ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ non ಕೆಂಪು ಬಣ್ಣ ವಾಗಿರಲಿಲ್ಲ. ಕಂದು ಬಣ್ಣದಿಂದ ಹಳದಿಗೆ ತಿರುಗಿತ್ತು. ಅದರ ಮೇಲೆ ಒರಟಾದ ಮತ್ತು ಅರ್ಧ ಒಣಗಿದ ಲೋಳೆಯ ಪದಾರ್ಥವನ್ನು ಸವರಿ ದಂತಿತ್ತು. ಒಂದು ಕ್ವಾರ್ಟ್ ಬಿಸಿ ನೀರು ಕುಡಿದ ಮೇಲೆ ಸ್ವಲ್ಪ ಉತ್ಸಾಹ ಬಂತು. ತಾನು ನಿಂತುಕೊಳ್ಳಲು ಶಕ್ತನಾಗಿದ್ದೇನೆಂದು ಭಾವಿಸಿದನು. ಸಾಯುತ್ತಿರುವ ಮನುಷ್ಯನೂ ಮುಂದೆ ಮುಂದೆ ನಡೆಯುತ್ತಾನೆ ಎಂದು ವಾಡಿಕೆಯಾಗಿ ಹೇಳುವುದಿಲ್ಲವೇ ? ಅದರಂತೆಯೆ ತಾನು ಕೂಡ ನಡೆಯಲು ಆಸ್ಪದವುಂಟು.... ಪ್ರತಿ ನಿಮಿಷಕ್ಕೂ ನಿಂತು ನಿಂತು ಅವನು ವಿಶ್ರಾಂತಿ ಪಡೆಯಲೇಬೇಕಾಯಿತು. ಆಗಲೋ ಈಗಲೋ ಎಂಬಂತೆ ನಿತ್ರಾಣಗೊಂಡಿದ್ದನು ; ಅದನ್ನು ಅವನ ಹೆಜ್ಜೆ ಗಳೇ ಸೂಚಿಸುತಿದ್ದವು. ಪ್ರಾಣಿಯೂ ಕೂಡ ಅವನ ಹಾಗೆಯೆ ಹೆಜ್ಜೆ ಹಾಕುತ್ತ ಹಿಂಬಾಲಿಸಿತು. ಆ ರಾತ್ರಿಯಂತೂ ವಿಪರೀತ ಕತ್ತಲೆ ; ಅದು ಸಮುದ್ರದ ಹೊಳಪನ್ನೂ ಮರೆಮಾಡಿತು. ಸಮುದ್ರಕ್ಕೆ ಸೇರಬೇಕಾದರೆ ನಾಲ್ಕು ಮೈಲಿಗಳ ಮೇಲಿಲ್ಲವೆಂದು ಅವನು ತಿಳಿದಿದ್ದನು. ರಾತ್ರಿಯಲ್ಲಿ ಎಡಬಿಡದೆ ತೋಳ ಕೆಮ್ಮುತ್ತಿದ್ದುದನ್ನು ಅವನು ಕೇಳಿದನು. ಮಧ್ಯೆ ಮಧ್ಯೆ ಕ್ಯಾರಿಬೌ ಮರಿಗಳು ಚೀರುತಿದ್ದವು.

  • ಅವನ ಸುತ್ತಲೂ ಶಕ್ತಿಯುತವಾದ ಉತ್ಸಾಹಿ ಜೀವಿಗಳಿದ್ದವು. ಖಾಯಿಲೆ ಯಿಂದ ನರಳುತ್ತಿರುವ ಈ ತೋಳವು ಖಾಯಿಲೆಯುಳ್ಳ ತನ್ನನ್ನೇ ಹಿಂಬಾಲಿಸಲು ಕಾರಣವೇನು? ಏನೊ ಭರವಸೆಯಿರಬೇಕು. ತನಗೆ ತಿಳಿದಂತೆ, ಮನುಷ್ಯನೇ ಮೊದಲು ಸಾಯಬಹುದು ಎಂಬ ಭಾವ ಪ್ರಾಣಿಯ ಮನಸ್ಸಿನಲ್ಲಿ ಹುಟ್ಟಿರ ಬೇಕು ; ಅದಕ್ಕಾಗಿಯೇ ತನ್ನನ್ನು ಬೆನ್ನಟ್ಟಿ ಬರುತ್ತಿರಬೇಕು! * ಬೆಳಗಿನ ಜಾವ ಕಣ್ಣು ಬಿಟ್ಟು ನೋಡಿದನು. ತೋಳ ಅಲ್ಲಿಯೇ ಇತ್ತು. ಹಸಿವಿನ ಹಿನ್ನೆಲೆಯಲ್ಲಿ ಯಾವುದೋ ಆಸೆಯಿಂದ ಮನುಷ್ಯನನ್ನೇ ದಿಟ್ಟಿಸಿ ನೋಡುತಿತ್ತು. ಬಾಲವನ್ನು ಕಾಲುಗಳ ಮಧ್ಯೆ ಸೇರಿಸಿ ಮುದುರಿಕೊಂಡು ನಿಂತಿತ್ತು. ದುರವಸ್ಥೆಗೀಡಾದ, ಮಂಕುಕವಿದ ನಾಯಿಯಂತೆ ಕಂಡಿತು. ಬೆಳಗಿನ ಚಳಿಯನ್ನು ತಡೆಯಲಾರದೆ ಪ್ರಾಣಿಯು ನಡುಗಿತು. ಅದನ್ನು ಮಾತನಾಡಿಸುವವನಂತೆ ಮನುಷ್ಯನು ವಟಗುಟ್ಟಿದನು. ಆದರೆ ಪ್ರಾಣಿಯು ಯಾವ ಉತ್ಸಾಹವನ್ನೂ ತೋರ್ಪಡಿಸದೆ ಹಲ್ಲುಕಿರಿಯಿತು.

ಸೂರ್ಯನು ಆಗಸದಲ್ಲಿ ಬೆಳಗುತ್ತಾ ಮೇಲೇರುತಿದ್ದನು. ನಾಯಕನ ದೃಷ್ಟಿ ಮಾತ್ರ ಸೂರ್ಯನ ಪ್ರತಿಛಾಯೆಯಂತಿದ್ದ ಸಮುದ್ರದ ಮೇಲಿತ್ತು: ಅದ