ಪುಟ:ಬಾಳ ನಿಯಮ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ೧೦೫ ಸ್ವಲ್ಪ ಎಚ್ಚರವಾಯಿತು. ನಡೆಯಲಾಗದ ತೋಳ ಸರಕ್ಕನೆ ಹಿಂದಕ್ಕೆ ನೆಗೆ ಯಿತು. ನಿಶ್ಯಕ್ತಿಯಿಂದ ಅದರ ಕಾಲು ಜಾರಿತು. ನೋಡುವುದಕ್ಕೆ ಹಾಸ್ಯಾಸ್ಪದ ವಾಗಿತ್ತು, ಆದರೆ ನಾಯಕನು ನಗಲಿಲ್ಲ. ಅವನಿಗೆ ಹೆದರಿಕೆಯೂ ಆಗಲಿಲ್ಲ. ಅಂಥ ಪುಕ್ಕತನ ಅವನ ಸ್ವಭಾವದಿಂದ ಎಂದೋ ಓಡಿತ್ತು. ಆದರೆ ಆ ಕ್ಷಣದಲ್ಲಿ ಅವನ ಮನಸ್ಸು ನಿರ್ಮಲವಾಗಿತ್ತು. ಮಲಗಿಕೊಂಡೇ ಆಲೋಚಿಸಿದನು.... ಹಡಗಿನ ಸ್ಥಾನ ನಾಲ್ಕು ಮೈಲಿ ದೂರವನ್ನು ಮಾರಿಯೇ ಇಲ್ಲ. ಕಣ್ಣಲ್ಲಿ ಕಸ ತುಂಬಿದೆಯೇ ? ಕಣ್ಣುಜ್ಜಿ ನೋಡಿದರೂ, ಬೆಳ್ಳಗಿನ ನೌಕಾಪಟ ಸ್ಪಷ್ಟವಾಗಿ ಕಾಣುತ್ತಿದೆ! ಅದನ್ನು ಹೊತ್ತು ಸಣ್ಣ ದೋಣಿ ಬರುತ್ತಿದೆ. ಥಳಥಳಿಸುತ್ತಿರುವ ಸಮುದ್ರದ ನೀರನ್ನು ಝಾಡಿಸುತ್ತಿದೆ....ಆದರೆ ತಾನು ಇನ್ನು ಅರ್ಧ ಮೈಲಿ ಕೂಡ ತೆವಳಲು ಸಾಧ್ಯವಿಲ್ಲವೆಂದು ಗೊತ್ತಿದೆ. ಆದರೂ ತಾನು ಜೀವಿಸಲೇ ಬೇಕು ! ಅದೊಂದು ಸಂಕಲ್ಪ. ಇಷ್ಟೆಲ್ಲ ಕಷ್ಟ ಪಟ್ಟು ಸಾಯುವುದೆಂದರೆ ತರ್ಕ ಬದ್ಧವಾಗಿಲ್ಲ. ವಿಧಿ ತನ್ನನ್ನು ಬಹಳವಾಗಿ ಬಳಸಿಕೊಂಡಿದೆ. ಈಗ ತಾನು ಸಾವಿನ ಸೂತ್ರದಲ್ಲಿದ್ದರೂ, ಅದಕ್ಕೆ ಸಿಕ್ಕಿಕೊಳ್ಳದಂತೆ ಪ್ರಯತ್ನ ಮಾಡಬೇಕು. ಅವನದು ಶುದ್ಧ ಹುಚ್ಚುತನ. ಸಾವಿನ ಮುಷ್ಟಿಯನ್ನೇ ಎದುರಿಸಿ, ಗುದ್ದಾಡಲು ಹೊರಟಿದ್ದನು. ಅಬ್ಬ ! ಮೃತ್ಯುವಿಗೆ ಬಹಿರಂಗ ಸವಾಲು ; ಏನೇ ಆಗಲಿ ಸಾಯಲು ಒಪ್ಪವ ಪ್ರತಿಜ್ಞೆ. ಕಣ್ಣು ಮುಚ್ಚಿದನು; ಜಾಗರೂಕನಾಗಿ ಮುಂದಿನ ಕಾರ್ಯಕ್ಕೆ ತನ್ನನ್ನು ತಾನೆ ಅಳವಡಿಸಿಕೊಂಡನು....ದೇಹಾದ್ಯಂತ ಹರಿದು ಅಪ್ಪಳಿಸುತ್ತಿದ್ದ ನೀರು ತ್ಸಾಹದ ಅಲೆಗಳನ್ನು ಹಾದು ಮೇಲೇರುತಿದ್ದನು ; ಕೆಲವು ವೇಳೆ ಮುಳುಗಿ ಹೋದರೂ, ಇನ್ನೆಲ್ಲೋ ಕಾಣದಂತೆ ಹಜ್ಜೆ ಬಡಿದು ಈಜುತಿದ್ದನು. ಕಡೆಗಂತೂ ಆಶ್ಚರ್ಯಪಡಿಸುವಂತೆ ವಿಚಿತ್ರ ಆತ್ಮಶಕ್ತಿಯನ್ನು ವಿನಿಯೋಗಿಸಿ, ಮನ ಸೈರ್ಯದ ಬೆಂಡುಕಟ್ಟಿ ಹೊರಟನೆಂದರೆ ಕೇಳಬೇಕಾದ್ದೇ ಇಲ್ಲ !.... ರೋಗಿಷ್ಟ ತೋಳ ಸುಮ್ಮನಿರಲಿಲ್ಲ; ಏಕೆಂದರೆ ಅದರ ಮೇಲುಬ್ಬಸದ ಶ್ವಾಸ ನಿಶ್ವಾಸ ಮನುಷ್ಯನ ಹತ್ತಿರವೇ ಕೇಳಿಸುತ್ತಿತ್ತು. ನಿಧಾನವಾಗಿ ಅವನ ದೇಹವನ್ನು ಸವಿಾಪಿಸಿತು. ಆದರೂ ಮನುಷ್ಯ ಚಲಿಸಲಿಲ್ಲ. ಅವನ ಕಿವಿಯ ಬಳಿ ಬಂದು, ಆ ತೋಳ, ತನ್ನ ಒರಟಾದ ಒಣನಾಲಿಗೆಯನ್ನು ಕೆನ್ನೆಗೆ ಸವರಿತು. ಆಗ ಮನುಷ್ಯನಿಗೆ ಕೆನ್ನೆಯ ಮೇಲೆ ಮರಳು ಕಾಗದವನ್ನು ತಿಕ್ಕಿದಂತಾಯಿತು. ತನ್ನ ಕೈ ಚಾಚಿ, ಹೊಡೆಯಲು ಮನಸ್ಸು ಮಾಡಿದನು. ಅವನ ಬೆರಳು ಹಿಂಸ್ತ್ರ