ಪ್ರೇಮಮಂದಿರ J/+++++++++ ೯ ಮುಕ್ಕಾವಲಿಯ ದಂಡೆಯ ಮೇಲೆ ಕರುಣಸಿಂಹನ ವಿಶ್ವಾಸುವಾದ ಸೇವಕನು, ಆತನ ಮಾರ್ಗವನ್ನೇ ಪ್ರತೀಕ್ಷಿಸುತ್ತ ಕುಳಿತುಕೊಂಡಿದ್ದನು. ಕರುಣಸಿಂಹನು ಅವನನ್ನು ಕುರಿತು ಮಾತನಾಡಿದನು. • ಸುಂದರಾ, ಏಕೆ ? ನೌಕೆಯನ್ನು ತೆಗೆದುಕೊಂಡು ಬಾ ” ನೌಕೆಯು ಬಂದೊಡನೆಯೇ ಅದರಲ್ಲಿ ಕುಳಿತು ಕರುಣಸಿಂಹನು ಹೊರಟು ಹೋದನು. ಕರುಣಸಿಂಹನು ಹೊರಟು ಹೋದಬಳಿಕ ಲಲಿತೆಯು ವಿಷಣ್ಣ ಹೃದಯದಿಂದ ಇತ್ಯಲತ್ತ ಸುತ್ತಲಾರಂಭಿಸಿದಳು. ಕರುಣಸಿಂಹನು, ಹೋದ ದಾರಿಯನ್ನು ನಿರೀಕ್ಷಿಸಬೇ ಕೆಂದು ಅತ್ತ ಕಡೆಗೆ ಮೊಗದಿರುವಿ ನಿಂತುಕೊಂಡಳು. ಇಷ್ಟರಲ್ಲಿ ಕತ್ತಲೆಯಲ್ಲಿ ಮಾರ್ಗ ವನ್ನು ಹುಡುಕುತ್ತ ಯಾರೋ ತನ್ನ ಕಡೆಗೇ ಬರುತ್ತಿರುವದು ಅವಳ ದೃಷ್ಟಿಗೆ ಬಿತ್ತು ! ಆ ಮೂರ್ತಿಯನ್ನು ನೋಡಿ ರಾಜಕನ್ಯಯು ಬೆರಗಾದಳು; ಆದರೆ ಬೆದರಲಿಲ್ಲ. ಅಂಧಕಾರಪರಿವೃತವಾದ ಆ ಅಜ್ಞಾತಮೂರ್ತಿಯು ಇನ್ನೂ ಸ್ವಲ್ಪ ಅಂತರದಲ್ಲಿರುವಾಗಲೇ ಲಲಿತೆಯು ಆಶ್ಚರ್ಯಪ್ರದರ್ಶಕಸ್ವರದಿಂದ ನುಡಿದಳು. “ ಯಾರವರು.? ನೀನು ಯಾರು, ಹೇಳು ?” ಎದುರಿನಲ್ಲಿ ಬರುತ್ತಿರುವ ' ಆ ಮೂರ್ತಿಯು ಲಲಿತೆಯ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ. ಮೆಲ್ಲಮೆಲ್ಲನೆ ನಡೆಯುತ್ತ ಸಮಸಮೀಪಕ್ಕೆ ಬರುತ್ತಿತ್ತು, ಆ ಅಂಧಕಾರದಲ್ಲಿ ಚಮತ್ಕಾರಿಕವಾದ ಒಂದು ಹಾಸ್ಯಧ್ವನಿಯು ಅಕಸ್ಮಾತ್ತಾಗಿ ಲಲಿತೆಗೆ ಕೇಳಿಸಿತು. ಈಗ ಮಾತ್ರ ಅವಳು ಹೆದರಿದಳು. ಅಂಧಕಾರವೇಷ್ಟಿತವಾದ ಆ ಮೂರ್ತಿಯನ್ನವಲೋಕಿಸಿ ಲಲಿತೆಯ ಹೃದಯವು ಕಂಪಿತವಾಯಿತು. ನೋಡನೋಡುವಷ್ಟರಲ್ಲಿ ಆ ಮೂರ್ತಿಯು ಲಲಿತೆಯ ಸಮೀಪದಲ್ಲಿ ಬಂದು ನಿಂತಿತು. ಇಷ್ಟೇ ಅಲ್ಲ; ಇನ್ನೂ ಸಮೀಪಕ್ಕೆ ಬಂದು ಲಲಿತೆಯ ಕೈಯನ್ನು ಹಿಡಿದು ಮೃದು ಸ್ವರದಿಂದ ಮಾತನಾಡಿತು. ರಾಜಕನ್ಯಯೋ, ಸ್ವಲ್ಪವೂ ಹೆದರಬೇಡ; ನಾನೂ ನಿನ್ನಂತೆ ಯೇ ಒಬ್ಬ ಹೆಂಗಸು, ” ಆ ಮೂರ್ತಿಯು ತನ್ನ ಕೈಯನ್ನು ಹಿಡಿದಿದ್ದರೂ ಲಲಿತೆಯು ಚೀರಲಿಲ್ಲ. ಆಕೆಯು ಅಧೀರತೆಯಿಂದ ಆ ಸ್ತ್ರೀಯನ್ನು ವಿಚಾರಿಸಿದಳು. “ ನೀನು ಯಾರು? ನೀನು ಇಲ್ಲಿಗೆ ಹೇಗೆ ಬಂದೆಯೆಂಬದು ನನಗೆ ಬಹಳೇ ಆಶ್ಚರ್ಯವನ್ನುಂಟು ಮಾಡುತ್ತಿದೆ ! ನೀನು ಸ್ತ್ರೀಯೆಂದು ಹೇಳುತ್ತೀ; ಆದರೆ ನಿನ್ನ ಸಾಹಸವಾದರೋ ಅತ್ಯಂತ ವಿಲಕ್ಷಣವಾಗಿದೆ ! ಏನಮ್ಮ, ನಾನು ಏಕಾಂತದಲ್ಲಿದ್ದಾಗ ಈ ಪ್ರಕಾರ ನನ್ನ ಹತ್ತಿರ ಬರಲು ನಿನ್ನ ಉದ್ದೇಶವಾದರೂ ಏನು ? ”
ಪುಟ:ಪ್ರೇಮ ಮಂದಿರ.djvu/೩೨
ಗೋಚರ