ಪುಟ:ಪ್ರೇಮ ಮಂದಿರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗೂ ಷಣ

ಸಹಾಯಾರ್ಥವಾಗಿ ನಿಂತುಕೊಂಡಿರುವ ಅಶ್ವತ್ಥ, ಶಾಲ, ತಮಾಲ ಮೊದಲಾದ ವೃಕ್ಷ ಗಳ ಪರ್ಣಸಮೂಹವು ಗಾಳಿಯ ಅಲೆಪದಿಂದ ಒಂದುತರದ ಶಬ್ದವನ್ನು ಮಾಡುತ್ತಿ ದ್ದುವು; ಅದರಿಂದ ಆ ವಿರಾಟ್‌ಶಾಂತತೆಯು ಅಲ್ಪಮಟ್ಟಿಗೆ ಭಂಗವನ್ನು ಹೊಂದುತ್ತಿತ್ತು? ಆದರೆ ಅದು ಒಂದು ನಿಮಿಷ ಮಾತ್ರ! ಶಾಂತತೆ ಮತ್ತು ಕತ್ತಲೆಗಳ ಸಾಮ್ರಾಜ್ಯವು ಮೇಲೆ ಹೇಳಿದಂತೆ ಎಲ್ಲೆಡೆಯಲ್ಲಿ ಯೂ ಪಸರಿಸಿತು. ಆದರೆ ಆ ಸಾಮ್ರಾಜ್ಯಗಳೆರಡೂ ಏಕತಂತ್ರಿಗಳಲ್ಲ. ಆಕಾಶದಲ್ಲಿ ಮಿನುಗುತ್ತಿರುವ ತಾರಕೆಗಳ ಅಲ್ಪಪ್ರಕಾಶವೂ, ವೃಕ್ಷಶಾಖೆಗಳಲ್ಲಿ ಪುಂಜಗಳನ್ನು ಕಟ್ಟಿ ಕೊಂಡು ವಾಸಮಾಡುತ್ತಲಿದ್ದ ಹೊನ್ನೆಯ ಹುಳದ ಕ್ಷುದ್ರವಾದ ಬೆಳಕೂ ಅಂಧಕಾರದ ಸಾಮ್ರಾಜ್ಯಕ್ಕೆ ಪ್ರತಿರೋಧಿಗಳಾಗಿ ಬಂಡಾಯವೆನ್ನೆಬ್ಬಿಸುತ್ತಿದ್ದುವು! ಅದರಂತೆಯೇ ಶಾಂತತೆಯ ಸಾಮ್ರಾಜ್ಯದ ಪ್ರತಿಸ್ಪರ್ಧಿಗಳೂ ಕೆಲವರಿದ್ದರು. ಗಗನಚುಂಬಿತವಾದ ವೃಕ್ಷರಾಜಿಯ ಸಾಂದ್ರವಾದ ಪಲ್ಲವಗಳನ್ನು ಆಶ್ರಯಸಿಕೊಂಡಿದ್ದ ಒಂದಾನೊಂದು ನಿಶಾ ಚರ ಪಕ್ಷಿಯು ನಡುನಡುವೆ ಕರ್ಕಶವಾದ ಧ್ವನಿಯಿಂದ ಕೂಗುತ್ತ ಆ ವಿರಾಟ್ ಶಾಂತತೆ ಯನ್ನು ಕಿಂಚಿದ್ಭಂಗಗೊಳಿಸುತ್ತಿತ್ತು! ಇಂತಹ ಗಭೀರವಾದ ರಾತ್ರಿಯಲ್ಲಿ ಶಾಂತವೂ ನಿಸ್ತಬ್ದವೂ ಆದ ಆ ವನದೊಳ ಗಿನ ಒಂದು ಕಾಲ್ದಾರಿಯಿಂದ ಒಬ್ಬ ತರುಣನು ಅತಿ ಕಷ್ಟದಿಂದ ತನ್ನ ಕುದುರೆಯನ್ನು