ಪ್ರೇಮಮಂದಿರ Y •••••••• • • • • ••••• > --- * • • • • • • • • • ••••••••••••••••• ವನ್ನೆಸಗಲು ಯಾವಾಗಲೂ ಸಮಯವನ್ನು ನಿರೀಕ್ಷಿಸುತ್ತಿದ್ದರು. ಆದುದರಿಂದ ತನ್ನ ಅಂಗ ಇಲ್ಲಿ ಯಾರಾದರೂ ಕಪಟ ಜಾಲವನ್ನು ಬೀರಿರುವರೋ ಎಂಬ ಶಂಕೆಯು ಭೀಮಸಿಂಹ ನಲ್ಲಿ ಉತ್ಪನ್ನವಾಯಿತು. ಭೀಮಸಿಂಹನು ಸರತಾನಸಿಂಹನನ್ನು ಕುರಿತು ಠಾಕುರರೇ, ಈ ಕುದುರೆಯು ಯಾರದಿರಬಹುದೆಂದು ನೀವು ತರ್ಕಿಸುತ್ತೀರಿ ? ” ಎಂದು ಕೇಳಿದನು. ಸರತಾನಸಿಂಹನೂ, ದುರ್ಜಯಸಿಂಹನೂ ಭೀಮಸಿಂಹನಂತೆಯೇ ಬೆರಗಾಗಿ ಹೋಗಿದ್ದರು. ಭೀಮಸಿಂಹನ ಪ್ರಶ್ನೆಗೆ ಅವರೇನು ಉತ್ತರವನ್ನು ಕೊಡಬೇಕು ? ( ಇದೊಳ್ಳೆ ಆಶ್ಚರ್ಯಕರವಾಗಿದೆ ! ” ಎಂದು ಸರತಾನಸಿಂಹನು ನುಡಿದನು. ಭೀಮಸಿಂಹನು ಗಂಭೀರಸ್ವರದಿಂದ ಮಾತನಾಡಿದನು. “ ಹೌದು. ನಿಜವಾ ಗಿಯೂ ಇದು ಅತ್ಯಂತ ಆಶ್ಚರ್ಯಕರ ! ಇಂತಹ ಕಾಲದಲ್ಲಿ ಇದನ್ನು ಇಲ್ಲಿ ಯಾರು ಕಟ್ಟಿರಬಹುದು ? >> ಇಷ್ಟರಲ್ಲಿ ಆ ನಿರ್ಜನ ವನ ಪ್ರದೇಶದಲ್ಲಿ ಕೋಮಲವಾದ ಹಾಸ್ಯಮಿಶ್ರಿತ ಕಂಠ ಧ್ವನಿಯೊಂದು ಹೊರಟಿತು. ಸಮೀಪದ ಗಿಡಗುಂಪಿನೊಳಗಿಂದ ಯಾರೋ ಮೆಲ್ಲನೆ ಮಾತನಾಡಿದರು. (( ನಾನು ನಿಮಗೆ ಎಲ್ಲವನ್ನೂ ಹೇಳುತ್ತೇನೆ. ೨ ಈ ಕಂಠಧ್ವನಿಯನ್ನು ಕೇಳಿ ಸರ್ವರೂ ಆಶ್ಚರ್ಯದಿಂದ ಸ್ತಂಭಿತರಾದರು. ಯಾವ ಗಿಡಗುಂಪಿನೊಳಗಿಂದ ಆ ಧ್ವನಿಯು ಹೊರಟಿತೋ, ಅತ್ತಕಡೆಗೆ ಎಲ್ಲರೂ ಉತ್ಕಂಠ ಯಿಂದ ನೋಡಹತ್ತಿದರು. ಗಿಡಗುಂಪಿನಲ್ಲಿ ಯಾವುದೋ ಒಂದು ವ್ಯಕ್ತಿಯು ನಿಂತು ಕೊಂಡಿರಬೇಕೆಂದು ಅವರು ತರ್ಕಿಸಿದರು. ಆದರೆ ಆ ವ್ಯಕ್ತಿಯು ಯಾರು ? ಅದರ ವೇಷ ವೆಂತಹುದು? ಈ ಸಂಗತಿಗಳ ಕಲ್ಪನೆಯೇ ಅವರಲ್ಲುಂಟಾಗಲಿಲ್ಲ ! ಭೀಮಸಿಂಹನು ಸರನೆ ತನ್ನ ಕತ್ತಿಯನ್ನು ಒರೆಯಿಂದ ಹಿರಿದನು, ಮತ್ತು ತಾನಿದ್ದ ಸ್ಥಳದಿಂದ ಒಂದೆರಡು ಹೆಜ್ಜೆ ಮುಂದಕ್ಕೆ ಹೋಗಿ ಆ ಅಸ್ಪಷ್ಟ ಮೂರ್ತಿಯನ್ನು ಕುರಿತು ಕರ್ಕಶಶ್ವರದಿಂದ ಮಾತನಾಡಿದನು. ಈ ಎಲೇ, ನೀನು ಯಾರು ಹೇಳು ? ” ಅಂಧಕಾರವೇಷ್ಟಿತವಾದ ಆ ಮೂರ್ತಿಯು ಭೀಮಸಿಂಹ ಅಬ್ಬರಣೆಯಿಂದ ಅಂಜು ವುದಕ್ಕೆ ಬದಲಾಗಿ ನಗನಗುತ್ತ ಮುಂದಕ್ಕೆ ಬಂತು. ಆದರೆ ಭೀಮಸಿಂಹನಿಗೆ ಉತ್ತರಾ ರ್ಥವಾಗಿ ಒಂದು ಶಬ್ದವನ್ನು ಕೂಡ ಅದು ನುಡಿಯಲಿಲ್ಲ. ಭೀಮಸಿಂಹನು ದ್ವೇಷದಿಂದ ಮತ್ತೆ ಇಂತೆಂದನು. ( ಹೇಳು. ಬೇಗ ಹೇಳು; ನೀನು ಯಾರು ? ಹೇಳದಿದ್ದರೆ ಇಲ್ಲಿಯೇ ನಿನ್ನನ್ನು ತುಂಡರಿಸಿ ಚೆಲ್ಲುತ್ತೇನೆ. ” ಆ ಮೂರ್ತಿಯು ಮೊಳಖೋಳನೆ ನಗುತ್ತ ಮಾತನಾಡಿತು. “ ದುರ್ಗಾಧಿಪತಿ
ಪುಟ:ಪ್ರೇಮ ಮಂದಿರ.djvu/೫೨
ಗೋಚರ