ಪುಟ:ಪ್ರೇಮ ಮಂದಿರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144f " 4/J2 # # # # # # # _ \" = + + +++ + ** * ••• • • • • •••••••••••••• ••••4. ೪೨ ದಾಗ್ಯೂಷಣ ಪಾಲಿಸಬೇಕು, ಲಲಿತೆಯನ್ನು ಎತ್ತಿಕೊಂಡು ಪ್ರಮೋದಭವನವನ್ನು ಮುಟ್ಟದಿರೆಂದರೆ ಅವಳು ಅಗ್ನಿ ಬ್ರಾಹ್ಮಣ ಸಾಕ್ಷಿಯಾಗಿ ನಿಮ್ಮ ಧರ್ಮಪತ್ನಿಯಾಗುವಳು. ಸಾಯಂಕಾ ಬದ ಶುಭಮುಹೂರ್ತದಲ್ಲಿ ನಾನು ನನ್ನ ಪ್ರಿಯ ಕನೈಯನ್ನು ನಿಮಗೆ ಅರ್ಪಿಸುವೆನು, ” ಭೀಮಸಿಂಹನ ಮಾತಿಗೆ ಕರುಣಸಿಂಹನು ತತ್‌ಕ್ಷಣದಲ್ಲಿಯೇ ಸಮ್ಮತಿಯನ್ನಿ ತನು, ಸರತಾನಸಿಂಹನೊಡನೆ ಕೆಲಹೊತ್ತು ಆಲೋಚನೆ ಮಾಡಿ ಭೀಮಸಿಂಹನು ಈ ವಿಲಕ್ಷಣ ಕುಲಾಚಾರವನ್ನು ಪಾಲಿಸುವಂತೆ ತನಗೆ ಹೇಳಿದುದರಿಂದ ಇದರಲ್ಲಿ ಏನಾ ದರೂ ಕಪಟವಿರಲಿಕ್ಕೆ ಬೇಕೆಂದು ಕರುಣಸಿಂಹನಿಗೆ ಶಂಕೆಯು ಉತ್ಪನ್ನವಾಯಿತು. ಆದರೆ ಆತನು ಅತ್ಯಂತ ಶೂರನಾದ ರಜಪೂತನಾಗಿದ್ದನು. ಎಂತಹ ಬಿಕ್ಕಟ್ಟಿನ ಕೆಲಸವಿ ದ್ದರೂ ಅದರಲ್ಲಿ ತನಗೆ ಅಪಯಶಸ್ಸು ಒದಗಬಹುದೆಂಬ ಕಲ್ಪನೆಯೇ ಅವನ ಮನಸ್ಸಿ ನಲ್ಲಿ ಬರುತ್ತಿದ್ದಿಲ್ಲ. ಆದುದರಿಂದ ಆ ಕ್ಷಣದಲ್ಲಿಯೇ ಆತನು ನಿರ್ಭಯಹೃದಯದಿಂದ ಭೀಮಸಿಂಹನ ಮಾತಿಗೆ ಒಡಂಬಟ್ಟನು. ಭೀಮಸಿಂಹನ ಪೂರ್ವಜರಲ್ಲಿ ಈ ತರದ ಒಂದು ನಡತೆಯು ಕೆಲವು ದಿವಸಗಳ ವರೆಗೆ ನಿಜವಾಗಿಯೂ ಇತ್ತು. ಆದರೆ ಕಾಲಾಂತರದಲ್ಲಿ ಆ ಆಚಾರವು ಲೋಪವನ್ನು ಹೊಂದಿ ಈ ಕಾಲಕ್ಕಂತೂ ಕೇವಲ ನಾಮಶೇಷವಾಗಿತ್ತು. ಕುಮಾರ ಕರುಣಸಿಂಹ ನನ್ನು ಈ ಕುಲಾಚಾರವನ್ನು ಪಾಲಿಸುವುದಕ್ಕೆ ಹಚ್ಚುವುದರಲ್ಲಿ ಸರತಾನಸಿಂಹನು ಅತ್ಯಂತ ದುಷ್ಟ ವಾದ ಉದ್ದೇಶವನ್ನಿಟ್ಟು ಕೊಂಡಿದ್ದನು. ಇಡೀ ದಿವಸದಲ್ಲಿ ನೀರಿನ ಹನಿಯನ್ನು ಕೂಡ ಬಾಯಲ್ಲಿ ಹಾಕದೆ ನಿರಾಹಾರದಿಂದ ಇದ್ದ ಮೇಲೆ, ಬಲಿಷ್ಠಳಾದೊಬ್ಬ ಪೂರ್ಣ ವಯಸ್ಕ ಯುವತಿಯನ್ನು ಹೊತ್ತುಕೊಂಡು ಪರ್ವತದ ಮೇಲೆ ಹೋಗುವುದು ಅತ್ಯಂತ ಕಷ್ಟಕರವಾದುದು! ಅಸಂಭವನೀಯವೆಂದೇ ಹೇಳಿದರೂ ಹೇಳಬಹುದು! ಆದುದ ರಿಂದ ಕುಮಾರನಿಗೆ ಲಲಿತೆಯು ಲಭಿಸಲಾರಳೆಂದು ಆತನು ಯೋಚಿಸಿದ್ದನು. ಭೀಮ ಸಿಂಹನ ಮನಸ್ಸಿನಲ್ಲಿ ಈ ತರದ ಉದ್ದೇಶವಾವುದೂ ಇಲ್ಲ. ಆತನ ಮನಸ್ಸಿನಲ್ಲಿ ಕರು ಣಸಿಂಹನ ವಿಷಯಕ್ಕೆ ತೀವ್ರದ್ವೇಷವು ಎಂದೂ ಇದ್ದಿಲ್ಲ. ಈ ಪ್ರಸಂಗದಲ್ಲಿಯಂತೂ ಆ ದ್ವೇಷವು ಪ್ರಾಯಶಃ ಇಲ್ಲದಂತಾಗುತ್ತಲೇ ಬಂದಿತ್ತು. ಈ ವೀರೋಚಿತ ಪರೀಕ್ಷೆ ಯಲ್ಲಿ ಕುಮಾರನು ಉತ್ತೀರ್ಣನಾದರೆ, ಇಂತಹ ಯೋಗ್ಯನಾದ ತರುಣನಿಗೆ ತನ್ನ ಮಗ ಳನ್ನು ಅರ್ಪಿಸುವುದಕ್ಕೆ ಆತನಿಗೆ ಒಂದು ವಿಧವಾದ ಆನಂದವೇ ಆಗುತ್ತಿತ್ತು. ಪರೀಕ್ಷೆ ಯಲ್ಲಿ ಒಂದು ವೇಳೆ ಆತನಿಗೆ ಯಶಸ್ಸು ಬರದೆ ಹೋಗಿದ್ದರೂ ಆತನಿಗೆ ಅಷ್ಟೊಂದು ಕೆಡಕೆನಿಸುತ್ತಿದ್ದಿಲ್ಲ. ಹೀಗೆ ಆತನು ಭಾವೀಪರಿಣಾಮದ ವಿಷಯದಲ್ಲಿ ಉದಾಸೀನ ನಾಗಿದ್ದನು. ಗಣೇಶಮಂದಿರದೊಳಗಿನ ಸುಸಜ್ಜಿತವಾದ ಒಂದು ಭಾಗದಲ್ಲಿ ಸುಂದರವಾ ದೊಂದು ಮಂಚದ ಮೇಲೆ ಕುಮಾರ ಕರುಣಸಿಂಹನು ಸ್ವಸ್ಥವಾಗಿ ಮಲಗಿಕೊಂಡಿದ್ದನು.