ಪುಟ:ಬಾಳ ನಿಯಮ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಬಾಮ್ ಕಿಂಗ್‌ನ ವಿನಾಶದಲ್ಲಿ ಕೇಂದ್ರಿಕೃತವಾಗಿತ್ತು. ತನಗೂ ಅದೃಷ್ಟ ಕ್ಕೂ ಮಧ್ಯೆ ಟಾಮ್‌ಕಿಂಗ್ ನಿಂತಿದ್ದನು. ಆದರೆ ಬಾಮ್ ಕಿಂಗ್ ಎಲ್ಲವನ್ನೂ ರಾಂತಿಯುತವಾಗಿಯೇ ಸಹಿಸಿದನು. ಈಗ ತಾನು ಕಳೆದುಕೊಂಡಿದ್ದ ರೂ ಯೌವನದ ಅಟ್ಟಹಾಸವೇನೆಂಬುದು ಅವನಿಗೆ ತಿಳಿದಿತ್ತು. ಎದುರಾಳಿ ಸ್ವಲ್ಪ ಶಕ್ತಿಗುಂದುವ ತನಕ ಏನೂ ಮಾಡುವಂತಿಲ್ಲ. * ಟಾಮ್ ಕಿಂಗ್ ಹಲ್ಲುಕಡಿದನು. ತಲೆಯ ಮೇಲೆ ಭಾರಿ ಏಟು ಬೀಳ ಬಹುದೆಂದು ಗೊತ್ತಿದ್ದರೂ ತಗ್ಗಿಸಿದನು! ತಲೆಗೆ ಹೊಡೆಯುವುದೆಂದರೆ ಅತಿ ಕೂರವಾದ ಶಿಕ್ಷೆ; ಆದರೆ ಮುಷ್ಠಿ ಕಾಳಗದ ನಿಯಮದಂತೆ ಅದು ನಾಕಷ್ಟು ಉತ್ತಮ ಪ್ರದರ್ಶನ. ಪ್ರತಿ ಜೆಟ್ಟಿಯೂ ತನ್ನ ಹೆಣ್ಣು ಗಳನ್ನು ಕೆಡಿಸಿಕೊಳ್ಳದೆ ಆದಷ್ಟು ಜಾಗರೂಕನಾಗಿರಬೇಕು ; ಎದುರಾಳಿಯ ತಲೆಯನ್ನು ಕುಟ್ಟುತ್ತಲೇ ಇದ್ದರೆ, ತನಗಾದ ನಷ್ಟವನ್ನು ಅವನೇ ಅನುಭವಿಸಬೇಕು.....

  • ಕಿಂಗ್ ತಕ್ಷಣ ಕೆಳಕ್ಕೆ ಜಾರಿ, ಅತಿ ವೇಗದಿಂದ ಬರುತಿದ್ದ ಗುದ್ದಾಟ ಗಳನ್ನು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವನು ತನ್ನ ಹಿಂದಿನ ಕಾದಾಟ ಗಳನ್ನು ನೆನೆಸಿಕೊಂಡನು ; ತಾನು 'ವೆಲ್ಸ್ ಟೆರರ್‌' ತಲೆಯ ಮೇಲೆ ಎಷ್ಟು ಜೋರಾಗಿ ಬಡಿದಿದ್ದ ! ಆದ್ದರಿಂದ ಸ್ಯಾಂಡಲ್ ಕೂಡ ಈ ಆವಕಾಶ ಕಳೆದು ಕೊಳ್ಳುವುದು ಬೇಡ. ಆದರೆ ಈಗ ತಿಳಿಯದಿದ್ದರೂ, ಮುಂದಾದರೂ ಅವನಿಗೆ ಟಾಮ್ ಕಿಂಗ್ನ ತಲೆಯ ಮೇಲೆ ಹೊಡೆದ ಗೆಣ್ಣಿನ ಜ್ಞಾಪಕ ಬಂದು ದುಃಖ ಪಡುತ್ತಾನೆ. ಅಲ್ಲವೇ ?....

ಮೊದಲ ರೌಂಡು ಸಂಪೂರ್ಣವಾಗಿ ಸ್ಯಾಂಡಲ್‌ನ ಕೈವಾಡವನ್ನೇ ಎತ್ತಿ ತೋರಿಸಿತು. ಅವನ ಚಕ್ರಮಾರುತದಂಥ ನಡಿಗೆಗೆ ಇಡೀ ಸಭೆಯ ಒಮ್ಮತ ದೊರಕಿತು. ಗುರು ಗಳ ಹುಚ್ಚು ಹೊಡೆತ ಕಿಂಗಿಗೆ ತಡೆಯಲು ಅಸಾಧ್ಯ ವಾಯಿತು. ಆದರೂ ಕಿಂಗ್ ಏನೂ ಮಾಡಲಿಲ್ಲ. ಒಂದು ಬಾರಿಯೂ ಹೊಡೆಯಲಿಲ್ಲ. ಮರೆಯಾಗುವುದು, ತಡೆಗಟ್ಟುವುದು, ತಲೆಯನ್ನು ಥಟ್ಟನೆ ಚಲಿಸುವುದು ಅಥವಾ ಪೂರಾ ಕೈ ನೀಡಿ ಗುದ್ದಲಾಗದಷ್ಟು ಹತ್ತಿರ ಬರು ವುದು-ಇಷ್ಟರಲ್ಲೇ ಅವನು ತೃಪ್ತನಾಗಿದ್ದನು. ಅವನಾಗಿಯೆ ಮೇಲ್ಮುಗಿ ಬಂದದ್ದು ಇಲ್ಲವೆಂದೇ ಹೇಳಬೇಕು. ಚಟುವಟಿಕೆಯಿಂದ ಬಿದ್ದು ಎದ್ದೇಳು ವುದರಲ್ಲಿ ಅವನು ಒಂದು ಔನ್ಸಿನಷ್ಟಾದರೂ ಶಕ್ತಿಯನ್ನು ವಿನಿಯೋಗಿಸಿದಂತೆ ಕಾಣಬರಲಿಲ್ಲ. ಏಟು ಬಿದ್ದಾಗ ಮಾತ್ರ ತಲೆ ಹೊರಳುತಿತ್ತು. ಎಚ್ಚರಿಕೆಯ ಇಳಿ ವಯಸ್ಸನ್ನು ಎದುರು ಹಾಕಿಕೊಳ್ಳುವ ಪ್ರಯತ್ನದಲ್ಲಿಯೇ ಸ್ಯಾಂಡಲ್‌ನ