ನಡೆಯಿಸುತ್ತ ಮಾರ್ಗವನ್ನು ಕ್ರಮಿಸುತ್ತಿದ್ದನು. ಅಂಧಕಾರವು ಅತಿಶಯವಾಗಿದ್ದುದ ರಿಂದ ನಡುನಡುವೆ ಆತನಿಗೆ ಬಹಳೇ ವಿಘ್ನ ವಾಗುತ್ತಿತ್ತು. ಒಂದೆರಡು ಮೊಳಗಳ ದೂರ ದಲ್ಲಿ ಕೂಡ ಏನಿದೆಯೆಂಬುದು ಆತನಿಗೆ ಕಾಣುತ್ತಿದ್ದಿಲ್ಲ! ಹಗಲಿನಲ್ಲಿ ಕಟ್ಟಿಗೆಯನ್ನು ಕಡಿಯುವುದಕ್ಕೆ ಬರುವ ಜನರ ತುಳಿದಾಟದಿಂದ ಉತ್ಪನ್ನವಾದ ಆ ಹಾದಿಯು ಅತ್ಯಂತ ವಕ್ರವಾಗಿತ್ತು; ಪ್ರತಿಕ್ಷಣಕ್ಕೂ ಒಂದಿಲ್ಲೊಂದು ಕಡೆಗೆ ಹೊರಳಬೇಕಾಗುತ್ತಿತ್ತು. ಆದು ದರಿಂದ ಆ ಕುದುರೆಯು ಮಾರ್ಗವನ್ನು ಕ್ರಮಿಸುವುದಕ್ಕೆ ಹೆಜ್ಜೆ ಹೆಜ್ಜೆಗೂ ಸಂದೇಹ ಬಡುತ್ತಿತ್ತು. ಆ ವನಮಾರ್ಗದ ಪರಿಚಯವು ಆ ತರುಣನಿಗೆ ಸ್ವಲ್ಪಮಟ್ಟಿಗೆ ಇದ್ದುದ ರಿಂದ ಅವನು ಇಷ್ಟಾದರೂ ವಾರ್ಗಕ್ರಮಣ ಮಾಡುತ್ತಿದ್ದನು. ಅದರಲ್ಲಿಯೂ ಆತನು ಅತ್ಯಂತ ಶೂರನಾಗಿದ್ದುದರಿಂದ ಇಂತಹ ಭಯಂಕರವಾದ ರಾತ್ರಿಯಲ್ಲಿ ಒಬ್ಬನೇ ಈ ಅರಣ್ಯದಲ್ಲಿ ಪ್ರವಾಸಮಾಡುತ್ತಿದ್ದನು. ಇನ್ನಾರಾದರೂ ಆಗಿದ್ದರೆ ಭಯಭೀತರಾಗಿ ಪ್ರಾಣವನ್ನೇ ಬಿಡುತ್ತಿದ್ದರು ! ಆತನ ಕುದುರೆಯು ಎಡವುತ್ತಲೂ ಮುಗ್ಗರಿಸುತ್ತಲೂ ನಡೆಯುತ್ತಿತ್ತು, ಆದರೆ ಅದು ಎಲ್ಲಿಯೂ ನಿಂತುಕೊಳ್ಳುತ್ತಿದ್ದಿಲ್ಲ. ಆದರೆ ಹೋಗ ಹೋಗುತ್ತ ಈಗ ಮಾತ್ರ ಒಂದು ಸ್ಥಳದಲ್ಲಿ ನಿಂತುಕೊಂಡಿತು. ಏನು ಮಾಡಿದರೂ ಅದು ಮುಂದಕ್ಕೆ ಹೆಜ್ಜೆಯನ್ನು ಇಡಲಿಲ್ಲ! ಆ ತರುಣನು ಸವಿಮಾತಿನಿಂದಲೂ, ಸಂಜ್ಞಾ ಶಬ್ದಗಳಿಂದೂ ಅದನ್ನು ಸಮುತ್ತೇಜಿಸಿದನು; ಆತನ ಯಾವ ಪ್ರಯತ್ನವೂ ಸಫಲವಾಗ