ಪುಟ:ಪ್ರೇಮ ಮಂದಿರ.djvu/೬೦

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ, ೫ • • • • • • • • • • • • • • • v• • • • • • •

  • * * * * * Y JYYw

ನಿಮ್ಮ ಕನೈಯ ಅನುಮತಿಯಿಂದಲೂ ಆಕೆಯ ವಿನಂತಿಯಿಂದಲೂ ನಾನು ಇಲ್ಲಿ ಬಂದಿದ್ದೇನೆ. ಈಗ ನಾನು ನಿಮಗೇ ವಿನಂತಿ ಮಾಡಿಕೊಳ್ಳುವುದೇನಂದರೆ-ನಿಮ್ಮ ಮಗಳನ್ನು ವಿವಾಹ ಮಾಡಿಕೊಳ್ಳಲು ನೀವು ಅನುಮತಿಯನ್ನು ಕೊಡಿರಿ, ” ಭೀಮಸಿಂಹನು ಕುಮಾರನ ಕಡೆಗೆ ನೋಡಿ ತುಚ್ಚತೆಯಿಂದ ನಕ್ಕು ಮಾತನಾಡಿ ದನು. ( ಚೋರನಂತೆ ದುರ್ಗದಲ್ಲಿ ಪ್ರವೇಶಿಸುವ ರಜಪೂತನಿಗೆ ನನ್ನ ಕನೈಯನ್ನು ವಿವಾಹ ಮಾಡಿಕೊಡಲು ನಾನು ಎಂದೂ ಒಪ್ಪಲಾರೆನು, ” (ಹಾಗಾದರೆ ನಾನೂ ಈಗ ಸ್ಪಷ್ಟವಾಗಿಯೇ ಹೇಳುತ್ತೇನೆ. ದೇವಧರ್ಮದ ಸಾಕ್ಷಿಯಿಂದ ಲಲಿತೆಯೊಡನೆ ನನ್ನ ವಿವಾಹವಾಗಿದೆ. ಅವಳು ನನ್ನ ವಿವಾಹಿತ ಧರ್ಮ ಪತ್ನಿಯಾಗಿದ್ದಾಳೆ. ೨೨ | ಭೀಮಸಿಂಹನ ಮುಖಚರ್ಯೆಯು ತತ್‌ಕ್ಷಣಕ್ಕೆ ಕಪ್ಪಾಯಿತು. ಆತನು ಕುಮಾ ರನೊಡನೆ ಏನನ್ನೂ ಮಾತನಾಡದೆ ಸರತಾನಸಿಂಹನನ್ನು ಕರೆದುಕೊಂಡು ಸಮೀಪದ ಕೋಣೆಯಲ್ಲಿ ಹೋದನು. ಅವರಿಬ್ಬರೂ ಕೆಲಹೊತ್ತಿನ ವರೆಗೆ ಅಲ್ಲಿ ಆಲೋಚನೆ ಮಾಡಿ ಬಳಿಕ ಮತ್ತೆ ಕರುಣಸಿಂಹನು ನಿಂತುಕೊಂಡಿದ್ದ ಕೋಣೆಗೆ ಬಂದರು. ತನ್ನ ಆಸನದ ಮೇಲೆ ಕುಳಿತುಕೊಂಡು ಭೀಮಸಿಂಹನು ಗಂಭೀರತೆಯಿಂದ ಕುಮಾರನನ್ನು ಕುರಿತು ಮಾತನಾಡಿದನು. ( ಕುಮಾರ, ತಾವು ಪ್ರಸಿದ್ದವಾದ ಕುಲ ದಲ್ಲಿ ಹುಟ್ಟಿದ ರಜಪೂತರು. ನಿಜವಾದ ರಜಪೂತರು ಕುಲಾಚಾರಗಳನ್ನು ಪಾಲಿಸುವು ದರಲ್ಲಿ ಎಷ್ಟು ತತ್ಪರರಾಗಿರುತ್ತಾರೆಂಬುದನ್ನು ತಮಗೇನೂ ಹೇಳಬೇಕಾದುದಿಲ್ಲ. ತಾವು ಅಗ್ನಿ ಬ್ರಾಹ್ಮಣರ ಸಮಕ್ಷದಲ್ಲಿ ಲಲಿತೆಯೊಡನೆ ವಿವಾಹ ಮಾಡಿಕೊಳ್ಳುವ ಮೊದಲು ನಮ್ಮ ಕುಲಾಚಾರಗಳೆಲ್ಲವನ್ನೂ ನೀವು ಪಾಲಿಸಲಿಕ್ಕೆ ಬೇಕು. ” < ಆಗಲಿ, ಅವೆಲ್ಲವುಗಳನ್ನೂ ನಾನು ಅವಶ್ಯವಾಗಿ ಪಾಲಿಸುವೆನು. ” 4 ಹಾಗಾದರೆ ಕೇಳಿರಿ, ದುರ್ಗದ ಬಡಗಣ ದಿಕ್ಕಿನಲ್ಲಿ ಎತ್ತರವಾದ ಆ ಬೆಟ್ಟದ ಶಿಖರದ ಮೇಲೊಂದು ಚಿಕ್ಕ ಮಂದಿರವಿದೆ. ಅದಕ್ಕೆ ಪ್ರಮೋದ ಭವನ' ವೆಂದು ಹೆಸರು. ಆ ಪ್ರಮೋದಭವನದಲ್ಲಿಯೇ ನಮ್ಮ ಕುಲದ ಹುಡುಗ ಹುಡಿಗೆಯರ ವಿವಾಹ ವನ್ನು ಮಾಡುತ್ತೇವೆ. ಇಂದು ವಿವಾಹಕ್ಕೆ ಶುಭಮುಹೂರ್ತವಿದೆ. ಇಂದಿನ ದಿವಸವೆಲ್ಲ ನೀವು ಉಪವಾಸದಿಂದಲೇ ಇರಬೇಕು. ಒಂದು ಗುಟುಕು ನೀರನ್ನೂ ಕೂಡ ಬಾಯಲ್ಲಿ ಹಾಕಿಕೊಳ್ಳಕೂಡದು. ಸೂರ್ಯಾಸ್ತಕ್ಕೆ ಇನ್ನು ಒಂದೆರಡು ಗಳಿಗೆಯ ಅವಕಾಶವಿರು ವಾಗ ಲಲಿತೆಯನ್ನು ಎತ್ತಿಕೊಂಡು ಮಧ್ಯದಲ್ಲಿ ಒಂದು ಕ್ಷಣವಾದರೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಪರ್ವತಮಾರ್ಗದಿಂದ ಪ್ರಮೋದಭವನಕ್ಕೆ ಬಂದು ಮುಟ್ಟಬೇಕು. ನಮ್ಮ ವಂಶದಲ್ಲಿ ಪರಮಪವಿತ್ರವಾದ ಇದೊಂದು ಆಚಾರವು ಪರಂಪರೆಯಿಂದ ನಡೆದು ಬಂದಿದೆ. ಪ್ರತಿಯೊಂದು ವಿವಾಹದಲ್ಲಿಯೂ ವರನು ಈ ಆಚಾರವನ್ನು ಅವಶ್ಯವಾಗಿ