ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮಾಡಬಹುದಿತ್ತು. ಆದರೆ ದೌರ್ಬಲ್ಯದಿಂದ ತನ್ನನ್ನು ತಾನು ನಂಬಲು ಆಶಕ್ತ ನಾಗಿದ್ದನು. ತನಗೂ ಹಡಗಿಗೂ ಇರುವ ಅಂತರ ಈಗ ಮೂರು ಮೈಲಿಗಳಷ್ಟು, ಕಡಿಮೆಯಾಗಿದೆಯೆಂದು ಲೆಕ್ಕಾಚಾರ ಹಾಕಿದನು. ನಾಳೆಯ ದಿನ ಇನ್ನೂ ಎರಡು ಮೈಲಿ ಕಡಿಮೆಯಾಗುತ್ತೆ ; ಏಕೆಂದರೆ ತಾನು ಬಿಲ್‌ನಂತೆ ತೆವಳು ವುದನ್ನು ನಿಲ್ಲಿಸಿಲ್ಲ ಎಂದು ಯೋಚಿಸಿದನು. ಐದು ದಿನಗಳು ಉರುಳಿದವು. ಮತ್ತೆ ಸಿಂಗಾವಲೋಕನ ಮಾಡಿದಾಗ, ತಾನು ಹಡಗಿಗೆ ಇನ್ನೂ ಏಳು ಮೈಲಿ ಗಳ ದೂರವಿದ್ದೇನೆಂದು ತಿಳಿಯಿತು. ಈಗಂತೂ ದಿನಕ್ಕೆ ಒಂದು ಮೈಲಿ ದೂರ ಸಾಗುವುದಕ್ಕೂ ತ್ರಾಣವಿಲ್ಲ. ಆದರೂ ಇಂಡಿಯದ ಬೇಸಗೆ ಉತ್ಸಾಹಕರ ವಾಗಿಯೇ ಇತ್ತು. ಆದ್ದರಿಂದಲೇ ಮಧ್ಯೆ ಮಧ್ಯೆ ಮೂರ್ಛಬಿದ್ದರೂ, ತೆವಳುತ್ತಲೇ ಇದ್ದನು. ಅಕ್ಕ ಪಕ್ಕದಲ್ಲಿ ನೋಡಿಕೊಂಡು ಹೊರಟನು. ಒಂದೇ ಸಮನೆ ರೋಗಿಷ್ಟ ತೋಳ ಗನ್ ಗಸ್ ಎಂದು ಉಬ್ಬಸಪಡುತ್ತಾ ಬೆನ್ನಟ್ಟಿ ಬರುತಿತ್ತು. ಅವನ ಪಾದಗಳಂತೆ ಮೊಣಕಾಲೂ ಕೂಡ ಮಾಂಸದ ಮುದ್ದೆಯಾಗಿತ್ತು. ಎಷ್ಟು ಬಿಗಿದು ಕಟ್ಟಿದರೂ ಪ್ರಯೋಜನವಿಲ್ಲ. ಒಂದೇ ಸಮನೆ ಪಾಚಿ ನೆಲದ ಮೇಲೂ, ಕಲ್ಲುಬಂಡೆಯ ಮೇಲೂ ರಕ್ತ ಸುರಿಯುತಿತ್ತು. ಒಮ್ಮೆ ಹಿಂದುಗಡೆಗೆ ದೃಷ್ಟಿ ಹೊರಳಿಸಿದನು ; ತನ್ನ ಕಾಲುಗಳಿಂದ ಸುರಿದ ರಕ್ತಮಾರ್ಗವನ್ನು ಆ ತೋಳ ಕಂಗಾಲಾಗಿ ನೆಕ್ಕುತಿತ್ತು ! ಆ ಪ್ರಾಣಿಯನ್ನು ಕೊಲ್ಲದಿದ್ದರೆ, ತನ್ನ ಮುಂದಿನ ಗತಿ ಏನು ?-ಎಂದು ಅವನು ತೀವ್ರನೋಟ ಬೀರಿದನು. ಮತ್ತೆ ಕರಾಳ ಜೀವದ ದುರಂತ ನಾಟಕ ಆರಂಭವಾಯಿತು ರೋಗಿಯೊಬ್ಬ ತೆವಳು ತಿದ್ದಾನೆ ; ಖಾಯಿಲೆಯಿಂದ ಕುಂಟುತ್ತಾ ತೋಳವೊಂದು ಬರುತ್ತಿದೆ ; ಎರಡೂ ಪ್ರಾಣಿಗಳು ತಮ್ಮ ಶವದಂಥ ದೇಹವನ್ನೂ ಲಕ್ಷಿಸದೆ ಜೀವಕ್ಕಾಗಿ ಎಳೆದಾಡ ಹತ್ತಿವೆ; ಆ ಶೂನ್ಯರಂಗದಲ್ಲಿ ಎರಡೇ ಪಾತ್ರಗಳು.... ಒಂದು ಸಾರಿ ನಾಯಕನಿಗೆ ಅನ್ನಿಸಿತು : ಈ ತೋಳ ಬಲಿಷ್ಟವಾಗಿ ಇದ್ದಿದ್ದರೆ, ತಾನು ಅಷ್ಟಾಗಿ ಯೋಚಿಸುತ್ತಿರಲಿಲ್ಲ. ಅದು ಬಿಟ್ಟು, ಇನ್ನೇನು ಸಾಯುವಂತಿರುವ ಅಸಹ್ಯ ಹುಟ್ಟಿಸುವ ಪ್ರಾಣಿಯ ಹೊಟ್ಟೆಯನ್ನು ತುಂಬಿಸು ವುದೆಂದರೆ, ಅವನಿಗೆ ಒಗ್ಗಲಿಲ್ಲ. ಅವನು ಹೀಗೆಯೆ ಯೋಚಿಸುತ್ತಿದ್ದಂತೆ, ಭ್ರಾಂತಿಯ ಭಾವನೆಗಳು ಬರತೊಡಗಿದವು. ಹುಚ್ಚು ಆವೇಶಗಳ ನಡುವೆ ಬುದ್ದಿ ಸ್ಟಿಮಿತ ಕಡಿಮೆಯಾಗುತ್ತ ತಪ್ಪಿ ಹೋಯಿತು. ಈ ಒಮ್ಮೆ ಅವನ ಕಿವಿಯ ಹತ್ತಿರವೇ ಉಬ್ಬಸದ ಗೊಸಗೊಸ ಕೇಳಿಸಿದಾಗ,