾತ್ತಾಗಿ ಅವಳನ್ನು ಕಂಡನು. ಕೂಡಲೇ ಆಶ್ಚರ್ಯದಿಂದ ಕರುಣಸಿಂಹನನ್ನು ಕುರಿತು ಪ್ರಶ್ನೆ ಮಾಡಿದನು. “ ಕರುಣಾ, ಈ ತರುಣಿಯು ಯಾರು? ಕರುಣಸಿಂಹನು ಇಷ್ಟು ಹೊತ್ತಿನವರೆಗೆ ನಡೆದಿದ್ದ ಸಮಾಚಾರವನ್ನೆಲ್ಲ ಸವಿಸ್ತಾರ ವಾಗಿ ಆತನಿಗೆ ಹೇಳಿದನು. ಆಗಲಾ ವೀರನು ತನ್ನ ಸೇನೆಯೊಳಗಿನ ಒಬ್ಬ ಹಿಂದೂ ಸೈನಿಕನನ್ನು ಕರೆದು ಹೀಗೆ ಹೇಳಿದನು. “ ನೀನು ಕರುಣನನ್ನೂ ಈ ಹೆಣ್ಣು ಮಗಳನ್ನೂ ಕರೆದುಕೊಂಡು ಆ ಹಿಂದಯೋಗಿಯ ಗುಡಿಸಲಕ್ಕೆ ಹೋಗು. ನಾನು ನಿಮ್ಮ ಹಿಂದಿ ನಿಂದಲೇ ಬರುತ್ತೇನೆ. ” - ಆತನ ಅಪ್ಪಣೆಯಂತೆ ಸರ್ವ ವ್ಯವಸ್ಥೆಯ ಮಾಡಲ್ಪಟ್ಟಿತು. ವಾಚಕರೇ ಆ ಎರ ಡನೆಯ ನೀರನು ಮತ್ತಾರೂ ಅಲ್ಲ.-ಅಕಬರ ಬಾದಶಹನು? ಕರುಣಸಿಂಹನು ಆತನ ನೂತನ ಸೇನಾಪತಿಯು || ಒು ಏa