ಪುಟ:ಬಾಳ ನಿಯಮ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಗೆಲ್ಲಲು ಹೇಗೆ ತಾನೆ ಸಾಧ್ಯ? ಆ ಎರಡು ವರ್ಷದ ನಹಾಲದ ಜೀವನ ಸಪ್ಪೆ ಯಾಗಿತ್ತು, ನಾನು ಸಜೀವ ಶವದಂತೆ ದಿನಗೆಲಸಗಳನ್ನು ಮಾಡುತಿದ್ದೆ.... ಡಾಕ್ಟರು ಏನೊ ಸಮಾಧಾನ ಹೇಳಿದರು-ಎತ್ತರದ ಪರ್ವತದಿಂದ ಹರಿದು ಬರುತಿದ್ದ ನಹಾಲ ನೀರಿನಲ್ಲಿ ಜಾರ್ಜ್ ಪ್ರತಿದಿನವೂ ಒದ್ದಾಡುತ್ತಿದ ನು. ಚಳಿಗಾಲದ ಮಧ್ಯಕಾಲದಲ್ಲಿ ಪ್ರವಾಹಕ್ಕೆ ಸಿಕ್ಕಿ ಮೈ, ಬಟ್ಟೆ ಎಲ್ಲವನ್ನೂ ತೋಯಿಸಿಕೊಂಡನು; ಅಷ್ಟಾದರೂ ಒಳಉಡುಪನ್ನು ಬದಲಾಯಿಸಲಿಲ್ಲ; ಹರಿದು ಹಿಂಜುಹೋಗಿತ್ತು. ಅದೇ ಕಾರಣವಾಯಿತು. (ಅವನು ಸತ್ತಾಗ ನಾನು ದುಃಖ ಪಡಲಿಲ್ಲ. ದುಃಖಿಯ ಜೀವನ ಆರಂಭ ವಾಗಿ ಎಷ್ಟೋ ವರ್ಷಗಳಾಗಿದ್ದವು. ಆದರೆ ಅವನು ಸತ್ತನೆಂದು ಸಂತೋಷವೂ ಆಗಲಿಲ್ಲ. ಎಂದು ಲಿಲಿಲೊ ಇಲಿನ ಹೂವನ್ನು ಸಮುದ್ರಕ್ಕೆ ಬಿಸು ಟನೋ, ಅಂದೇ ನನ್ನ ಸಂತೋಷದ ಕಳೆ ಸತ್ತುಹೋಯಿತು. ಅದಾದ ಮೇಲೆ ನನ್ನ ಕಾಲುಗಳಲ್ಲಿ ಉಲ್ಲಾಸದ ರಕ್ತ ಹರಿಯಲಿಲ್ಲ. ಜಾರ್ಜ್ ಹೋfi ಒಂದು ತಿಂಗಳೂ ಇಲ್ಲ; ಅಷ್ಟರಲ್ಲೇ ಲಿಲೋಲಿಲೊ ಕೂಡ ಮೃತನಾದನು. ಎಷ್ಟೋ ಗಂಡಸರನ್ನು ನೋಡಿದ್ದೆ ; ಆದರೆ ಅವನಂಥ ಸರಿಸಮಾನರನ್ನು ಎಲ್ಲಿ ತಾನೆ ಹುಡುಕಲಿ? ಮನಸ್ಸು ಹಿಂಜರಿಯಿತು. ಏಕೆಂದರೆ ನಾನು ಜಾನ್ ಮಾವ ನಂತೆಯೆ ಸೂಕ್ಷ ಪ್ರಕೃತಿಯವಳು. ಜಾನ್ ತನ್ನ ಪ್ರೇಯಸಿ ನಯೋಮಿ ರಾಜಕುಮಾರಿಯ ಕೊಠಡಿಯನ್ನು ಬಿಟ್ಟು ಬರಲು ಹೇಗೆ ಸಾಧ್ಯವೋ, ಹಾಗೆಯೇ ನನ್ನ ಹೃದಯದಲ್ಲಿ ಲಿಲಿಲೊ ಸ್ಟಾಪಿತನಾಗಿದ್ದನು. ಪ್ರೇಮಿಸು ವುದು ಯಾವಾಗಲೂ ಒಬ್ಬನನ್ನೇ. ನಾನಂತೂ ಹಾಗೆ ವರ್ತಿಸಿದವಳು. ಐವತ್ತು ವರ್ಷಗಳಿಂದಲೂ ಯಾರೂ ಕಾಣದಿದ್ದ ನನ್ನ ಹೃದಯ ಮಂದಿರ ವನ್ನು, ಸೋದರಿ ನಾರ್ಥ, ನೀನು ಇಂದು ಪ್ರವೇಶಮಾಡಿದೆ. ಆ ಅವಕಾಶ ವನ್ನು ನಾನೇ ಮಾಡಿಕೊಟ್ಟಿದ್ದೇನೆ ......” ಯಾರದೋ ಸವಾರಿ ಭರನೆ ಬಂದಿಳಿಯಿತು. ಉದ್ಯಾನವನ್ನು ದಾಟುತ್ತಾ ಬಂದವನು ಮಾರ್ಥಳ ಗಂಡ. ತೆಳ್ಳಗಿದ್ದನು ; ತಲೆ ಕೂದಲು ನರೆ ತಿತ್ತು ; ಆದರೂ ಮೇಲ್ಮುಖವಾಗಿ ನಡೆಯುತ್ತಿದ್ದನು. ಭವ್ಯವಾದ ಮನ ಮೋಹಕ ಮಿಲಿಟರಿ ಮೈ ಕಟ್ಟು ಅವನದು. ರಾಷ್ಟೊ ಸ್ಮಾನ್ಡೈಲ್‌ 'ಬಿಗ್ ಫೈವ್'ನ ಸದಸ್ಯ. 'ಬಿಗ್ ಫೈವ್' ಇಡೀ ಹವಾಯಿ ನಾಡಿನ ಪ್ರಗತಿಗಾಗಿ ದುಡಿಯುತ್ತಿದ್ದ ಸಂಸ್ಥೆ, ಸರ್ವತೋಮುಖವಾಗಿ ಎಲ್ಲ ಭಾಗಗಳ ಸಂಪರ್ಕ ವನ್ನೂ ಬೆಳೆಸಿತ್ತು. ರಾಷ್ಟೊ ಸ್ಮಾನ್ಡೈಲ್ ಹುಟ್ಟಿನಲ್ಲಿ ಶುದ್ಧ ಬಿಳಿಯ. ನ್ಯೂ 11.