ವಿಷಯಕ್ಕೆ ಹೋಗು

ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ, ಇವರಿಬ್ಬರ ಆಸಕ್ತಿಯ ಫಲ ಈ ಕಾರ್ಯವನ್ನು ಆಗುಗೊಳಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆಯರ ಆಪ್ತ ಕಾರ್ಯದರ್ಶಿ ಡಾ. ಎ. ಆರ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ಸಿ. ಎಸ್. ಕೇದಾರ್, ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶ್ರೀ ಕಾ. ತ. ಚಿಕ್ಕಣ್ಣ ಪ್ರಕಟಣೆಯ ವಿವಿಧ ಹಂತಗಳಲ್ಲಿ ನನಗೆ ನೆರವಾಗಿದ್ದಾರೆ. ಈ ಮೇಲಿನ ಎಲ್ಲ ಮಹನೀಯರಿಗೂ ಕನ್ನಡ ಪುಸ್ತಕ ಪ್ರಾಧಿಕಾರವು ಅನನ್ಯವಾದ ಕೃತಜ್ಞತೆಯನ್ನು ಅರ್ಪಿಸುತ್ತದೆ.

ಸಮಗ್ರವಚನ ಸಂಪುಟಗಳ ಪರಿಷ್ಕೃತ ಆವೃತ್ತಿಯ ಸಂಪಾದಕ ಮಂಡಳಿಯ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ. ಪಿ. ಕೃಷ್ಣಕುಮಾರ್, ಡಾ. ಎಸ್. ವಿದ್ಯಾಶಂಕರ್, ಎಸ್. ಶಿವಣ್ಣ ಇವರನ್ನು, ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರತರಲು ಒಪ್ಪಿಗೆ ನೀಡಿದ ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸದಸ್ಯರಾದ ಪ್ರೊ. ರಾಮೇಗೌಡ, ಶ್ರೀ ಆರ್. ಜಿ. ಹಳ್ಳಿ ನಾಗರಾಜ್, ಪ್ರೊ. ಸಿದ್ಧಪ್ಪ ಉತ್ನಾಳ್, ಶ್ರೀ ಛಾಯಾಪತಿ ಮತ್ತು ಶ್ರೀಮತಿ ಇಂದಿರಾ ಶಿವಣ್ಣ ಇವರನ್ನು ತುಂಬು ಮನಸ್ಸಿನಿಂದ ನೆನೆಯುತ್ತೇನೆ. ಹದಿನೈದು ಸಂಪುಟಗಳ ಅಕ್ಷರ ಜೋಡಣೆ ಮಾಡಿಕೊಟ್ಟವರನ್ನು, ಬಹು ಅಂದವಾಗಿ ಮುದ್ರಿಸಿದವರನ್ನು, ಸುಂದರವಾಗಿ ಮತ್ತು ಆಕರ್ಷಕವಾಗಿ ಸಂಪುಟಗಳನ್ನು ಬೈಂಡ್ ಮಾಡಿಕೊಟ್ಟವರನ್ನು, ಮುಖಪುಟ ವಿನ್ಯಾಸ ಮಾಡಿಕೊಟ್ಟವರನ್ನು, ತುಂಬು ಪ್ರೀತಿಯಿಂದ ನೆನೆಯುವುದು ನನ್ನ ಕರ್ತವ್ಯ. ಇವರ ಮುದ್ರಣ ಪರಿಣತಿಯ ಫಲ ಈ ಸಂಪುಟಗಳಿಗೆ ದೊರಕಿ ಅಂದವಾಗಲು ಕಾರಣವಾಗಿದೆ. ಪುಸ್ತಕ ಪ್ರಾಧಿಕಾರದ ಆಡಳಿತಗಾರರಾದ ಶ್ರೀ ಬಲವಂತರಾವ್ ಪಾಟೀಲ ನನ್ನೊಡನೆ ಉದ್ದಕ್ಕೂ ಸಹಕರಿಸಿದ್ದಾರೆ. ಈ ಮೇಲೆ ಹೆಸರಿಸಿದ ಎಲ್ಲ ಮಹನೀಯರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.

ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿರುವ ಸಮಗ್ರ ವಚನ ಸಂಪುಟಗಳನ್ನು ಕನ್ನಡದ ಮಹಾಜನತೆ ಪ್ರೀತಿಯಿಂದ ಸ್ವೀಕರಿಸಬೇಕೆಂದು ಬೇಡುತ್ತೇನೆ.