ಪುಟ:ಬಾಳ ನಿಯಮ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೋಹದ ಬಲೆಯಲ್ಲಿ ಹೂ ಗೊಂಚಲನ್ನು ಮತ್ತೆರಡು ಭಾಗ ಮಾಡಿದನು. ಪುನಃ ಚೂರುಚೂರಾಗಿ ಕತ್ತರಿಸಿದನು. ಅವುಗಳನ್ನು ನನ್ನ ಮೇಲಕ್ಕೆ ಎಸೆಯದೆ ವಿಶಾಲವಾದ ಕೆಳಗಿದ್ದ ಸಾಗರಕ್ಕೆ ಎಸೆದುಬಿಟ್ಟನು! ನಿಜ; ಅವನು ಹೇಳಿದಂತೆ ಎಲ್ಲ ಮುಗಿಯಿತು ...” ಬಹಳ ಹೊತ್ತು ಬೆಲ್ಲಳ ಶೂನ್ನ ದೃಷ್ಟಿ ಸಮುದ್ರದಾಚೆಯ ದಿಗಂತವನ್ನು ನೋಡುತಿತ್ತು. ಮಾರ್ಥಳು ಸಮಾಧಾನ ಮಾಡುವ ಧೈರ್ಯವನ್ನು ತೋರಲಿಲ್ಲ; ಅವಳ ಕಣ್ಣು ಗಳೇ ತೇವವಾಗಿದ್ದವು. ಬೆಲ್ಲಲೇ ಚೇತರಿಸಿಕೊಂಡು ಮಾತು ಮುಂದುವರಿಸಿದಳು. ಪ್ರಾರಂಭ ದಲ್ಲಿ ಅವಳ ಗಂಟಲು ಒಣಗಿ ಗಡಸಾಗಿತ್ತು. " ಮತ್ತಲ್ಲಿ ನಿಲ್ಲದೆ ದಿನವಿಡೀ ಹನಕುವಾ ಕರಾವಳಿಯಲ್ಲಿ ಸವಾರಿ ಮಾಡಿದೆ. ಮೊದಲನೆಯ ದಿನ ಅಷ್ಟು ಕಷ್ಟವಾಗಿ ತೋರಲಿಲ್ಲ. ಜೋವು ಹಿಡಿದವಳಂತೆ ಸುಮ್ಮನಿದ್ದೆ. ತಲೆಯ ತುಂಬ ಆಶ್ವರ್ಯಭಾವಗಳು ಸುಳಿದಾಡಿ, ಯಾವುದು ಮರೆಯಬೇಕೋ ಅದನ್ನು ಮರೆಯಲು ಅಸಾಧ್ಯವಾಯಿತು. ಆ ರಾತ್ರಿಯನ್ನು ಲಾಸಾಹೊ'ದಲ್ಲಿ ಕಳೆದೆ. ರಾತ್ರಿಯೆಲ್ಲಾ ನಿದ್ದೆ ಕೆಡ ಬೇಕೆಂದು ಹೆದರಿದೆ. ಆದರೆ ಹಾಗಾಗಲಿಲ್ಲ. ಕುದುರೆ ಸವಾರಿಯಿಂದ ಬಳಲಿದ್ದ ನಾನು ಸತ್ತವಳಂತೆ ಗಾಢನಿದ್ರೆ ಮಾಡಿದೆ. “ ಆದರೆ ಮರುದಿನ ನೂಕುವ ಗಾಳಿ, ತೋಯಿನುವ ಮಳೆ ! ಎಷ್ಟು ಜೋರಾಗಿ ಗಾಳಿ ಬೀಸಿತೋ, ಅಷ್ಟೇ ವೇಗವಾಗಿ ಮಳೆ ಸುರಿಯಿತು ! ಮಾರ್ಗ ದುರ್ಗಮವಾಯಿತು. ಪುನಃ ಪುನಃ ನಮ್ಮ ಕುದುರೆಗಳು ಇಳಿಮುಖವಾದವು. ಜಾನ್‌ಮಾವನಿಂದ ಕಳಿಸಲ್ಪಟ್ಟ ಗೊಲ್ಲರ ಹುಡುಗ ಮೊದಲು ಪ್ರತಿಭಟಿಸಿದನು. ತಲೆಯಲ್ಲಾಡಿಸಿ ಗೊಣಗುತ್ತಾ ನನ್ನ ಸ್ನೇ ಮುಂದುಮಾಡಿ ತಾನು ಹಿಂಬಾಲಿಸಿ ದನು. (ಕುಕುಹಾಲೆ'ಯಲ್ಲಿ ಹೊರೆಹೊತ್ತ ಕುದುರೆಯನ್ನು ಬಿಟ್ಟು ಬಿಡಬೇಕಾ ಯಿತು. ಕೆಸರಿನ ನದಿಯನ್ನು ಈಜಿಕೊಂಡು ಮೇಲೆ ಹತ್ತಿದೆವು. ಗೊಲ್ಲರ ಹುಡುಗ 'ವೈ ಮಿಯ' ದಲ್ಲಿ ಅದನ್ನು ಹೊಸ ಕುದುರೆಗೆ ವಿನಿಮಯಮಾಡಿ ಕೊಂಡನು. ಆದರೆ ಹಿಲೋ ಕಡೆಯ ತನಕ ಒಂದೇ ಸಮನಾಗಿತ್ತು. ಬೆಳಗಿನ ಜಾವದಿಂದ ಹಿಡಿದು ಮಧ್ಯರಾತ್ರಿಯ ತನಕ ಜೀನಿನ ಮೇಲೆಯೇ ಕುಳಿತಿದ್ದೆ. ಆದ್ದರಿಂದಲೇ ಅಷ್ಟು ಬೇಗ ಕಿಲೋಹನ ತಲುಪಲು ಸಾಧ್ಯವಾಯಿತು. ಕುದು ರೆಯ ಮೇಲಿದ್ದ ನನ್ನನ್ನು ಜಾನ್‌ಮಾವ ಎತ್ತಿ ಒಳಕ್ಕೆ ಕರೆದುತಂದನು. ಹಾಸಿಗೆ. ಯಲ್ಲಿ ಮಲಗಿದ್ದ ಸೇವಕಿಯರನ್ನು ಎಬ್ಬಿಸಿದನು. ತಕ್ಷಣ ನನ್ನ ಒದ್ದೆ ಬಟ್ಟೆ ಗಳನ್ನು ಬಿಚ್ಚಿಸಿದನು. ಹೊಸ ಉಡುಪನ್ನು ಹಾಕಿಸಿದನು. ಶಾಖ ಕೊಡು