ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ಬಾಳ ನಿಯಮ ರಲ್ಲ ಹಡಗಿನ ಮೇಲೆಯೆ ವಾಲಿತ್ತು. ವಾಯುಗುಣ ಹಿತಕರವಾಗಿತ್ತು. ಹೆಚ್ಚು ಅಕ್ಷಾಂಶದ ಸಂಕ್ಷಿಪ್ತ ಬೇಸಿಗೆಯಂತಿತ್ತು. ಹೀಗೆಯೇ ಇರುವುದೆಂದು ನೆಚ್ಚಿ ಕೊಳ್ಳುವುದು ಸರಿಯಲ್ಲ. ಒಂದು ವಾರವೂ ಈ ರೀತಿ ಇರಬಹುದು, ಇಲ್ಲವೇ ನಾಳೆಯೇ ವಾಯುಗುಣ ಬದಲಾಯಿಸಬಹುದು.... ಮಧಾಹ್ನ ಮನುಷ್ಯನಿಗೆ ಸಂಶಯವುಂಟಾಯಿತು ; ಏಕೆಂದರೆ ತಾನು ಹೋಗುತ್ತಿದ್ದ ದಾರಿ ಯಾರೋ ತುಳಿದ ದಾರಿಯಾಗಿತ್ತು. ಅಂದರೆ, ಮತ್ತೊಬ್ಬ ಮನುಷ್ಯ ತನಗಿಂತ ಮುಂಚೆ ಆ ದಾರಿಯಲ್ಲಿ ಪ್ರಯಾಣ ಮಾಡಿರ ಬೇಕು. ಗುರುತುಗಳನ್ನು ನೋಡಿದರೆ ಕಾಲ ಮೇಲೆ ನಡೆದಂತೆ ತೋರು ವುದಿಲ್ಲ. ಆತ ನಾಲ್ಕು ಕಡೆಯೂ ಭಾರ ಹಾಕಿ ದೇಹವನ್ನು ಎಳೆದಿರಬೇಕು.... ಆ ವ್ಯಕ್ತಿಯೇ ತನ್ನ ಸ್ನೇಹಿತ ಬಿಲ್ ಇರಬಹುದು!-ಎಂದು ನಾಯಕನು ಒಮ್ಮೆ ಯೋಚಿಸಿದನು. ಆದರೆ ಅವನು ಅದನ್ನು ತಲೆಗೆ ಹಚ್ಚಿಕೊಳ್ಳುವಷ್ಟು ಆಸಕ್ತಿಯಿಂದ ವಿವೇಚಿಸಲಿಲ್ಲ. ಅಂಥ ಕುತೂಹಲವೂ ಇಲ್ಲ. ವಾಸ್ತವವಾಗಿ ಹೇಳುವುದಾದರೆ, ಅವನಲ್ಲಿ ಭಾವೋದ್ರೇಕ ಪ್ರವೃತ್ತಿ ಕೊಂಚಮಟ್ಟಿಗೂ ಉಳಿದಿರಲಿಲ್ಲ. ನರಳಾಟದಲ್ಲಿ ನರಳಲೇಬೇಕೆಂಬ ನಿಯಮವನ್ನು ಉಲ್ಲಂಘಿ ಸಿದ್ದನು. ಹೊಟ್ಟೆಯ ಕರುಳು ತೊಂದರೆಪಡಿಸದೆ ಮಲಗಿತ್ತು. ಆದರೂ ಒಳಗಿದ್ದ ಜೀವ ಅವನನ್ನು ಮುಂದುವರಿಯುವಂತೆ ಮಾಡಿತು. ಅವನು ಆಯಾಸಪಟ್ಟಿದ್ದರೂ, ಜೀವ ಹೆದರಲಿಲ್ಲ. ಸಾಯಲು ಪ್ರತಿಭಟಿಸುತ್ತಿರುವ ಆ ಜೀವಕ್ಕಾಗಿಯೆ ಅವನು ಸಣ್ಣ ಸಣ್ಣ ಮಸೈಗ್, ಮಿನೋಗಳನ್ನು ತಿಂದದ್ದು ; ಹಾಗೂ ಬಿಸಿನೀರು ಕುಡಿದು ಹುಷಾರಿನಿಂದ ರೋಗಿಷ್ಟ ತೋಳನನ್ನು ನೋಡಿದ್ದನು. ತನ್ನ ಸ್ನೇಹಿತನ ದಾರಿಯಲ್ಲೇ ನಡೆದನು. ಬೇಗನೆ ಕೊನೆ ಮುಟ್ಟಿದಂತಾ ಯಿತು. ನೆಲ ತುಂಬ ತೇವಗೊಂಡಿತ್ತು. ಅಲ್ಲಿ ಅನೇಕ ತೋಳಗಳ ಹೆಜ್ಜೆ ಗುರುತು ಎದ್ದು ಕಾಣುತ್ತಿತ್ತು. ಹತ್ತಿರದಲ್ಲಿ ಎಲುಬುಗಳಿದ್ದವು ; ಆಗತಾನೆ ದೇಹದಿಂದ ಎಳೆದಿರಬಹುದಾದ ಹೊಸ ಎಲುಬುಗಳು ! ದೊಡ್ಡ ಮೂಸ್ ಚರ್ಮದ ಗಂಟು ಕಾಣಿಸಿತು, ತನ್ನದು ಇದ್ದ ಹಾಗೆಯೆ ಇತ್ತು ; ಆದರೆ ಚೂಪು ಹಲ್ಲಿನ ಕಡಿತದಿಂದ ಚೂರು ಚೂರಾಗಿತ್ತು. ತೂಕವಾಗಿದ್ದರೂ ಅದನ್ನು ಎತ್ತಿ ಕೊಂಡನು. ಯಾರದಿರಬಹುದು ? ಈಗ ಹೊಳೆಯಿತು. ತನ್ನ ಸ್ನೇಹಿತ ಬಿಲ್ ಇದನ್ನು ಕಡೆಯ ತನಕ ಒಯ್ದಿದ್ದಾನೆ !....ಬಿಲ್ ಏನಾದರೂ ನನಗೆ ಸಿಕ್ಕಿದರೆ ನಕ್ಕು ಬಿಡುತ್ತೇನೆ ! ಏತಕ್ಕಾಗಿ ಚೂರು ಚೂರು ಮಾಡಿಸಿದ್ದಾನೋ