ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೋಹದ ಬಲೆಯಲ್ಲಿ 908

ಇಂಗ್ಲೆಂಡ್ ಅವನ ಜನ್ಮಸ್ಥಳ. ಆದರೆ ಹವಾಯಿಯ ರೀತಿ ನೀತಿಗಳನ್ನು ಚೆನ್ನಾಗಿ ಅಭ್ಯಾಸಮಾಡಿದ್ದನು. ಬಂದವನೇ ಮೊಟ್ಟ ಮೊದಲು ತೋಳು ಗಳನ್ನು ಬಳಸಿ, ಬೆಲ್ಲಳಿಗೆ ಮುತ್ತಿಟ್ಟನು. ಹವಾಯಿಯವರಂತೆಯೆ ಅವನ ಹೃದಯ ವಿಶ್ವಾಸದಿಂದ ತುಂಬಿಹೋಗಿತ್ತು. ಏನೊ ಹೆಂಗಸರ ಮಾತುಕಥೆ ನಡೆದಿರಬೇಕೆಂದು ಅವನ ಚುರುಕು ಕಣ್ಣುಗಳು ಅಗಲೇ ಗ್ರಹಿಸಿದವು. ನಕ್ಷತ್ರದ ಬೆಳಕಿನಂತಿದ್ದ ಅವರ ಬುದ್ಧಿವಂತಿಕೆಯಿಂದ ಎಲ್ಲವೂ ಪ್ರಶಾಂತವಾಗಿಯೇ ಕೊನೆಗೊಂಡಿರಬೇಕೆಂದು ಊಹಿಸಿ, ಆ ಗೋಜಿಗೆ ಹೋಗಲಿಲ್ಲ.

ರಾಸ್ಕೋ ಸ್ಕಾನ್ ಡೈಲ್ ತನ್ನ ಹೆಂಡತಿಗೆ ಮುತ್ತಿಟ್ಟು, "ಎಲ್ಲಿ ಮತ್ತು ಮಕ್ಕಳು ಬರುತ್ತಾರಂತೆ. ಈಗತಾನೆ ಹಡಗಿನಿಂದ ನಿಸ್ತಂತು ವಾರ್ತೆ ಬಂತು. 'ಮಾಯ್'ಗೆ ಹೋಗುವುದಕ್ಕಿಂತ ಮುಂಚೆ ನಮ್ಮಲ್ಲಿ ಕೆಲವು ದಿನಗಳು ಕಾಲಕಳೆಯುತ್ತಾರಂತೆ...." ಎಂದು ಸಂತನದ ಸುದ್ದಿಯನ್ನು ಹೊರಗೆಡಹಿದನು.

ಮುಂದಿನ ಏರ್ಪಾಟನ್ನು ಮಾರ್ಧ ಸ್ಕಾನ್‌ ಡೈಲ್ ಯೋಚಿಸಿ ಹೇಳಿದಳು : “ಸೋದರಿ ಬೆಲ್ಲ, ನಿನ್ನನ್ನು ಗುಲಾಬಿ ಕೋಣೆಯಲ್ಲಿ ಇಳಿಸಲು ಯೋಚಿಸಿದ್ದೆ. ಅದು ವಿರಾಲವಾಗಿದೆ. ಎಲ್ಲಿ, ಅವಳ ಮಕ್ಕಳು, ನರ್ಸುಗಳು ಮತ್ತು ಅವಳ ಎಲ್ಲ ವಸ್ತುಗಳಿಗೂ ಆ ರೂಮು ಸರಿಯಾಗಿದೆ. ಆದ್ದರಿಂದ ನೀನು ಎಮ್ಮ ರಾಣಿಯ ಕೋಣೆಯಲ್ಲಿ ಇರಬೇಕಾಗುತ್ತೆ....”

"ಅದಕ್ಕೇನಂತೆ? ಹೋದಸಾರಿಯೂ ನಾನು ಅಲ್ಲೇ ಇದ್ದೆ ; ಪರವಾಗಿಲ್ಲ. ನನಗೆ ಅದೇ ಇಷ್ಟ" ಎಂದಳು ಬೆಲ್ಲ.

ಇಬ್ಬರೂ ಸೊಗಸಾದ ಮೈಕಟ್ಟಿನ ಶ್ರೇಷ್ಠ ಹೆಂಗಸರು; ಅವರ ಮಧ್ಯೆ ಎತ್ತರವಾಗಿಯೂ, ತೆಳ್ಳಗೂ, ಗಂಭೀರವಾಗಿಯೂ ನಿಂತ ರಾಸ್ಕೊ ಸ್ಕಾನ್‌ ನನ್ನು ನೋಡಬೇಕು! ಹವಾಯಿಯವರ ಪ್ರೇಮದಾಟಗಳನ್ನು ಅವನು ಚೆನ್ನಾಗಿ ಅರಿತಿದ್ದಾನೆ. ದಿವ್ಯವಾಗಿದ್ದ ಇಬ್ಬರ ನಡುವನ್ನೂ ತನ್ನ ತೋಳುಗಳಿಂದ ಬಳಸಿ ಬಂಗಲೆಯ ಕಡೆಗೆ ಮುಂದುವರಿದನು.