ಪುಟ:ಬಾಳ ನಿಯಮ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ಬಾಳ ನಿಯಮ ವಂಥ ಮದ್ಯ ಪಾನೀಯವನ್ನು ಅವನೇ ತಂದುಕೊಟ್ಟನು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ತಕ್ಷಣ ಮಲಗಿಬಿಡುವಂತೆ ಏರ್ಪಾಟು ಮಾಡಿದನು. ನನಗೆ ಅಷ್ಟಾಗಿ ಜ್ಞಾಪಕವಿಲ್ಲ; ಆದರೂ ಅಂದು ಹುಚ್ಚು ಹುಚ್ಚಾಗಿ ತೊದಲು ಮಾತಾಡಿರಬಹುದು. ಜಾನ್ ಮಾವ ಎಲ್ಲವನ್ನೂ ಜೋಡಿಸಿ ನಡೆದದ್ದೆಲ್ಲವನ್ನೂ ಊಹಿಸಿರಬೇಕು ! ಆದರೆ ಆ ವಿಷಯದ ಬಗ್ಗೆ ಜಾನ್ ನನ್ನೊಡನಾಗಲಿ, ಇತರರಲ್ಲಾ ಗಲೀ ಒಂದು ಪಿಸುಮಾತನ್ನೂ ಆಡಲಿಲ್ಲ; ತಾನು ಹೆಣೆದ ಕಥೆ ಯನ್ನು ನಿಮಿ ರಾಜಕುಮಾರಿಯ ಕೊಠಡಿಯಲ್ಲಿ ಬೀಗಹಾಕಿ ಬಚ್ಚಿಟ್ಟ ನೆಂದು ಕಾಣುತ್ತೆ! “ಅಂದು ನನ್ನ ತಲೆಯಲ್ಲಿ ನುಸುಳಿಹೋದ ಕೆಲವು ನೆನಪುಗಳು ಇನ್ನೂ ಜ್ಞಾಪಕದಲ್ಲಿವೆ. ಹೃದಯ ಒಡೆದಿತ್ತು; ವಿಧಿಯನ್ನೇ ದೂಷಿಸುವಷ್ಟು ಹುಚ್ಚು ಕೋಪ ಉದ್ಭವಿಸಿತು. ಮೇಲೆತ್ತಿ ಕಟ್ಟಿದ್ದ ಕೂದಲು ಮಳೆಯ ಹೊಡೆತದಿಂದ ಸಡಿಲಗೊಂಡು ಚುಚ್ಚುತಿತ್ತು. ಒಂದೇ ಸಮನೆ ಅತ್ತು ಅತ್ತು ಮನೋ ವಿಪ್ಲವಕ್ಕೆ ಕಾರಣವಾಯಿತು. ಅಸತ್ಯದಿಂದ ತುಂಬಿಹೋಗಿದ್ದ ವಕ್ರ ಪ್ರಪಂಚಕ್ಕೆ ಸವಾಲು ಹಾಕಿದೆ. ಅಸಮಾಧಾನಗೊಂಡು ರೋಷಾವಿಷ್ಟಳಾದೆ. ಜೀನಿನ ಮುಂಭಾಗದಲ್ಲಿ ಮೇಲಕ್ಕೆತ್ತಿಕೊಂಡಿರುವ ಭಾಗವನ್ನು ನನ್ನ ಕೈಯಿಂದ ಹೊಡೆಯುತ್ತಿದ್ದೆ. ಕಿಲೋಹನದ ಗೊಲ್ಲರ ಹುಡುಗನ ಒರಟುತನ ನನ್ನನ್ನು ಮತ್ತಷ್ಟು ರೇಗಿಸಿತ್ತು. ಪಾಪ; ಮಹಾ ವೈಭವದಿಂದ ಕೂಡಿದ್ದ ಹಿಲೋ ಚುಚ್ಚುಗಾಲಿಯಿಂದ ತಿವಿಸಿಕೊಳ್ಳಬೇಕಾಯಿತು. ಕುದುರೆಗಾದರೂ ಹುಚ್ಚು ಹಿಡಿದು ನನ್ನನ್ನು ಬೀಳಿಸಿ ಅಪ್ಪಳಿಸಿಬಿಟ್ಟರೆ ಎಷ್ಟೋ ಉತ್ತಮವೆಂದು ಪ್ರಾರ್ಥಿ ಸಿದೆ. ಆಗ ಮನುಷ್ಯನ ಮೋಹ ತಪ್ಪುತ್ತದೆ! ಇಲಿನ ಹೂಗಳನ್ನು ಸಮುದ್ರಕ್ಕೆ ಎಸೆದಾಗ ಲಿಲೋಲಿಲೇ ಹೇಳಿದಂತೆ, ನನ್ನ ಹೆಸರಿನ ತುದಿಯಲ್ಲೂ 'ಮುಗಿ ಯಿತು' ಎಂಬ ಪದವನ್ನು ಸೇರಿಸಿಕೊಳ್ಳಬಹುದು......... “ನನ್ನ ಗಂಡ ಜಾರ್ಜ್ ಹೊನಲೂಲುವಿನಿಂದ ಬರುವುದು ನಿಧಾನ ವಾಯಿತು. ಅವನಿಗಾಗಿ ಕಾದಿದ್ದೆ. ಒಂದು ದಿನ ನಹಾಲಕ್ಕೆ ಮರಳಿ ಬಂದನು. ಅತಿ ಗಾಂಭೀರ್ಯದಿಂದ ನನ್ನನ್ನು ಆಲಿಂಗನ ಮಾಡಿಕೊಂಡನು. ಆದಷ್ಟು ಬೇಗ ಮುಗಿದರೆ ಸಾಕೆಂದು ಆತುರವಾಗಿ ತುಟಿಗೆ ಮುತ್ತಿಟ್ಟನು. ನನ್ನ ನಾಲಿಗೆಯನ್ನೇ ದಿಟ್ಟಿಸಿ ನೋಡಿ ಪರೀಕ್ಷಿಸಿದನು. ನನ್ನ ಮುಖಲಕ್ಷಣ ಗಳನ್ನು ಅಲ್ಲಗಳೆದನು. ಆರೋಗ್ಯ ಸರಿಯಾಗಿಲ್ಲವೆಂದು ಹಾಸಿಗೆಯ ಮೇಲೆ ಮಲಗಿಸಿದನು. ಹರಳೆಣ್ಣೆಯನ್ನು ಸ್ವಲ್ಪ ಕುಡಿಸಿ, ಪಕ್ಕದಲ್ಲಿ ಶಾಖವಾದ