ಪುಟ:ಬಾಳ ನಿಯಮ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ “ ಅಲ್ಲಿಗೆ ಕೊನೆ. ನಾವಿಬ್ಬರೂ ಏನೂ ಮಾತನಾಡಲಿಲ್ಲ. ಗೊತ್ತೇ ಇತ್ತು; ಹೇಳದಿದ್ದರೂ ತಾನಾಗಿಯೆ ತಿಳಿಯುವಂಧ ಪ್ರಸಂಗ, ರಾಜನೌಕೆ ಕಾದಿತ್ತು. ನಿರ್ದಿಷ್ಟ ದಿನಗಳಿಗಿಂತಲೂ ಹೆಚ್ಚು ಕಳೆದಿದೆ ವು. 'ಹೊನಲು 'ವಿ ನಿಂದ ಕರೆ ಬಂತು. ಅಲ್ಲಿನ ಸುದ್ದಿಯ ಪ್ರಕಾರ, ರಾಜನು ಹುಚ್ಚನಂತೆ ವರ್ತಿಸುತಿದ್ದಾನೆಂದು ತಿಳಿಯಿತು; ಕಾರಣ, ಕ್ಯಾಥೋಲಿಕ್ ಮತ್ತು ಪ್ರಾಟ ಸೈಂಟ್ ಮಿಷನರಿಗಳು ಸಂಚುಹೂಡಿದ್ದರು; ಫ್ರಾನ್ಸ್ ಪ್ರಭುತ್ವ ದೇಶದ ಒಳ ವ್ಯವಹಾರಕ್ಕೆ ಕೈಹಾಕಿ ಗಲಾಟೆಯೆಬ್ಬಿಸಿತ್ತು....ಎರಡು ವಾರಗಳ ಹಿಂದೆ ಕನ್ನೆಡೆ' ನಲ್ಲಿ ಇಳಿದಾಗ, ಎಷ್ಟು ಚೆನ್ನಾಗಿತ್ತು; ಹೂವೆರಚುವುದು, ಹಾಡು ವುದು, ನಗುವುದು ... ಇವುಗಳಲ್ಲೇ ಕಾಲ ಕಳೆದುಹೋಗಿತ್ತು. ಅಂಥವರನ್ನು ಈಗ ಬಿಟ್ಟುಕೊಡಬೇಕು. ಆದರೂ ಬೀಳ್ಕೊಡುವ ಸಮಾರಂಭ ಸಂತೋಷ ದಿಂದ ನಡೆಯಿತು. ಹಾಸ್ಯ ಕುಚೇಷ್ಟೆಗಳು ತುಂಬಿದ್ದವು. ಸಾವಿರಾರು ಕಡೆಯ ಸಂದೇಶಗಳು ಹೊರಬಿದ್ದವು....ನೌಕೆಯ ಲಂಗರನ್ನು ಬಿಚ್ಚಿದರು. ಹಡಗಿನ ಮೇಲಟ್ಟದಲ್ಲಿ ಹಾಡಿನ ಹುಡುಗರು ಬೀಳ್ಕೊಡುಗೆ ಪದವನ್ನು ಹಾಡು ತಿದ್ದರು. ಅವರೆಲ್ಲರೂ ಲಿಲೋಲಲೋವಿನ ಆಶ್ರಿತರು. ನಾವೆಲ್ಲರೂ ದೊಡ್ಡ ದೊಡ್ಡ ದೋಣಿಗಳಲ್ಲಿ ನಿಂತು ನೋಡುತ್ತಿದ್ದೆವು. ಮೊದಲ ಬೀಸುಗಾಳಿಗೆ ಹಡಗಿನ ನಟ ಏರಿತು. ದೂರದೂರ ಸರಿಯತೊಡಗಿತು....

  • ಗಲಿಬಿಲಿಯ ಸಂಭ್ರಮದಲ್ಲಿ ಲಿಲೋಲಿಯೊ ಎಷ್ಟೊ ಹಾಸ್ಯ ಚಟಾಕಿ ಗಳನ್ನು ಹಾರಿಸಬೇಕಿತ್ತು ! ಹತ್ತಾರು ಜನರಲ್ಲಿ ಕಡೇ ಮಾತುಗಳನ್ನು ಆಡ ಬೇಕಿತ್ತು ! ಆದರೆ ಒಂದೂ ಇಲ್ಲ; ಸುಮ್ಮನೆ ನನ್ನನ್ನು ನೋಡುತ್ತ ನಿಂತು ಬಿಟ್ಟನು. ನಾನು ಅವನ ತಲೆಯ ಮೇಲೆ ಹಾಕಿದ್ದ 'ಇಲಿವು' ಹೂ ಗೊಂಚಲು ಹಾಗೆಯೇ ಇತ್ತು. ರಾಜನೌಕೆಯಲ್ಲಿದ್ದ ಇತರರು ದೋಣಿಯಲ್ಲಿ ನಿಂತಿದ್ದ ತಮ್ಮ ತಮ್ಮ ವಿಶ್ವಾಸಿಗಳಿಗೆ ಹೂಗೊಂಚಲನ್ನು ಎಸೆಯುತಿದ್ದರು. ನನಗೆ ಮಾತ್ರ ಯಾವ ಭರವಸೆಯೂ ಇಲ್ಲ ...ಅದರೂ ನಂಬಿಕೆ ಕೆಡಲಿಲ್ಲ. ಸ್ವಲ್ಪ ಮಟ್ಟಿಗೆ ಚಾಪಲ್ಯವೂ ಇತ್ತು. ಇತರರಂತೆ ನಾನೂ ಜಂಭದಿಂದ ಉತ್ಸಾಹ ಗೊಂಡವಳಂತೆ ನಟಿಸಿದೆ. ಆದರೆ ನನ್ನ ಮನಸ್ಸಿನ ಅಳುಕು ನಿಜವಾಯಿತು. ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಸೂಸುವಂತೆ ನನ್ನನ್ನೇ ಅವನು ದಿಟ್ಟಿಸಿ ನೋಡಿದನು; ನಾನು ಕೊಟ್ಟಿದ್ದ ಸೊಗಸಾದ ಇಲಿಮ' ಹೂ ಗೊಂಚಲನ್ನು ತಲೆಯಿಂದ ತೆಗೆದು ಕಡಿದುಹಾಕಿದನು !....ತುಂಟ ಅಲುಗಿತು; ಮೆಲ್ಲಗೆ * ಮುಗಿಯಿತು !' ಎಂಬ ಒಂದೇ ಪದ ಹೊರಗೆ ಬಿತ್ತು. ಎರಡು ಭಾಗವಾಗಿದ್ದ