ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೬ ಬಾಳ ನಿಯಮ ಪಕ್ಷಿಯ ಮೊನೆಯುಗುರಿನಂತೆ ಬಾಗಿತ್ತು. ಮುಷ್ಟಿಯಲ್ಲಿ ಬರಿಯ ಗಾಳಿಯನ್ನು ಒಳಕ್ಕೆ ಸೇರಿಸಿ ಹೊರಬಿಡುತಿದ್ದನು. ಚುರುಕಿನಿಂದ ಖಡಾಖಂಡಿತವಾಗಿ ವರ್ತಿಸುವಷ್ಟು ಶಕ್ತಿ ಮನುಷ್ಯನಲ್ಲಿರಲಿಲ್ಲ. ಈ ಪ್ರಾಣಿಯ ಸಹನೆ ಭೀಕರವಾಗಿತ್ತು. ಮನುಷ್ಯನ ಸಹನೆಯೂ ಆ ಮಟ್ಟಕ್ಕೆ ಬಂದಿತ್ತು, ಮನುಷ್ಯ ಸ್ಮತಿ ತಪ್ಪದಂತೆ ಒಳಗೊಳಗೆ ಹೊಡೆದಾಡುತ್ತಿದ್ದನು.... ಎಂಥ ಸನ್ನಿವೇಶ ಸಂಕಟ ಪ್ರಾಪ್ತವಾಗಿದೆ! ಪ್ರಾಣಿಯು ತನ್ನ ಮೇಲೆ ಬೀಳಲು ಹೊಂಚು ಹಾಕಿದೆ. ತಾನು ಕೂಡ ಪ್ರಾಣಿಯನ್ನು ಬಗೆದು ತಿನ್ನಲು ಕಾದಿರು ವನು. ಒಟ್ಟಿನಲ್ಲಿ ಎರಡು ಜೀವಿಗಳೂ ಪರಸ್ಪರ ಆಹಾರ ವಸ್ತುಗಳಾಗಿ ಮಾರ್ಪಾಟು ಹೊಂದಬೇಕು ! ಅದು ಹೇಗೆ ?.... ಅವನ ಎದುರಿಗೆ ನಿಸ್ತೇಜ ಸಮುದ್ರ ಉಕ್ಕೇರಿ ಬರುತಿತ್ತು. ಉದ್ದುದ್ದನೆಯ ಕನಸುಗಳು ಹಾದುಹೋದವು. ಮಧ್ಯೆ ಮಧ್ಯೆ ಎಚ್ಚರವಾದಾಗ ಪ್ಲಸ್ ಎಂದು ಸುತ್ತುವ ಗಾಳಿಯಿಂದ ಆವರಿಸಲ್ಪಟ್ಟು, ಒರಟು ನಾಲಿಗೆಯ ಮುದ್ದಾಟವನ್ನು ಅನುಭವಿಸುತ್ತಿದ್ದನು ! ಸ್ವಲ್ಪ ಹೊತ್ತಾದ ಮೇಲೆ ಉಸುರಿನ ಆರ್ಭಟ ಕೇಳಿಸಲಿಲ್ಲ. ಪ್ರಾಣಿಯ ನಾಲಗೆ ಅವನ ಕೈಯನ್ನು ಸವರಿತು. ಅವನು ಏನೂ ಮಾಡದೆ ಸುಮ್ಮನೆ ಕಾಯುತಿದ್ದನು, ತೋಳದ ಕೋರೆಹಲ್ಲು ಈಚೆಗೆ ಬಂದು ಮೆಲ್ಲಗೆ ಒತ್ತಲಾ ರಂಭಿಸಿತು; ಒತ್ತಡದ ಬಲ ಹೆಚ್ಚಾಯಿತು. ಇಲ್ಲಿಯ ತನಕ ಕಾದು ನೋಡಿದ್ದ ಆಹಾರ ಹತ್ತಿರ ಸಿಕ್ಕೇಬಿಟ್ಟಿತು ಎಂದು ಪ್ರಾಣಿಯು ಸಂತೋಷಪಟ್ಟಿರಬೇಕು ; ಆದ್ದರಿಂದಲೇ ಮನುಷ್ಯನ ದೇಹದೊಳಕ್ಕೆ ಹಲ್ಲನ್ನಿಳಿಸಲು ಸರ್ವ ಪ್ರಯತ್ನ ಮಾಡತೊಡಗಿತು, ಕೊನೆಯದಾಗಿ ಉಳಿದಿದ್ದ ಶಕ್ತಿಕಣವನ್ನೂ ಉಪಯೋಗಿಸಿತು. ಮನುಷ್ಯನೂ ಎಲ್ಲಿಯ ತನಕ ಕಾಯಬಲ್ಲ ? ಗಾಯಗೊಂಡಿದ್ದ ತನ್ನ ಕೈಯನ್ನು ಮೆಲ್ಲಗೆ ಸರಿಸಿ, ಪ್ರಾಣಿಯ ದವಡೆಯನ್ನು ಮುಚ್ಚಿ ಬಿಟ್ಟನು. ಮತ್ತೊಂದು ಕೈ ಆ ಕಡೆ ಬಳಸಿ ಪ್ರಾಣಿಯನ್ನು ಅಪ್ಪಿಕೊಂಡಂತಿತ್ತು, ಐದೇ ನಿಮಿಷಗಳು ! ಇಡೀ ಮನುಷ್ಯ ದೇಹದ ಭಾರ ತೋಳದ ಮೇಲಿತ್ತು. ಪ್ರಾಣಿಯ ಕತ್ತನ್ನು ಹಿಸುಕುವಷ್ಟು ಶಕ್ತಿ ಅವನ ಕೈ ಚಳಕದಲ್ಲಿರ ಲಿಲ್ಲ. ಆದರೆ ಮನುಷ್ಯನ ಮುಖ ನೋಡಬೇಕು; ಅದು ತೋಳದ ಗಂಟಲನ್ನು ಒತ್ತಿ ಹಿಡಿದಿತ್ತು ! ಅವನ ಬಾಯ ತುಂಬ ಕೂದಲು !........ 0