________________
೯೨ ಬಾಳ ನಿಯಮ Y ತಾಯಿ ಹಕ್ಕಿಯು ಜೋರಾಗಿ ಅರಚುತ್ತಾ ಅವನನ್ನು ಬಡಿಯ ತೊಡಗಿತು. ಬಂದೂಕಿನ ತಲೆಯಿಂದ ಜಜ್ಜಿ ಹಕ್ಕಿಯನ್ನು ಉರುಳಿಸಲು ಪ್ರಯತ್ನ ಪಟ್ಟನು. ಆದರೆ ಅದು ಕೈಗೆ ಸಿಕ್ಕದಂತೆ ಹೊರಳಿಕೊಂಡಿತು. ಮತ್ತೆ ಕಲ್ಲುಗಳಿಂದ ಗುರಿಯಿಟ್ಟು ಹೊಡೆಯಲು ಮೊದಲು ಮಾಡಿದನು. ಅವನ ಅದೃಷ್ಟವಿರಬೇಕು, ಒಂದು ಹೊಡೆತದಿಂದ ಹಕ್ಕಿಯ ರೆಕ್ಕೆ ಮುರಿಯಿತು. ಬಾರ್‌ಮಿಗನ್ ಪಾಡು ಹೇಳತೀರದು ; ಥಟ್ಟನೆ ರೆಕ್ಕೆಯೊದರಿ ತತ್ತರಿಸುತ್ತಾ ಜೋತುಬಿದ್ದ ರೆಕ್ಕೆಯನ್ನು ಎಳೆದುಕೊಂಡೇ ಓಡಾಡಿತು. ನಾಯಕನೂ ಹಿಂಬಾಲಿಸಿದನು. ಮರಿ ಹಕ್ಕಿಗಳಿಂದ ಅವನ ಹೊಟ್ಟೆಯೇನೂ ತುಂಬಲಿಲ್ಲ; ಕೇವಲ ಹಸಿವನ್ನು ಕೆರಳಿಸುವಂತಹ ಆಹಾರವಾಗಿತ್ತು. ಒಂದೇ ಸಮನೆ ಕಲ್ಲು ಹೊಡೆಯುತ್ತ, ಒಂಟಿಕಾಲಿನಲ್ಲಿ ಕುಂಟುತ್ತ, ಕುಪ್ಪಳಿಸುತ್ತ ನಡೆಯುತ್ತಿದ್ದನು. ಬಂಡೆಗೆ ತಾಗಿ ಕಾಲು ಗಾಯಗೊಂಡಿತು. ಕೆಲವೊಮ್ಮೆ ಜೋರಾಗಿ ವಟಗುಟ್ಟು ತಿದ್ದನು. ಇನ್ನು ಕೆಲವು ವೇಳೆ ಕೆಳಕ್ಕೆ ಬಿದ್ದರೂ ನಿಶ್ಯಬ್ದವಾಗಿ ಹೋರಾಡು ತಿದ್ದನು. ತಲೆ ಸುತ್ತು ಬಂದರೆ ಮೂರ್ಛ ಹೋಗದಂತೆ, ಕಣ್ಣುಜ್ಜಿಕೊಳ್ಳು ತಿದ್ದನು. ಆತನು ಹಕ್ಕಿಯನ್ನು ಎಡಬಿಡದೆ ಅಟ್ಟಿಕೊಂಡು ಬರುತ್ತಿದ್ದನು. ಚೌಗು ಕಣಿವೆಯನ್ನೂ ಇಳಿದಾಯಿತು. ಆ ಚೌಗು ಪ್ರದೇಶದಲ್ಲಿ ಹೆಜ್ಜೆ ಗುರುತುಗಳು ಕಂಡವು ! ತನ್ನದಂತೂ ಅಲ್ಲವೆಂಬುದು ಸ್ಪಷ್ಟವಾಗಿದೆ. ಹಾಗಿದ್ದ ಮೇಲೆ ಬಿಲ್‌ನ ಹೆಜ್ಜೆ ಗುರುತೇ ಇರಬೇಕು ! ಆದರೆ ತಾನು ನಿಲ್ಲಲು ಅವಕಾಶವಿಲ್ಲ; ಏಕೆಂದರೆ ತಾಯಿ ಹಕ್ಕಿ ಓಡುತ್ತಾ ಇತ್ತು. ಹಕ್ಕಿಯನ್ನು ಹಿಡಿಯುವುದು ಮೊದಲ ಕರ್ತವ್ಯ. ಆಮೇಲೆ ಹಿಂತಿರುಗಿ ನಿರಾತಂಕವಾಗಿ ಹೆಜ್ಜೆ ಗುರುತುಗಳನ್ನು ಪರೀಕ್ಷಿಸಬಹುದು ... ತಾಯಿ ಹಕ್ಕಿಯನ್ನು ಓಡಿಸಿ ಬಳಲಿಸಿದನು ; ಜೊತೆಗೆ ತಾನೂ ಬಳ ಲಿದನು. ಒಂದು ಕಡೆ ಹಕ್ಕಿ ಉಸಿರೆಳೆಯುತ್ತಾ ಬಿದ್ದು ಕೊಂಡಿತು. ಅಲ್ಲಿಂದ ಹನ್ನೆರಡು ಅಡಿಗಳ ದೂರದಲ್ಲೇ ಮನುಷ್ಯನೂ ಮೇಲುಸಿರುಬಿಡುತಿದ್ದನು ; ಅಷ್ಟು ಹತ್ತಿರವಿದ್ದರೂ ಹಕ್ಕಿಯ ಬಳಿ ತೆವಳಲೂ ಸಾಧ್ಯವಿರಲಿಲ್ಲ. ಸ್ವಲ್ಪ ಕಾಲದಲ್ಲಿ ಅವನು ಚೇತರಿಸಿಕೊಂಡನು. ಅಷ್ಟರಲ್ಲಿ ಹಕ್ಕಿಯೂ ಹೊಸಜೀವ ಬಂದಂತೆ ಉಸಿರೆಳೆಯಿತು. ಅವನ ಹಸಿದ ಕೈಗಳು ಚಾಚಿದಾಗ, ಹಕ್ಕಿಯು ಸಿಗದೆ ಮುಂದಕ್ಕೋಡಿತು. ಬೇಟೆ ಮುಂದುವರಿಯಿತು. ಆದರೇನು ? ರಾತ್ರಿ ಯಾಯಿತು ; ಕತ್ತಲು ಕವಿಯಿತು, ಹಕ್ಕಿಯು ತಪ್ಪಿಸಿಕೊಂಡಿತು. ನಾಯಕನು