ಪುಟ:ಪ್ರೇಮ ಮಂದಿರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

k ಮಗ್ಗ ಷಣ. ••• • • • • • - A ಎಷ್ಟೇ ಬಲಿಷ್ಠನೂ, ಎಷ್ಟೇ ಉತ್ಸಾಹಶಾಲಿಯೂ ಆಗಿದ್ದರೂ ಅವನೂ ಒಬ್ಬ ಮನು ಷ್ಯನಷ್ಟೆ? ಅಂದ ಮೇಲೆ ನಿಸರ್ಗದ ಸಾಮರ್ಥ್ಯವನ್ನು ಮೀರಿ ನಡೆಯವುದು ಅವ ನಿಂದ ಹೇಗೆ ಆಗಬೇಕು ? ಪ್ರಮೋದಭವನದಿಂದ ಹತ್ತು ಇಪ್ಪತ್ತು ಮೊಳಗಳ ಅಂತರದಲ್ಲಿರುವಾಗ ಕರುಣ ಸಿಂಹನ ಸಾಮರ್ಥವೆಲ್ಲ ಗಲಿತವಾಯಿತು. ಆತನ ಬಾಹುಬಂಧನವು ನಿರ್ಜೀವವಾದುದ ರಿಂದ ಲಲಿತೆಯು ಭೂಮಿಯ ಮೇಲೆ ನಿಂತುಕೊಂಡಳು. ಕ್ಷಣಾರ್ಧದಲ್ಲಿಯೇ ಕರುಣ ಸಿಂಹನು ಮೂರ್ಚ್ಛಿತನಾಗಿ ದೊಪ್ಪನೆ ನೆಲಕ್ಕೆ ಬಿದ್ದನು. ರಾಜಕುಮಾರಿಯು ಹೆದರಿದಳು. ಈ ಪ್ರಸಂಗದಲ್ಲಿ ಏನು ಮಾಡಬೇಕೆಂಬುದು ಅವಳಿಗೆ ತಿಳಿಯದಾಯಿತು ! ಕರುಣಸಿಂಹನ ಬಳಿಯಲ್ಲಿ ಕುಳಿತು ಆತನಿಗೆ ಶೈತ್ಯೋಪ ಚಾರವನ್ನು ಮಾಡಹತ್ತಿದ್ದಳು. ಕುಮಾರನು ತೀರ ನಿಶ್ಚಲವಾಗಿ ಬಿದ್ದಿದ್ದನು. ಆತನ ಬಾಯೊಳಗಿಂದ ರಕ್ತವು ಸುರಿಯುತ್ತಿತ್ತು. ಆತನ ಚೈತನ್ಯವೆಲ್ಲ ಲುಪ್ತವಾಗಿತ್ತು. ಆತನ ಹೃದಯದೊಳಗಿನ ರಕ್ತ ಕೋಶದ ಬಂಧನವು ಹರಿದುಹೋಗಿತ್ತು ! ಲಲಿತೆಯ ದೈವವು ಪ್ರತಿಕೂಲವಾಯಿತು! ಕ್ಷಣಾರ್ಧದಲ್ಲಿಯೇ ಕೆಲಸವೆಲ್ಲ ತೀರಿತು ! ತನ್ನ ಪ್ರಿಯಕರನು ಈ ಮೃತ್ಯುಲೋಕವನ್ನು ಬಿಟ್ಟು ಸ್ವರ್ಗಧಾಮಕ್ಕೆ ಹೊರಟು ಹೋದನೆಂಬುದು ಆಕೆಗೆ ಆಗಲೇ ಗೊತ್ತಾಯಿತು. ಆ ಕ್ಷಣದಲ್ಲಿಯೇ ಅವಳ ಮೈ ಮೇಲಿನ ಎಚ್ಚರದಪ್ಪಿ ಅವಳು ಭ್ರಮಿಷ್ಟೆಯಾದಳು. “ ಕುಮಾರ-ಕುಮಾರ ! ) ಎಂದು 'ಕರುಣಸ್ವರದಿಂದ ಶಂಖವಾದ್ಯ ಮಾಡುತ್ತ ನೆಲದ ಮೇಲಿನ ದೂಳಿಯಲ್ಲಿ * ಗುಡುಗುಡು ' ಹೊರಳಾಡಹತ್ತಿದಳು. ಈ ಸ್ಥಿತಿಯನ್ನು ನೋಡಿ ಭೀಮಸಿಂಹ ಸರತಾನಸಿಂಹ, ದುರ್ಜಯಸಿಂಹ ಮೊದ ಲಾದವರು ಓಡಿ ಬರಹತ್ತಿದರು. ಈ ಜನರೆಲ್ಲರೂ ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿ ಲಲಿತೆಯು ಇನ್ನೂ ಭಯಭೀತಳಾದಳು. ಇನ್ನು ಮೇಲೆ ದುರ್ಜಯಸಿಂಹನೊ ಡನೆ ವಿಧಿಪೂರ್ವಕವಾಗಿ ತನ್ನ ವಿವಾಹವನ್ನು ಮಾಡುವರೆಂಬ ವಿಚಾರವು ಆಕೆಯ ಮನಸ್ಸಿನಲ್ಲೊಂದು ಕ್ಷಣಕಾಲ ಬಂತು. ತಮ್ಮ ಈ ದುಷವಾದ ಹೇತುವನ್ನು ಸಾಧಿಸಿ ಕೊಳ್ಳುವುದಕ್ಕಾಗಿಯೇ ಸರತಾನಸಿಂಹಾದಿ ನೀಚರು ಈ ವಿಧದ ಕೌಶಲ್ಯದಿಂದಲೂ ತನ್ನ ಹೃದಯವಲ್ಲಭನಿಗೆ ಮರಣವನ್ನುಂಟು ಮಾಡಿದರು. ಇನ್ನು ಮುಂದಿನ ಮಾರ್ಗವು ಅವರಿಗೆ ನಿರಾತಂಕವಾಗಿಯೇ ಇದೆ. ಪಾಷಾಣಹೃದಯಿಯಾದ ತನ್ನ ತಂದೆಯು ತನ್ನನ್ನು ದುರ್ಜಯಸಿಂಹನಿಗೆ ಸಮರ್ಪಿಸಿದ ಹೊರತು ಬಿಡುವುದಿಲ್ಲ. ಈ ಪ್ರಕಾರದ ವಿಚಾರಗಳು ಲಲಿತೆಯ ತಲೆಯಲ್ಲಿ ಸುಳಿದಾಡಹತ್ತಿದುವು. ಮುಂದಾಗತಕ್ಕ ತನ್ನ ಆ ವಿಟಂಬನೆಯನ್ನು ಕಳೆದುಕೊಳ್ಳಬೇಕಾದರೆ ಏನು ಮಾಡಬೇಕೆಂಬುದು ಅವಳಿಗೆ ತಿಳಿಯ ದಾಯಿತು?