ಪುಟ:ಬಾಳ ನಿಯಮ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ತುಂಬ ನಿಶ್ಚಕನಾಗಿ ಎಡವಿಬಿದ್ದನು ; ಮುಖ ಮೂತಿ ಒಡೆಯಿತು. ಬೆನ್ನ ಹಿಂದೆ ಮೂಟೆಯ ಭಾರ ಬೇರೆ. ಬಹಳ ಹೊತ್ತು ಅವನು ಚಲಿಸಲೇ ಇಲ್ಲ ; ಆಮೇಲೆ ಪಕ್ಕಕ್ಕೆ ತಿರುಗಿ ಗಡಿಯಾರಕ್ಕೆ ಕೀಲುಕೊಟ್ಟನು. ಬೆಳಗಿನ ತನಕ ಹಾಗೆಯೇ ಬಿದ್ದಿದ್ದನು. ಯಥಾಪ್ರಕಾರ ಮತ್ತೊಂದು ಮಂಜು ಮುಸುಕಿದ ದಿನವನ್ನು ಎದುರಿಸ ಬೇಕಾಯಿತು. ಅರ್ಧದಷ್ಟು ಕಂಬಳಿ ಆಗಲೇ ಸುತ್ತುವ ಚಿಂದಿಯಾಗಿ ವಿನಿಯೋಗಿಸಲ್ಪಟ್ಟಿತ್ತು. ಬಿಲ್‌ನ ಹೆಜ್ಜೆ ಗುರುತುಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಚಿಂತಿಸುವುದೂ ಸರಿಯಲ್ಲ. ಆದರೆ ತನ್ನ ಹಸಿವಿನ ಬಾಧೆಯೊಂದಿಗೆ ಬಿಲ್ ಕೂಡ ತನ್ನಂತೆಯೇ ದಾರಿ ತಪ್ಪಿದ್ದರೆ ಏನು ಗತಿ ಎಂದು ಆಶ್ಚರ್ಯಗೊಂಡನು.

  • ಮಧ್ಯಾಹ್ನದ ಹೊತ್ತಿಗೆ ಮೂಟೆಯ ಭಾರ ತಡೆಯಲಸಾಧ್ಯವಾಯಿತು. ಪುನಃ ಚಿನ್ನದ ಗಟ್ಟಿಗಳನ್ನು ಬೇರ್ಪಡಿಸಿದನು ; ಅರ್ಥವನ್ನು ಮರುಯೋಚನೆ ಅಲ್ಲದೆ ನೆಲದ ಮೇಲೆ ಚೆಲ್ಲಿಬಿಟ್ಟನು! ಮಟ ಮಟ ಮಧ್ಯಾಹ್ನ ಪ್ರಾಪ್ತ ವಾದಂತೆ ಉಳಿದರ್ಧವನ್ನೂ ಎಸೆದನು....ಈಗ ಅವನಲ್ಲಿ ಉಳಿದಿರುವುದು ಅರ್ಧ ಕಂಬಳ, ಟಿನ' ಬಕೆಟ್ಟು ಮತ್ತು ರೈಫಲ್ ಇಷ್ಟೇ,

ಅವನು ಭ್ರಾಂತಿಗೊಂಡನು. ಮನಸ್ಸಿನಲ್ಲಿ ಮಿಥ್ಯಾ ಭಾವನೆಗಳು ಉದ್ಭವಿಸಿ, ಅವನನ್ನು ಪೀಡಿಸತೊಡಗಿದ್ದುವು. ...ಒಂದು ತೋಟೆಯು ತನ್ನಲ್ಲಿ ಇದ್ದೇ ಇದೆಯೆಂದು ಭಾವಿಸಿದನು. ಬಂದೂಕದ ಕುಹರದಲ್ಲಿ ಅಡಗಿದ್ದರೂ, ತಾನು ಉಪೇಕ್ಷಿಸಿದ್ದು ತಪ್ಪು. ಹಾಗಲ್ಲ; ಕುಹರದಲ್ಲಿ ಏನೂ ಇಲ್ಲವೆಂದು ಇಲ್ಲಿಯ ತನಕ ತನ್ನ ತಿಳುವಳಿಕೆಯಾಗಿತ್ತು .... ಬುದ್ಧಿ ಭ್ರಮೆ ಇನ್ನೂ ಹೆಚ್ಚಾಯಿತು. ಗಂಟೆಗಟ್ಟಲೆ ಅವನು ತನ್ನಲ್ಲಿ ತಾನೇ ಹೋರಾಡಬೇಕಾಯಿತು. ಬಂದೂಕವನ್ನು ತಿರುಗ ಮುರುಗ ಮಾಡಿ ನೋಡಿದನು. ಒಳಗೇನೂ ಇಲ್ಲದೆ ಖಾಲಿಯಾಗಿತ್ತು. ಇಲ್ಲದಿದ್ದುದನ್ನು ಖಂಡಿತವಾಗಿಯೂ ಇದೆಯೆಂದು ನಂಬಿ, ನಿಜಪರಿಸ್ಥಿತಿಯನ್ನು ತಿಳಿದಾಗ ತೀರ ಬೇಸರಪಟ್ಟನು. ಹಾಗೆಯೆ ಅರ್ಧಘಂಟೆಯ ಕಾಲ ಕಷ್ಟ ಪಟ್ಟು ಕೊಂಡು ಕಾಲು ಹಾಕಿದನು. ಮತ್ತೆ ಭ್ರಾಂತಿಯ ಮುಸುಕು ಬೀಳಹತ್ತಿತು. ಕೇವಲ ಯಂತ್ರದ ಬೊಂಬೆ ಯಂತಾದನು. ವಿಚಿತ್ರ ಕಲ್ಪನೆಗಳು ಹುಚ್ಚು ಹುಚ್ಚಾಗಿ ತಲೆಯ ಸುತ್ತ ಸುಳಿದಾಡಿದುವು. ಹುಳುಗಳಂತೆ ಕೊರೆಯ ತೊಡಗಿದುವು. ಸತ್ಯಕ್ಕೆ ದೂರವಾದ ಅಂಥ ಹವ್ಯಾಸ ಕೇವಲ ಅಲ್ಪಕಾಲಿಕವಾಗಿತ್ತು. ಯಂತ್ರವನ್ನು ಹಿಂತಿರುಗಿಸುವ