ಪುಟ:ಪ್ರೇಮ ಮಂದಿರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ೩೬ Y Vy ' # /

  • • •v\vvvvvvvvvvvv vv vv

ದುರ್ಗದ ಉತ್ತರ ದಿಕ್ಕಿಗೆ ಕೆಲವು ಅಂತರದ ಮೇಲೆ ಮುಕ್ತಾವಲೀ ನದಿಯ ತೀರ ದಲ್ಲಿ ಶಾಂತವಾದೊಂದು ವೃಕ್ಷರಾಜೆಯ ಮಧ್ಯದಲ್ಲಿ ಕಲ್ಯಾಣೀದೇವಿಯ ಪಾಷಾಣ ನಿರ್ಮಿತವಾದ ಚಿಕ್ಕದೊಂದು ಸುಂದರ ಮಂದಿರವಿತ್ತು. ರಜಪೂತಸ್ಥಾನದೊಳಗಿನ ಚಂದ್ರಾವತರಿಗೂ, ಚವ್ಹಾಣರಿಗೂ ಕಲ್ಯಾಣೀದೇವಿಯು ಕುಲದೈವತವು. ಅವಳ ಉಪಾ ಸನೆಯಿಂದ ತಮ್ಮ ಕುಲಕ್ಕೂ ಗೃಹಕ್ಕೂ ಮಂಗಳವುಂಟಾಗುವುದೆಂದೂ, ಅವಳ ಆರಾಧ ನೆಯಿಂದಲೇ ತಮ್ಮ ಯೋಗಕ್ಷೇಮವೂ ನಡೆಯುವದೆಂದೂ ಎರಡೂ ಕುಲದವರು ಮನಃ ಪೂರ್ವಕವಾಗಿ ತಿಳಿದಿದ್ದರು. ವರುಷದೊಳಗಿನ ಕೆಲವು ನಿಯಮಿತ ದಿವಸಗಳಲ್ಲಿ ಸ್ವತಃ ದುರ್ಗಾಧಿಪತಿಯೇ ಕಲ್ಯಾಣೀಮಂದಿರಕ್ಕೆ ಬಂದು ಷೋಡಶೋಪಚಾರಗಳಿಂದ ದೇವ ತೆಯನ್ನು ಪೂಜಿಸುತ್ತಿದ್ದನು. ಜಳಕ ಮಾಡಿ ಬಿಳಿಯ ರೇಷಿಯ ಸೀರೆಯನ್ನುಟ್ಟು ಕೊಂಡು ಪೂಜಾಸಾಹಿತ್ಯದ ಳನ್ನು ತೆಗೆದುಕೊಂಡು ತನ್ನ ಮಂದಿರದಿಂದ ಹೊರಟ ರಾಜನಂದಿನಿಯಾದ ಲಲಿತೆಯು ಒಬ್ಬಳೇ ಈ ಕಲ್ಯಾಣೀದೇವಿಯ ಮಂದಿರಕ್ಕೆ ಬಂದಳು. ಅವಳ ಪರಿಜನರು ಸಂಗಡ ಬರುತ್ತೇವೆಂಬ ಇಚ್ಛೆಯನ್ನು ತೋರ್ಪಡಿಸಿದರೂ ಲಲಿತೆಯು ಒಬ್ಬಳನ್ನೂ ಕರೆದು ಕೊಂಡು ಬಂದಿದ್ದಿಲ್ಲ. ಮಂದಿರದಲ್ಲಿ ಬಂದೊಡನೆಯೇ ಲಲಿತೆಯು ದೇವಿಯ ಪಾದತಳದ ಹತ್ತಿರ ಕುಳಿ ತುಕೊಂಡಳು. ತಂದಂತಹ ಸಾಹಿತ್ಯದಿಂದ ಭಕ್ತಿಯುಕ್ತವಾದ ಮನಸ್ಸಿನಿಂದ ದೇವಿಯ ಪೂಜೆಯನ್ನು ಮಾಡಿ ಲಲಿತೆಯು ಎಷ್ಟೋ ಕಾಲದವರೆಗೆ ಕಣ್ಣು ಮುಚ್ಚಿಕೊಂಡು ದೇವಿಯ ಎದುರಿನಲ್ಲಿ ಕುಳಿತುಕೊಂಡಿದ್ದಳು. ಆ ಕಾಲದಲ್ಲಿ ಲಲಿತೆಯು ಸ್ತಿಮಿತವೂ ನಿಷ್ಪಂದವೂ ಆದ ನೇತ್ರಗಳಿಂದ ಎದುರಿನಲ್ಲಿದ್ದ ದೇವತೆಯನ್ನು ಬೇಡಿಕೊಳ್ಳುತ್ತಿರುವಾಗ ಸ್ಥಿರವೂ ನಿಶ್ಚಲವೂ ಆದ ಸ್ವರ್ಣ ಪ್ರತಿಮೆಯಂತೆ ಗೋಚರವಾಗುತ್ತಿದ್ದಳು! ಈ ಪ್ರಕಾರ ಮೂಕಪ್ರಾರ್ಥನೆಯಿಂದ ತನ್ನ ಮನಸ್ಸಿನೊಳಗಿನ ಅಭಿಪ್ರಾಯವನ್ನು ಕಲ್ಯಾಣೀದೇವಿಗೆ ತಿಳಿಸಿದ ಬಳಿಕ ಅವಳು ಕಮಲಸಮಾನವಾದ ತನ್ನ ನೇತ್ರಯುಗವನ್ನು ತೆರೆದಳು; ಮತ್ತು ಭಕ್ತಿಪೂರಿತವಾದ ನಿಶ್ಚಲ ದೃಷ್ಟಿಯಿಂದ ದೇವಿಯನ್ನು ನೋಡುತ್ತ ಆಕೆಗೆ ಸಾಷ್ಟಾಂಗ ಪ್ರಣಿಪಾತವನ್ನು ಮಾಡಿದಳು. ಆ ಮೇಲೆ ಲಲಿತೆಯು ಅಲ್ಲಿಂದ ಎದ್ದಳು. ಒಂದೆರಡು ಸಾರೆ ದೇವಿಯನ್ನು ಮತ್ತೆ ನೋಡಿ ಬಳಿಕ ಮಂದಿರದಿಂದ ಹೊರಬಿದ್ದಳು. ಮಂದಿರದಿಂದ ಸ್ವಲ್ಪ ಅಂತರದ ಮೇಲೆ ಪ್ರತಿಮ ದಿಕ್ಕಿನಲ್ಲಿ ಒಂದು ಚಿಕ್ಕದಾದ ಪರ್ಣಕುಟಿಯಿತ್ತು. ಲಲಿತೆಯು ಅಲ್ಲಿಗೆ ನಡೆ ದಳು. ಗುಡಿಸಲದ ಬಾಗಿಲವು ಮುಚ್ಚಲ್ಪಟ್ಟಿತ್ತು. ಲಲಿತೆಯು ಸ್ವಲ್ಪ ಹೊತ್ತಿನವರೆಗೆ ಯೋಚನೆ ಮಾಡಿ ತನ್ನ ಕೋಮಲವಾದ ಕರಾಂಗುಲಿಯಿಂದ ಬಾಗಿಲದ ಮೇಲೆ ಮೆಲ್ಲನೆ , 5