ಪುಟ:ಬಾಳ ನಿಯಮ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ತಿನ್ನೋಣ ಬಾ,' ಎಂಬ ಒಂದೇ ಪದ ಅವನನ್ನು ವಶಪಡಿಸಿಕೊಂಡಿತ್ತು. ಅವನು ಹಸಿವಿನಿಂದ ಹುಚ್ಚನಾಗಿದ್ದನು. ತಾನು ಯಾವ ದಾರಿಯಲ್ಲಿ ಹೋಗು ತಿದ್ದೇನೆಂಬ ಅರಿವೂ ಅವನಿಗಿಲ್ಲ. ಕೈಗೆ ಸಿಕ್ಕಿದ್ದನ್ನು ಸುಲಭವಾಗಿ ಎಳೆದು ತಿನ್ನುವಂಥ ಸರಾಗ ಮಾರ್ಗವಿದ್ದರೆ ಸಾಕು, ಕೊರೆಯುವಂಥ ಹಿಮದಲ್ಲೂ, ನೀರು ತುಂಬಿದ ಮಸೈಗ್ ಕಾಯಿಗಳನ್ನು ಅವನು ಕೀಳಬಲ್ಲ. ಎಷ್ಟೋ ಇಂಚುಗಳ ಹಿಪುದಲ್ಲಿ ಅಡಗಿದ್ದ ಸಣ್ಣ ಸಣ್ಣ ಸಸಿಗಳನ್ನೂ ಬಿಡಲಾರ. ಆ ರಾತ್ರಿ ಅವನ ಪಾಲಿಗೆ ಬಿಸಿನೀರೂ ಇಲ್ಲ. ಅಂಥ ಹಿಮದಲ್ಲಿ ಬೆಂಕಿ ಯನ್ನು ಹೊತ್ತಿಸುವ ಸಂಭವವೇ ಇಲ್ಲ. ಅಂತೂ ಅತೃಪ್ತ ಹಸಿವನ್ನು ಮಲುಗಿ ಸಲು ತನ್ನ ಕಂಬಳಿಯ ಮರೆಹೊಕ್ಕನು ಆ ಮಹಾನಾಯಕ, ಘನಹಿಮ, ಶೀತಲ ಮಳೆಯಾಗಿ ಪರಿಣಮಿಸಿತು. ಮುಖಕ್ಕೆ ಸರಿಯಾಗಿ ಹನಿಬಿದ್ದು, ಎಷ್ಟೋ ವೇಳೆ ಅವನಿಗೆ ಎಚ್ಚರಿಕೆಯಾಗುತ್ತಿತ್ತು. ಯಥಾಪ್ರಕಾರ ನಿಸ್ಸಾರ ಹಗಲು ಕಾಣಿಸಿಕೊಂಡಿತು. ಮಳೆ ಮುಕ್ತಾ ಯವಾಯಿತು. ಮನುಷ್ಯನನ್ನ ಕಂಗೆಡಿಸಿದ್ದ ಹಸಿವಿನ ತೀವ್ರತೆ ಹೊರಟು ಹೋಯಿತು. ಆಹಾರಕ್ಕಾಗಿ ಒದ್ದಾಡಿ ಇಡೀ ನರಜಾಲದಲ್ಲಿ ಅಲ್ಲೋಲ ಕಲ್ಲೋಲ ನಡೆಸಿದ, ಸಂವೇದನಶಕ್ತಿಯೂ ಮುಕ್ತಾಯವಾಯಿತು. ಜಠರದಲ್ಲಿ ಸ್ಪಷ್ಟವಾಗಿ ತಿಳಿಯದಂಥ ಒಂದು ರೀತಿಯ ಭಾರವಾದ ನೋವಿತ್ತು ; ಆದರೆ ನಾಯಕನ ಗಮನವನ್ನು ಸೆಳೆಯುವಷ್ಟು ಪ್ರಮುಖವಾಗಿರಲಿಲ್ಲ. ಈಗ ಅವನಲ್ಲಿ ಬುದ್ದಿಜೀವಿಯ ಅಂಶ ಹೆಚ್ಚಾಗಿದೆ ; ಮತ್ತೆ ಡೀಸ್ ನದಿ, ಸ್ಥಳ ಮುಂತಾದುವು ಗಳ ಮೇಲೆ ತೀವ್ರಾಸಕ್ತನಾದನು. ತನ್ನ ಕಂಬಳಿಯನ್ನು ಮತ್ತಷ್ಟು ಕಿರಿದ ಗಲದ ತುಂಡುಗಳನ್ನಾಗಿ ಹರಿದು ಹಾಕಿದನು. ರಕ್ತ ಸುರಿಯುತ್ತಿದ್ದ ಕಾಲಿಗೆ ಅವುಗಳನ್ನು ಬಿಗಿದು ಕಟ್ಟಿದನು. ಮೂಸ್ ಚರ್ಮವು ಅತಿ ಭಾರವಾಗಿದ್ದ ರಿಂದ ಹೊರಲು ಸ್ವಲ್ಪ ಅನುಮಾನ ಪಟ್ಟನು. ಆದರೂ ಕಡೆಗೆ ಮೇಲೇರಿಸಿ ದನು. ಒಟ್ಟಿನಲ್ಲಿ ಮತ್ತೊಂದು ದಿನದ ಪ್ರಯಾಣಕ್ಕೆ ಸಿದ್ಧನಾದನು. ಮಳೆಯ ಹೊಡೆತದಿಂದ ಮಂಜುಗಡ್ಡೆಗಳು ಕರಗಿಹೋದವು. ಬೆಟ್ಟದ ಮೇಲುಭಾಗಗಳು ಮಾತ್ರ ಬೆಳ್ಳಗೆ ಇದ್ದವು. ಅಂತೂ ಸೂರ್ಯನು ಕಾಣಿಸಿ ಕೊಂಡನು. ತಾನು ದಾರಿ ತಪ್ಪಿದ್ದೇನೆಂದು ತಿಳಿದರೂ ನಾಯಕನು ಅಥೈರ್ಯ ಪಡಲಿಲ್ಲ. ದಿಕ್ಸೂಚಿಯ ರೇಖೆಗಳನ್ನು ಪರೀಕ್ಷಿಸಿ ಜಯಶಾಲಿಯಾದನು. ಹಿಂದಿನ ದಿನಗಳ ಅಲೆದಾಟದಲ್ಲಿ ತಾನು ಹೆಚ್ಚಾಗಿ ಎಡಭಾಗದ ಪ್ರದೇಶಗಳಿಗೇ ವಾಲಿದಂತೆ ಕಂಡುಬರುತ್ತದೆ ; ಇದ್ದರೂ ಇರಬಹದು. ಅಡ್ಡದಾರಿಯ