ಪುಟ:ಬನಶಂಕರಿ.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೬

       ಹೊತ್ತು ಕಳೆಯಿತು ಬಲು ನಿದಾನವಾಗಿ.
       ಹೊಲಗಳ ನಡುವೆ   ಮನೆಗಳಿಂದಲೂ ಆಗೊಮ್ಮೆ ಈಗೊಮ್ಮೆ ಪಟಾಕಿಗಳ ಸದ್ದು ಕೇಳಿ
ಬರುತಿತ್ತು. ನಾಣಿ ಮತ್ತು ರಂಗ ಬಾಗಿಲ ಹೊರಗೆ ನಿಂತು "ಅದು ಕಿಟ್ಟೀ ಮನೇದು ಅದು ಮಾವನ ಮನೇದು" ಎಂದು ಲೆಕ್ಕ ಹಾಕುತ್ತಿದ್ದರು. ಹಳ್ಳಿಯ ಅಂಚಿನಲ್ಲಿ ಎತ್ತರದ ಬೆಟ್ಟದ ತಪ್ಪಲಿನಲ್ಲಿದ್ದ ಹೊಲೆಯರ ಕೇರಿಯಿಂದ

ಡಮರು-ಡಮಾ-ಡಿಕ್ಕಿ ಡಮಾ-ಡಿಕ್ಕಿ ಡಮಾ-ಡಿಕ್ಕಿ ಎಂದು ಪಲ್ಲವಿ ನುಡಿಸುತಿತ್ತು, ಸಮೀಪದಲ್ಲಿ ಯಾರೋ ಶಿವನ ಮಹಿಮೆಯನ್ನು ಕುರಿತು ಹಾಡುತ್ತಿದರು, ಕತ್ತಲೆಯನ್ನು ಭೇದಿಸುತ್ತಾ ಬತ್ತದಸಸಿಗಳ ಮೇಲಿಂದ ಹಾದು ಮಾವು ಹಲಸುಗಳ ರೆಂಬೆ ಕೊಂಬೆಗಳ ನಡುವೆ ತೂರಿಕೊಂಡು ಇಂಪಾದ ಮೋಹಕವಾದ ಆ ಸ್ವರ ಗೊತ್ತು ಗುರಿ ಇಲ್ಲದೆ ಸಂಚಾರ ಮಾಡುತಿತ್ತು.

    ಮಳೆ ನಿಂತ ಅನಂತರದ ಚಳಿಗಾಳಿ ಬಾಗಿಲು ಗವಾಕ್ಷಿಗಳ ಮೂಲಕ ಮನೆಯ ಒಳನುಗ್ಗಿ ಬಡಿದು ಮೈಗಳಿಗೆ ಕಚಗುಳಿ ಇಟ್ಟಿತು; ಸೊಡರುಗಳು ಅತ್ತಿತ್ತ ನರ್ತಿಸುವಂತೆ ಮಾಡಿತು. ..
  ಹುಡುಗರಿಬ್ಬರೂ ತಾಯಿಗೆ ಸುತ್ತು,ಸುತ್ತು ಬರುತ್ತಾ "ಅಮ್ಮಾ ಅಣ್ಣ ಬರಲಿಲ್ಲವೇ..ಹಸಿವಾಗುತ್ತಲ್ಲೇ.."
ಎಂದರು
  " ಹುಡಗರಿಗೆಬಡಿಸು ಲಕ್ಷ್ಮಿ. ಬೆಳಗಿನಿಂದ ಕುಣೀತಾ ಇದ್ದಾರೆ ನಿದ್ದೆ ಹೋಗಲಿ" ಎಂದರು ಮಾವ
   "ಹೂಂ ನಾಳೆ ಬಳಿಗ್ಗೆ ಸ್ನಾನಕ್ಕೆ ಬೇರೆ ಬೇಗ ಎಬ್ಬಿಸ್ಬೇಕು" ಎನ್ನುತ್ತಾ ಅತ್ತೆ ಹುಡುಗನ್ನು ಒಳಕ್ಕೆ ಕರೆ

ದೊಯ್ದರು.

   ಅಮ್ಮಿಯೂ ಒಳ ಹೋಗಿ ಬಡಿಸಲು ನೆರವಾದಳು, ಇಷ್ಟು ಹೊತ್ತಿಗಾಗಲೆ ಅವರು ಬರಬೇಕಿತ್ತು ಬಂದಿದ್ದರೆ

ಮಡಿಸ್ನಾನ ಮುಗಿಸಿ ಸಂದ್ಯಾವಂದನೆ ಮಾಡಿ ಅವರೂ ಊಟಕ್ಕೆ ಕೂಡುತ್ತಿದ್ದರು. ಮಾವ ಕೂಡಾ ಆಗ ಎಲ್ಲರಿಗೂ ಅತ್ತೆ ಮತ್ತು ತಾನು ಬಡಿಸುತ್ತಿದ್ದೆವು.

  ಹಾಗೆ ಯೋಚಿಸುತ್ತಾ ಯೋಚಿಸುತ್ತಾ ಅಮ್ಮಿ ಹುಡುಗರಿಗೆ ಒಂದು ಹೋಳಿಗೆ ಹೆಚ್ಚು ಬಡಿಸಿದಳು ಇಲ್ಲವೇ ಒಂದು ಕಡಿಮೆ, ಪರಿಣಾಮವಾಗಿ ಜಗಳ ಗದ್ದಲ ನಗೆಮಾತು.
  ಎಳೆಯರು ಉಂಡುಮಲಗಿದ ಮೇಲೆ ಅತ್ತೆ ಮಾವ ಸೊಸೆ ಕಾದು ನಿಂತರು ಅಮ್ಮಿ ಮನೆಯೊಳಗೂ ಹೊರಗೂ ಸೊಡರುಗಳನ್ನು ಒಂದೊಂದಾಗಿ ಸರಿಪಡಿಸಿದಳು ಕ್ಷಣ ಕ್ಷಣವೂ ಅವಳ ದೃಷ್ಟಿ ಹೋಗುತಿತ್ತು

ಆಕತ್ತಲಲ್ಲಿ ಚಲಿಸುವ ಕಂದೀಲನ್ನು ಅವಲು ಹುಡುಕುತ್ತಿದ್ದಳು, ಹಳ್ಳಿಗೆ ಬರುವ ಹಾದಿಯಿಂದ ಮಾತುಕತೆಯ ದನಿಯೇನಾದರು ಕೇಳಿ ಬರುತ್ತಿತೇನೊ ಎಂದು ಕಿವಿ ನಿಗುರಿಸಿದಳು.


   "ಅಮ್ಮಿ ಒಳಕ್ಕೆ ಬಾರಮ್ಮ ಆ ಚಳೀಲಿ ಯಾಕೆ ಅಲ್ಲಿ ನಿಂತಿದ್ದೀಯ? ಬಾ ಒಳಕ್ಕೆ" ಎಂದರು ಮಾವ ಮೃದುವಾಗಿ.
   -ಅಥವಾ ಈದಿನ ಬರುವುದೇ ಇಲ್ಲವೆನೊ -ನಾಳೆ ಬರುವರೇನೋ                            ಅಮ್ಮಿಯ ಕಣ್ಣಂಚಿನಲ್ಲಿ ನೀರು ತುಳುಕಾಡಿತು ಒಲ್ಲದ ಕಾಲುಗಳನ್ನು ಎಳೆದುಕೊಂಡು ಅವಳು  ಒಳಹೋದಳು.
  ಹೊತ್ತು ಕಲೆಯಿತು ಮತ್ತಷ್ಟು ನಿದಾನವಾಗಿ.