ಪುಟ:ಬನಶಂಕರಿ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೮

ಅವಳಹೃದಯ ಬಡಿತ ತೀವ್ರವಾಯಿತು, ಕತ್ತಲಲ್ಲೂ ಆನಂದದ ಮುಗುಳು ನಗೆ ಆ ಎಳೆಯ ತುಟುಗಳ ಮೇಲೆ ಕುಣಿಯಿತು.
    "........."
    "ಮೂಲೆ ಹೊಲದ ಸಮೀಪಕ್ಕೆ ಕಂದೀಲು ಬಂತು ಅಲ್ಲ?"
    "..........."
    "ಯಾಕೋ ಒಬ್ಬನೇ ಇರೋ ಹಾಗಿದೇಂದ್ರೆ.."
    "ಅಂಚೆಯವನು ಬಂದಿಲ್ವೇನೋ ಹಾಗಾದ್ರೆ?'
    "ಅಥವಾ "
  ಅಮ್ಮಿ ಉಸಿರು ಹಿಡಿದು ಕುಳಿತಳು, ಮುಂದೆ-ಮುಂದೆ ಎಂತಹ ಮಾತುಗಳನ್ನು ಅವಳು ಕೇಳಬೇಕು?
  ...ನಿಮಿಷಗಳು..ಒಂದು..ಎರಡು..ಮೂರು..ಹತ್ತು.ಇಪ್ಪತ್ತು..ನಿಮಿಷಗಳು ಯುಗಗಳಾಗುವುದೆಂದರೆ ಹಾಗೆಯೇ ಅಲ್ಲವೇ?
  ..."ಇಲ್ಲ ಲಕ್ಷ್ಮಿ ರಾಮಚಂದ್ರ ಬರ್ಲಿಲ್ಲ ..ಕೈ ಬೀಸಿ ನಡೆಯೋ ರೀತಿ ನೋಡು, ಮುನಿಯಪ್ಪನೇ ಯಿರಬೇಕು.."
  ಅವರಲ್ಲ ಮುನಿಯಪ್ಪ, ಅವರು ಚಿಕ್ಕಮಗಳೂರಿನಲ್ಲೇ ಇದ್ದಾಗ ವಾರಕ್ಕೆರಡು ಬಾರಿ ಅಲ್ಲಿಗೆ ಹೋಗಿ ಬರುವ
ಟಪಾಲಿನ ಮುನಿಯಪ್ಪನ ಆಗಮನವನ್ನು ಅಮ್ಮಿ ಇದಿರು ನೋಡುವುದಿತ್ತ್ತು ಆದರೆ ಈ ದಿನ ಆತನ ಬದಲು ಅವರೇ ಬರಬಾರದಿತ್ತೆ?
  ಅತ್ತೆಯ ಸ್ವ್ರರ ಅನುಮಾನಿಸುತ್ತಾ ಕೇಳಿತು;
  "ರಾಮ ಯಾಕೆ ಬರಲಿಲ್ಲವೊವೋ?"
  "ದೀಪಾವಳಿ ಲೆಕ್ಕಾಚಾರ..ಹೆಚ್ಚು ಕೆಲಸವಿತ್ತೋ ಏನೊ..?
  ಲಾಟೀನು ಜಿಗಿದು ಜಿಗಿದು ಅಂಚಿನಿಂದ ಒಮ್ಮೊಮ್ಮೆ ಕಾಲು ಜಾರಿ ಹೊಲಕ್ಕಿಳಿದರೂ ಮತ್ತೆ ಮೇಲಕ್ಕೇರಿ ಮನೆಯತ್ತ ಬರುತಿತ್ತು
  "ಯಾಕೆ ಒಬ್ಬನೇ ಓಡಿ ಬರುತಿದ್ದಾನಲ್ಲ|?
  ಸದಾ ಶಾಂತವಾಗಿರುತಿದ್ದಮಾವನ ಸ್ವರದಲ್ಲೂ ಕಾತರದ ಭಾವನೆ ಒಡೆದು ತೋರುತಿತ್ತು ಆಗ
 ಎದುರಿನ ತೋಡಿಗೆ ಅಡ್ಡವಾಗದ್ದ ಮರದ ಸೇತುವೆಯನ್ನು ದಾಟಿ ಕಂದೀಲು ಅಂಗಳದ ಬಳಿಗೆ ಬಂತು ಆದರೆ ಮನೆ ಸಮೀಪಿಸಲಿಲ್ಲ
   "ಮುನಿಯಪ್ಪ.ಮುನಿಯಪ್ಪಾ|"
  ಉತ್ತರ ಬರಲಿಲ್ಲ ಮುನಿಯಪ್ಪನಿಂದ.
  ಅತ್ತೆ ಸ್ವಲ್ಪ ಕಸಿವಿಸಿಯೊಂದಿಗೆ ಕೇಳಿದರು;
 "ಪಾಪ ಜಾರಿಬಿಬ್ದಿಟ್ಟನೇನೋ ಏನೋ"
 "ಮುನಿಯಪ್ಪಾ, ಏ ಮುನಿಯಪ್ಪಾ|"
 ಅಮ್ಮಿ ಎದ್ದು ಗೋಡೆಗೊರಗಿ ನಿಂತಳು.
 ಮಾವ ಹೊರಕ್ಕಿಳಿದು ಅಂಗಳದ ಅಂಚಿನತ್ತ ದಾವಿಸಿದರು, ಅಲ್ಲಿ ಕಂದೀಲನ್ನು ನೆಲದ