ಪುಟ:ಪ್ರೇಮ ಮಂದಿರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ, •••••••••••, , .• • • • • ••••• ಆ ಅಜ್ಞಾತಸ್ತ್ರೀಮೂರ್ತಿಯು ಮತ್ತೊಮ್ಮೆ ಬೊಳನೊಳಗೆ ನಕ್ಕಿತು. ಅವಳ ಅರ್ಥ ಸೂಚಕವಾದ ಹಾಸ್ಯದಿಂದ ಲಲಿತೆಯ ಮನಸ್ಸಿನ ಮೇಲೆ ವಿಲಕ್ಷಣಪರಿಣಾಮವಾಯಿತು ! ಆಕೆಗೆ ಯಾವದೂ ತಿಳಿಯದಾಯಿತು !! - ಲಲಿತೆಯ ಮನಃಸ್ಥಿತಿಯನ್ನು ನೋಡಿ ಆ ಸ್ತ್ರೀಗೆ ಸೋಜಿಗವಾಯಿತು. ಆಕೆಯು ಪುನಃ ವಿಕಟಹಾಸ್ಯಮಾಡಿ ಮಾತಾಡಿದಳು. “ ರಾಜಕನೈಯೇ, ಸ್ವಲ್ಪವೂ ಹೆದರಬೇ ಡಮ್ಮಾ ! ಏನೇ, ನಾನೇನು ಹುಲಿಯೋ ಕರಡಿಯೋ ! ಇಷ್ಟೇಕೆ ಹೆದರಿಕೊಂಡಿರುವೆ ? ಮೇಲಾಗಿ ನಾನೇನು ನಿನ್ನ ಶತ್ರುವೂ ಅಲ್ಲ; ಆದುದರಿಂದ ನಿನಗೆ ಅಪಾಯವನ್ನುಂಟುಮಾ ಡುವುದಕ್ಕೂ ಕಾರಣವಿಲ್ಲ.” ಇದನ್ನು ಕೇಳಿ ಲಲಿತೆಯ ಮನಸ್ಸಿನ ಸ್ಥಿತಿಯು ಇನ್ನೂ ವಿಲಕ್ಷಣವಾಯಿತು ? ತಾನು ನನ್ನ ಶತ್ರುವಲ್ಲವಂತೆ; ಆದರೂ ಇನ್ನೂ ವರೆಗೆ ತನ್ನ ಪರಿಚಯವನ್ನೇ ಹೇಳಲಿಲ್ಲ; ಅಂದಮೇಲೆ ಇವಳು ಯಾರಿರಬಹುದೆಂಬದು ಅವಳಿಗೆ ತಿಳಿಯದಾಯಿತು ! ಆ ಅಜ್ಞಾತಸ್ತ್ರೀಯು ಮತ್ತೆ ಮಾತನಾಡಿದಳು. “ ರಾಜಕನೆಯೇ, ನಾನು ನಿನ ಗೊಂದು ಪ್ರಶ್ನೆ ಮಾಡುತ್ತೇನೆ. ನನ್ನನ್ನು ಕ್ಷಮಿಸು. ನೀನು ನೋಡುವುದಕ್ಕೇನೋ ಚದುರೆ ಯಂತೆ ತೋರು, ಆದರೆ ನಿಜವಾಗಿಯೂ ಹೇಳು-ನಿನಗೆ ಪ್ರೇಮದ ಮರ್ಮವು ಗೊತ್ತಾಗಿದೆಯೇ? ” - ಈ ಪ್ರಶ್ನೆಯನ್ನು ಶ್ರವಣಮಾಡಿ ಲಲಿತೆಗೆ ಅತ್ಯಂತ ಆಶ್ಚರ್ಯವಾಯಿತು. ಗುರುತ್ತಿಲ್ಲ, ಪರಿಚಯವಿಲ್ಲ ಒಬ್ಬರನ್ನೊಬ್ಬರು ಇದಕ್ಕೂ ಮೊದಲು ಒಮ್ಮೆ ಸಹ ನೋಡಿಲ್ಲ, ಹೀಗಿ ದ್ದರೂ ಈ ಸ್ತ್ರೀಯು ಆಕಸ್ಮಿಕವಾಗಿ ಪ್ರೇಮವಿಷಯಕ ಪ್ರಶ್ನೆಯನ್ನೇ ಮಾಡುತ್ತಾಳಲ್ಲ ! ಇದರ ಅರ್ಥವೇನು ? ಈಪ್ರಕಾರ ಮನಸ್ಸಿನಲ್ಲಿಯೇ ದಿಗಿಲುಬಡುತ್ತ ಆಶ್ಚರ್ಯ ಪ್ರದರ್ಶಕ ಸ್ವರದಿಂದ ಲಲಿತೆಯು ಮಾತನಾಡಿದಳು. “ ನೀನು ಯಾವಳಾದರೂ ಇರು, ನಿನ್ನ ಈ ದಿಟ್ಟತನವನ್ನು ಕಂಡು ನನಗೆ ಬಹಳೇ ಆಶ್ಚರ್ಯವಾಗುತ್ತದೆ. ನಾನು ಯಾರೆಂಬದು ಒಂದುವೇಳೆ ನಿನಗೆ ತಿಳಿದಿದ್ದರೂ ನೀನು ಯಾರೆಂಬದು ನನಗೆ ಗೊತ್ತಿಲ್ಲ. ನಿನಗೂ ನನಗೂ ಗುರುತಿಲ್ಲ, ಪರಿಚಯವಿಲ್ಲ; ಹೀಗಿದ್ದು ಆಕಸ್ಮಿಕವಾಗಿ ನೀನು ಇಂತಹ ಪ್ರಶ್ನೆಯನ್ನು ಕೇಳುತ್ತೀಯಲ್ಲ! ಇದರ ಅರ್ಥವೇನು ? ”

  • ಆಸ್ತಿಯು ಮುಗುಳಗೆಯನ್ನು ನಕ್ಕಳು. ಮತ್ತು ತನ್ನ ತುಟಿಯಮೇಲೆ ಕೈಬೆರಳನ್ನಿ ಟ್ಟುಕೊಂಡು ಮಾತಾಡಿದಳು. ನಿನನಗೂ 'ನನಗೂ ಪರಿಚಯವಿಲ್ಲದಿದ್ದರೇನಾಯಿತು? ಪ್ರೇಮದ ಮರ್ಮವನ್ನು ಕೂಡ ನಿನಗೆ ವಿಚಾರಿಸ ಕೂಡದೇ? ರಾಜಕಸ್ಯೆಯೇ, ನೀನು ಒಳ್ಳೆ ಚದುರೆಯೆಂದು ನಾನು ತಿಳಿದುಕೊಂಡಿದ್ದೆನು.

ದುರೆಯಾಗಿರಲಿಕ್ಕಿಲ್ಲ; ಆದರೆ ನೀನು ಆಕಸ್ಮಿಕವಾಗಿ ಬಂದು ಈ ವಿಲಕ್ಷಣವಾದ ಪ್ರಶ್ನೆಯನ್ನೇಕೆ ಕೇಳಬೇಕು? ”