ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ೧೯೭ ಅವನ ಸೇವಕರೇ ನನ್ನ ಸೇವಕರೂ ಆಗಿದ್ದರು. ಅಷ್ಟೇಕೆ, ಅವನೇ ನನ್ನವ ನಾಗಿದ್ದನು ! ಹೂವಿನ ಕಿರೀಟದಿಂದ ಹಿಡಿದು ಕಾಲತುದಿಯತನಕ ಸಂತಸದ ಸಮುದ್ರದಲ್ಲಿ ಮುಳುಗಿಹೋಗಿದ್ದೆ. ನಾನು ಪ್ರೀತಿ ಯೋಗ್ಯ ಹೆಂಗಸಾಗಿದ್ದೆ.....” ಮತ್ತೊಮ್ಮೆ ಅವಳು ತುಟಿ ಕಚ್ಚಿದಳು. ನಿರ್ದಿಷ್ಟ ಗುರಿಯಿಲ್ಲದೆ ವಿಶಾಲ ಸಮುದ್ರದ ಕಡೆ ನೋಡಿದಳು. ಹಳೆಯ ನೆನಪುಗಳನ್ನು ಹೇಳಿಕೊಳ್ಳಲು ತನ್ನನ್ನು ತಾನೇ ಜಯಿಸಬೇಕಾಯಿತು.

  • “ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗಿಬಂದೆವು. ಬಹುಬೇಗ ಕಳೆದುಹೋಗುತಿದ್ದ ಎರಡು ವಾರಗಳಲ್ಲಿ ನಮ್ಮ ರಸಜೀವನ ಅಡಕವಾಗಿತ್ತು. ಹೂವು ಅರಳುವುದು ಒಂದೇ ಸಾರಿ. ಆಗ ನಾನು ಹೂವಾಗಿದ್ದೆ. ಭವ್ಯವಾದ ಹಿಲೋ ಕುದುರೆಯ ಮೇಲೆ ಕುಳಿತಿದ್ದೆ. ಪಕ್ಕದಲ್ಲಿ ಲಿಲೋಲಿಯೊ ಇದ್ದನು. ನಾನು ಹವಾಯಿಯ ರಾಣಿಯಾಗದಿದ್ದರೂ, ಲಿಲೋಲಿಯೋವಿನ ಪ್ರೇಯಸಿ ಯಾಗಿದ್ದೆ. ಅವನು ಹೇಳಿದ: ನೀನು, ವಿಶಾಲ ಸಮುದ್ರದ ಕಪ್ಪು ಹಿನ್ನೆಲೆ ಯಲ್ಲಿ ಬಣ್ಣ ಬಣ್ಣವಾಗಿ ಹೊಳೆಯುವ ನೀರ್ಗುಳ್ಳೆ; ಜ್ವಾಲಾಮುಖಿಯ ಹೊಗೆ ತಿಟ್ಟಿನ ಮೇಲೆ ನಾಜೂಕಾಗಿ ಬೀಳುವ ಮಂಜುಹನಿ; ಗುಡುಗುಡಿಸುವ ಮೋಡ ವನ್ನು ಹೊಡೆದಟ್ಟುವ ಕಾಮನಬಿಲ್ಲು....”

ಬೆಲ್ಲ ಒಂದು ಕ್ಷಣ ಕಾಲ ಸುಮ್ಮನಿದ್ದಳು. ತುಂಬು ಯೋಚನೆಯಿಂದ ಹೇಳಿದಳು : “ ಅವನು ನನ್ನನ್ನು ವರ್ಣಿಸಿದ ಪದಗಳು ಎಷ್ಟೋ ಇವೆ. ಹೆಚ್ಚು ಹೇಳಲಾರೆ. ಒಟ್ಟಿನಲ್ಲಿ ಅವನ ಪ್ರತಿ ಯೊಂದು ಮಾತೂ ಪ್ರೇಮದ ಕಿಡಿಯನ್ನು ಹೊತ್ತಿಸುತಿತ್ತು; ಸೌಂದರ್ಯದ ಸಾರವೆಲ್ಲಾ ಅದರಲ್ಲಿ ಅಡಗಿತ್ತು. ಪ್ರಣಯ ಗೀತಗಳನ್ನು ಕಟ್ಟಿ ನನ್ನೆದುರಿಗೆ ಹಾಡಿದನು....ರಾತ್ರಿಯ ಹೊತ್ತು ನಕ್ಷತ್ರಗಳನ್ನೇ ನೋಡುತ್ತ ಗುಂಪಿನವರು ತಮ್ಮ ತಮ್ಮ ಚಾಪೆಗಳ ಮೇಲೆ ಮಲಗಿ ಹಬ್ಬವನ್ನಾಚರಿಸಿದರು. ನಾನು ಲಿಲೋಲಿಲೊವಿನ 'ಮಕಿ' ಚಾಪೆಯ ಮೇಲೆ ಮೈ ಚಾಚಿ ಮಲಗಿದ್ದೆ; ಆಗಲೂ ಅವನ ಪ್ರಣಯ ಗೀತೆ ಕೇಳಿಸುತ್ತಿತ್ತು,

  • 'ಕಿ' ತಲಪುವ ವೇಳೆಗೆ ಕನಸು ಮುಕ್ತಾಯವಾಗುತ್ತ ಬಂತು. ಸಮುದ್ರ ಚಾಚಿನ ಜ್ವಾಲಾಮುಖಿಯ ಕಂದರಗಳಲ್ಲಿ ಅಡಗಿದ್ದ ಅಗ್ನಿದೇವತೆಗೆ ಕಾಣಿಕೆಯನ್ನ ರ್ಪಿಸಿದೆವು. ಮುಂದೆ ಮುಂದೆ ಪ್ರಯಾಣಮಾಡುತ್ತ 'ಕಾಲಪನ'ದ ತಿಳಿಯಾದ ಸಿಹಿ ನೀರಿನ ಕೊಳಗಳಲ್ಲಿ ಈಜಿದೆವು. ಕೊನೆಯದಾಗಿ ಸಮುದ್ರ ಮಾರ್ಗದಲ್ಲಿ ಹಿಲೋ ಕುದುರೆಯನ್ನು ಹಿಡಿದುಕೊಂಡು ನಿಂತೆನು.