ಪುಟ:ಬಾಳ ನಿಯಮ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೂಹದ ಬಲೆಯಲ್ಲಿ ICO ಸ್ಟವ್ ಇಟ್ಟನು.

  • "ಗಡಿಯಾರದ ಯಂತ್ರ ಮತ್ತೆ ಆರಂಭವಾಯಿತು. ಚಲನೆಯುಂಟು ಮಾಡಲು ನನ್ನ ಕಾಲಚಕ್ರ ತಿರುಗಿತು. ಎಲ್ಲೆಲ್ಲೋ ಸುತ್ತಾಡಿ ಕಡೆಗೆ ನಹಾಲ ಜೀವನದ ಜಾಡನ್ನೇ ಹಿಡಿಯಬೇಕಾಯಿತು. ಪ್ರತಿದಿನ ಬೆಳಿಗ್ಗೆ ನಾಲ್ಕೂವರೆ ಘಂಟೆಗೆ ಜಾರ್ಜ್ ಹಾಸಿಗೆಯಿಂದೆದ್ದು ಬಿಡುತ್ತಿದ್ದನು. ಮನೆಯ ಹೊರಕ್ಕೆ ಹೊರಟು, ಐದು ಘಂಟೆಯ ಹೊತ್ತಿಗೆ ಕುದುರೆಯ ಕಾಲುಗಳನ್ನು ಹಿಗ್ಗಲಿಸು ತಿದ್ದನು.... ಯಥಾಪ್ರಕಾರ ನನ್ನ ಮಟ್ಟಿಗೆ ನೀರುನೀರಾದ ಅಂಬಲಿ, ಭಯ ಹುಟ್ಟಿಸುವಂಥ ಕಚ್ಚಾ ಕಾಫಿ, ಉದ್ದುದ್ದ ವಾಗಿ ಸೀಳುಸೀಳಾದ ಬೀಫ್....ಅಡಿಗೆ ಮಾಡಿದೆ ; ಬೇಯಿಸಿದೆ; ಕೊಳಕು ನೆಲ ತಿಕ್ಕಿದೆ. ಕಸೂತಿಗೆ ಸರಿಯಾದ ಆಧಾರ ತಲ ಏರ್ಪಡಿಸಿ, ಅಗ್ಗದ ಹೊಲಕುಗಳನ್ನು ಹೊಲಿದುಕೊಂಡೆ. ರಾತ್ರಿಗಳು ಉರುಳಿದವು. ಎರಡು ವರ್ಷ ಕಳೆಯುವುದು ಎಷ್ಟೋ ಶತಮಾನ ಗಳನ್ನು ದಾಟಿದಂತಿತ್ತು. ಹಿಂದಿನಂತೆಯೆ ಅವನು ಮಿತವ್ಯಯಿಯಾಗಿದ್ದನು. ಹಿಂದಿನ ವರ್ಷದ ಮಾಸಪತ್ರಿಕೆಗಳನ್ನು ಸಾಲ ತಂದು ಓದುತಿದ್ದನು! ಹರಿದು ಹಿಂಜಿಹೋಗಿದ್ದ ಕಾಲುಚೀಲವನ್ನೂ ಒಳಉಡುಪುಗಳನ್ನೂ ಎಂಟು ಘಂಟೆಯ ತನಕ ಅವನ ಓದು ಮುಗಿಯುವವರೆಗೂ ಹೋಲಿದು ಸರಿ ಮಾಡುತಿದ್ದೆ. ಸರಿ ; ಮಲಗುವ ಹೊತ್ತು ಬರುತಿತ್ತು ; ಸೀಮೆ ಎಣ್ಣೆಯನ್ನು ಉಳಿಸಬೇಕಲ್ಲ ! ತಕ್ಷಣ ಅವನು ಗಡಿಯಾರಕ್ಕೆ ಕೀಲುಕೊಡುತಿದ್ದನು. ಡೈರಿಯಲ್ಲಿ ಹವಾಮಾನ ವನ್ನು ಬರೆಯುತಿದ್ದನು. ಮೊದಲು ಬಲಗಾಲಿನ ಶೂ ತೆಗೆಯುತಿದ್ದನು; ಎರಡನ್ನೂ ಹಾಸಿಗೆಯ ತುದಿಯಲ್ಲೇ ಪಕ್ಕ ಪಕ್ಕದಲ್ಲಿ ಇಡುತ್ತಿದ್ದನು....

“ಆದರೆ ಮುಂದೆ ನನ್ನ ಮನಸ್ಸು ಜಾರ್ಜ್ನ ಕಡೆ ಸ್ವಲ್ಪವೂ ಎಳೆಯ ಲಿಲ್ಲ. ಲಿಹೂ ರಾಜಕುಮಾರಿ ನನ್ನನ್ನು ಆಹ್ವಾನಿಸುವುದಕ್ಕಿಂತ ಮುಂಚೆ, ಜಾನ್ ಮಾವ ತನ್ನ ಕುದುರೆಯ ನೆರವನ್ನು ಕೊಡುವುದಕ್ಕಿಂತ ಮುಂಚೆ, ನಾನು ಜಾರ್ಜ್ನನ್ನು ಪ್ರೀತಿಸಲು ಪ್ರಯತ್ನ ಪಟ್ಟಿದ್ದೆ. ಈಗ ಅದೆಲ್ಲವೂ ಹಾರಿಹೋಯಿತು.... “ಸೋದರಿ ಮಾರ್ಥ, ನೀನೇ ಯೋಚಿಸು. ಜಾನ್ ಮಾವ ಕುದುರೆ ಕೊಟ್ಟ; ಅದ್ದರಿಂದಲೇ ನನಗೆ 'ಪ್ರೇಮ'ದ ಅರಿವಾಯಿತು; ಪ್ರೇಮಪೂರಿತ ಅಲೋಲಿಯೊ ನನ್ನ ಕಣ್ಣಿಗೆ ಬಿದ್ದ. ಜಾನ್ ನನ್ನ ಹೇಳಿಕೆಗೆ ನಕಾರ ಸೂಚಿಸಿದ್ದರೆ, ನಾನು ಇದ್ದ ಹಾಗೆಯೆ ಇರುತಿದ್ದೆ! ಆದರೆ ಏನು ಮಾಡುವುದು ? ಎಲ್ಲ ನಡೆದುಹೋಯಿತು. ಅದಾದ ಮೇಲೆ ಜಾರ್ಜ್ ನನ್ನ ಹೃದಯವನ್ನು