ಪ್ರೇಮಮಂದಿರ, ೫೫ VJ+ ಈ + ++++ +++ rt ov/wwwAAM ( ಈ ಅರ್ಧದಾರಿಯನ್ನು ಕ್ರಮಿಸಬೇಕಾದರೆ ನಿಮಗೆ ಅತ್ಯಂತ ಶ್ರಮವಾದಂತೆ ತೋರುತ್ತದೆ. ಅತ್ಯಂತ ಕಷ್ಟದಿಂದ ನೀವು ಶ್ವಾಸವನ್ನು ಬಿಡುತ್ತಿರುವಿರಿ. ಒಂದೊಂದು ಅಡಿಯನ್ನು ಮುಂದಕ್ಕೆ ಇಡಬೇಕಾದರೆ ನಿಮಗೆ ಲೆಕ್ಕವಿಲ್ಲದಷ್ಟು ಯಾತನೆಗಳುಂಟಾಗು ತಿವೆ. ಇನ್ನೂ ಅರ್ಧಹಾದಿಯನ್ನು ನೀವು ಕ್ರಮಿಸಬೇಕಾಗಿದೆ. ಆ ದಾರಿಯಾದರೋ ಹಿಂದಿನ ದಾರಿಗಿಂತ ಕಠಿಣವಾದುದೂ, ಏರಿನ ಪ್ರದೇಶವೂ ಆಗಿದೆ. ಕುಮಾರ ! ಈಗಲೇ ನಿಮ್ಮ ಸಾಮರ್ಥವೆಲ್ಲ ಇಲ್ಲದಂತಾದ ಹಾಗೆ ತೋರುತ್ತದೆ. ಪ್ರಿಯರೇ, ಮನು ಷ್ಯನಿಗೆ ತನ್ನ ಪ್ರಾಣಕ್ಕಿಂತಲೂ ಪ್ರಿಯವಾದ ಇನ್ನಾವ ವಸ್ತುವೂ ಜಗತ್ತಿನಲ್ಲಿಲ್ಲ. ನನ್ನನ್ನು ಕೆಳಗಿಳಿಸಿ ನೀವು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ. ನನ್ನ ಈ ವಿನಂತಿಯನ್ನಷ್ಟು ದಯಮಾಡಿ ಕೇಳಿರಿ. ” ಲಲಿತೆಯು ಕಣ್ಣೀರುಗಳನ್ನು ಸುರಿಸುತ್ತ ದೀನವಾಣಿಯಿಂದ ಮಾತನಾಡಿದಳು. ಕರುಣಸಿಂಹನು ಲಲಿತೆಗೆ ಉತ್ತರವನ್ನೇ ಕೊಡಲಿಲ್ಲ. ಒಳ್ಳೆ ಕಷ್ಟದಿಂದ ಒಂದೊಂದು ಹೆಜ್ಜೆಯನ್ನು ಮುಂದಕ್ಕೆ ಇಡುತ್ತ ಪರ್ವತದೊಳಗಿನ ದುರ್ಗಮವಾದ ಮಾರ್ಗವನ್ನು ಹೇಗೋ ಕ್ರಮಿಸುತ್ತಿದ್ದನು. ಲಲಿತೆಯೊಡನೆ ಪ್ರೇಮಾಲಾಪವನ್ನು ಮಾಡಲು ಅವನಿಗೆ ಅವಕಾಶವಿದ್ದಿಲ್ಲ. ಮತ್ತು ಅವನಲ್ಲಿ ಅಷ್ಟೊಂದು ಸಾಮರ್ಥವೂ ಉಳಿದಿದ್ದಿಲ್ಲ. ದುರ್ಗಾಧಿಪತಿಯಾದ ಭೀಮಸಿಂಹನೂ, ಸರತಾನಸಿಂಹನೂ, ದುರ್ಜಯ ಸಿಂಹನೂ ಅವರ ಅನುಜರರೂ ಬೆಟ್ಟದ ತುದಿಯಲ್ಲಿ ನಿಂತುಕೊಂಡು, ಲಲಿತೆಯನ್ನೆತಿ ಕೊಂಡು ಪ್ರಮೋದಭವನದ ಕಡೆಗೆ ಬರುತ್ತಿದ್ದ ಆ ರಜಪೂತವೀರನನ್ನು ಲಕ್ಷವೂ ರ್ವಕವಾಗಿ ನೋಡುತ್ತಿದ್ದರೂ ಪ್ರತಿಯೊಬ್ಬರ ಹೃದಯದಲ್ಲಿಯೂ ಅನೇಕ ತರದ ವಿಚಾ ರಗಳೂ ವಿಕಾರಗಳೂ ಈ ಕಾಲಕ್ಕೆ ಹುಟ್ಟುತ್ತಿದ್ದುವು. ತನ್ನ ಚಿರವಾಂಛಿತವಲ್ಲಭೆಯನ್ನೆತ್ತಿಕೊಂಡು ಒಂದೊಂದೇ ಹೆಜ್ಜೆಯನ್ನು ಮುಂದ ಕೈ ಇಡುತ್ತ ಕರುಣಸಿಂಹನು ಒಳ್ಳೆ ಕಷ್ಟದಿಂದ ಪ್ರಮೋದಭವನದ ಕಡೆಗೆ ಬರುತ್ತಿ ದ್ದನು. ಬೆಟ್ಟದ ತುದಿಯಲ್ಲಿರುವ ಭೀಮಸಿಂಹಾದಿ ಪ್ರೇಕ್ಷಕಮಂಡಳಿಯನ್ನು ನೋಡಿದೆ ಡನೆಯೇ ಆತನಲ್ಲಿ ಉತ್ಸಾಹವು ಹುಟ್ಟುತ್ತಿತ್ತು. ಅದರಂತೆ ತನ್ನ ಹೃದಯಕ್ಕೆ ಹೊಂದಿ ಕೊಂಡಿರುವ ಲಲಿತೆಯನ್ನು ಪ್ರೇಮಪೂರ್ಣದೃಷ್ಟಿಯಿಂದ ನೋಡಿದೊಡನೆಯೇ ಆತ ನಲ್ಲಿ ನೂತನವಾದ ಶಕ್ತಿಯು ಉಗಮಹೊಂದುತ್ತಿತ್ತು, ಈ ಪ್ರಕಾರ ಮೆಲ್ಲಮೆಲ್ಲನೆ ಕರುಣಸಿಂಹನು ತನ್ನ ಇಷ್ಟ ಸ್ಥಲದ ಕಡೆಗೆ ನಡೆದಿ ದ್ದನು. ಪ್ರತಿಯೊಂದು ಹೆಜ್ಜೆಯನ್ನು ಎತ್ತಿ ಇಡುವಾಗ ಆತನಿಗೆ ಪ್ರಾಣಾಂತವಾದ ಕಷ್ಟ, ವಾಗುತ್ತಿತ್ತು. ಆದರೂ ಅಷ್ಟೊಂದು ಶ್ರಮವನ್ನು ಕೂಡ ಲೆಕ್ಕಿಸದೆ ಅವನು ಹಾಗೂ ಹೀಗೂ ಪ್ರಮೋದಭವನಕ್ಕೆ ತೀರ ಹತ್ತರದಲ್ಲಿ ಬಂದು ನಿಂತನು ಕರುಣಸಿಂಹಸು
ಪುಟ:ಪ್ರೇಮ ಮಂದಿರ.djvu/೬೪
ಗೋಚರ