ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮಲಗಿದ್ದರೆ ಪ್ರಯೋಜನವಿಲ್ಲವೆಂದು ಎದ್ದು ಕುಳಿತನು. ಆತುರದಿಂದ ಹತ್ತಿರದ ಸಾಮಗ್ರಿಗಳನ್ನು ನೋಡಿಕೊಂಡನು. ಕಾಲಿಗೆ ಸುತ್ತಿದ್ದ ಬಟ್ಟೆಯ ಚೂರುಗಳು ಮತ್ತಷ್ಟು ಹರಿದು ಹೋಗಿದ್ದವು. ಕಾಲು ವಿಕಾರವಾಗಿ ಹಸಿ ಮಾಂಸದ ಮುದ್ದೆಯಂತಿತ್ತು. ಕಡೆಯದಾಗಿ ಉಳಿದಿದ್ದ ಕಂಬಳಿಯೂ ಮಾಯವಾಗಿತ್ತು, ಬಂದೂಕವಾಗಲಿ, ಚಾಕುವಾಗಲಿ ಸಮಿಾಪದಲ್ಲಿ ಕಾಣಲಿಲ್ಲ. ಹೇಗೆ ಕೈ ತಪ್ಪಿ ಜಾರಿತೋ ಆಶ್ಚರ್ಯ. ಜೊತೆಗೆ ಹ್ಯಾಟೂ ಕಳೆದುಹೋಗಿದೆ; ಅದರೊಳಗಿನ ಬೆಂಕಿಕಡ್ಡಿಗಳು ನೀರು ಪಾಲಾದವು. ಆದರೆ ತನ್ನ ಎದೆಯ ಮೇಲಿನ ಕಡ್ಡಿಗಳು ಸುರಕ್ಷಿತವಾಗಿದೆ ! ಎಣ್ಣೆ ಕಾಗದದಲ್ಲಿ ಸುತ್ತಿ ಹೊಗೆ ಸೊಪ್ಪಿನ ಚೀಲದಲ್ಲಿ ಹಾಕಿರುವುದರಿಂದ, ಒಣಗಿರಬೇಕು. ಗಡಿಯಾರದ ಕಡೆ ನೋಡಿದನು. ಹನ್ನೊಂದು ಘಂಟಿ ; ಇನ್ನೂ ನಡೆಯುತಿತ್ತು. ಅಂದಮೇಲೆ ತಾನು ಹಿಂದಿನ ದಿನ ಕೀಲುಕೊಟ್ಟಿರಲೇ ಬೇಕು. ಅವನು ಶಾಂತನಾಗಿ ಧೈರ್ಯ ತಂದುಕೊಂಡನು. ತುಂಬಾ ದುರ್ಬಲ ನಾಗಿದ್ದರೂ, ನರಳಾಟದ ಪ್ರಜ್ಞೆಯೇ ಅವನಿಗಿರಲಿಲ್ಲ. ಹಸಿವೂ ಹೊರಟು ಹೋಗಿತ್ತು. ಆಹಾರದ ಬಗ್ಗೆ ಯೋಚಿಸುವುದೂ ಅವನಿಗೆ ಬೇಡವಾಗಿತ್ತು. ಇಲ್ಲಿಯ ತನಕ ತಾನು ಮಾಡಿದ್ದೆಲ್ಲ ಕೇವಲ ಬುದ್ದಿ ಬಲದಿಂದಲೇ ಪ್ರಚೋದಿತ ವಾದದ್ದು ಎಂದು ತರ್ಕಿಸಿದನು. ಹಾಕಿಕೊಂಡ ಬಟ್ಟೆಯನ್ನೇ ಉದ್ದಕ್ಕೆ ಕತ್ತರಿಸಿ ಕಾಲಿಗೆ ಬಿಗಿದುಕೊಂಡನು. ಅಂತೂ ಟನ್ನು ಬಕೆಟ್ಟನ್ನು ಹೇಗೋ ಮಾಡಿ ಉಳಿಸಿಕೊಂಡಿದ್ದನು. ಈಗ ಅದರಿಂದ ಎಷ್ಟೋ ಪ್ರಯೋಜನವುಂಟು ; ಏಕೆಂದರೆ ಹಡಗನ್ನು ಸೇರಲು ಭಯಂಕರ ಪ್ರಯತ್ನವನ್ನೇ ನಡೆಸಬೇಕು ; ಪ್ರಾರಂಭದಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳಲು ಬಿಸಿ ನೀರು ಬೇಕಲ್ಲ.........

  • ಅವನ ಚಲನವಲನಗಳು ನಿಧಾನವಾಗಿದ್ದವು. ಪಕ್ಷವಾತ ಹಿಡಿದವನಂತೆ ನಡುಗುತ್ತಿದ್ದನು. ಒಣ ಕಡ್ಡಿಗಳನ್ನು ಶೇಖರಿಸಲು ಆರಂಭಿಸಿದನು. ಆದರೆ ತನ್ನ ಕಾಲ ಮೇಲೆ ತಾನು ಭದ್ರವಾಗಿ ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಪ್ರಯತ್ನ ಮಾಡಿದನು. ಕಡೆಗೆ ಮೊಣಕಾಲು ಮತ್ತು ಕೈಗಳನ್ನು ಮುಂದಿಡುತ್ತಾ ತೆವಳಿಹೋಗುವುದರಲ್ಲೇ ತೃಪ್ತನಾಗಬೇಕಾಯಿತು. ಹಾಗೆಯೆ ತೆವಳುತ್ತಾ, ಖಾಯಿಲೆಯ ತೋಳನ ಹತ್ತಿರ ಬಂದನು. ಆ ಪ್ರಾಣಿಯು ಅವನ ದಾರಿಗೆ ಅಡ್ಡ ಬರಲಿಲ್ಲ. ತಕ್ಷಣ ಮನಸ್ಸಿಲ್ಲದೆ ಹಿಂದಕ್ಕೆ ಸರಿಯಿತು. ಆಹಾರದ ನೀರಿಕ್ಷಣೆಯಿಂದ ತುಟಿ ಸವರಿಕೊಂಡಿತು. ನಾಲಿಗೆಯನ್ನು ತಿರುಗಿಸುವಷ್ಟು ಶಕ್ತಿಯೂ ಅದಕ್ಕಿರಲಿಲ್ಲ. ನಾಲಿಗೆಯ ಬಣ್ಣ ಆರೋಗ್ಯ ಸೂಚಿಸುವಂಥ