ಪುಟ:ಬಾಳ ನಿಯಮ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ಬಾಳ ನಿಯಮ ಯೌವನದ ಬಡಾಯಿ ಕೊಚ್ಚಿ ಹೋಗುತಿತ್ತು. ಟಾಮ್ ಕಿಂಗ್‌ನ ನಡಿಗೆ ನಿಧಾನವಾಗಿಯೂ ಕ್ರಮಬದ್ಧವಾಗಿಯೂ ಇತ್ತು. ದಪ್ಪ ರೆಪ್ಪೆಯ ಕಣ್ಣು ಗಳನ್ನು ನೋಡಿದರೆ, ಅವನು ಅರ್ಧ ನಿದ್ರೆಯಲ್ಲಿ ತೂಕಡಿಸುತ್ತಿರುವಂತೆ ಕಾಣು ತಿತ್ತು. ಆದರೆ ಆ ಕಣ್ಣುಗಳು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದವು ! ಇಪ್ಪತ್ತು ವರ್ಷಗಳಿಗಿಂತಲೂ ಮೇಲ್ಪಟ್ಟು ರಂಗಭೂಮಿಯಲ್ಲಿ ಸಾಧನೆ ಮಾಡಿದವನ ಕಣ್ಣು ಗಳು ಅಭ್ಯಾಸಬಲದಿಂದಲೇ ಸೂಕ್ಷವಾಗಿದ್ದವು. ಎಂಥ ನೋಟ! ಏಟು ಬೀಳುತ್ತಿದ್ದರೂ ರೆಪ್ಪೆ ಹೊಡೆಯುತ್ತಿರಲಿಲ್ಲ. ಆದರೆ ಗುದ್ದಾಟದ ಅಂತರವನ್ನು ಲೆಕ್ಕಹಾಕುತಿತ್ತು, ಮೊದಲ ರೌಂಡು ಆದ ಮೇಲೆ, ಒಂದು ಮಿನಿಟು ವಿಶ್ರಾಂತಿಗೆ ಅವಕಾಶ ಸಿಕ್ಕಿತು. ಟಾಮ್ ಕಿಂಗ್ ಕಾಲುಚಾಚಿ ಮೂಲೆಯಲ್ಲಿ ಕುಳಿತನು. ಕೈಗಳು ಓರೆಯಿಲ್ಲದೆ ಸಮಕೋನದಲ್ಲಿ ಹಗ್ಗವನ್ನು ಹಿಡಿದಿದ್ದವು. ಆತನ ಸಹಾಯಕರು ಓಡಿಬಂದು ಟವಲಿನಲ್ಲಿ ಗಾಳಿ ಬೀಸಿದರು. ಗಾಳಿ ಒಳಕ್ಕೆ ಹೋಗುತಿದ್ದಂತೆ, ಹೃದಯಾಂತರಾಳದಿಂದ ಸ್ಪಷ್ಟವಾಗಿ, ನಿಡಿದಾಗಿ ಎಳೆಯುತಿದ್ದ ನಿಟ್ಟುಸಿರು ಹೊರಸೂಸುತಿತ್ತು. ಕಣ್ಣು ಮುಚ್ಚಿತ್ತು. ಅದರೂ ಸಭಿಕರ ಮಾತುಕಥೆ ಆವನ ಕಿವಿಗೆ ಬಿತ್ತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬಾತ ಹೇಳಿದ : ಮಾಂಸಖಂಡ ಬಿಗಿಹಿಡಿದಿದೆ. ಅವನು ವೇಗವಾಗಿ ಚಲಿಸಲು ಸಾಧ್ಯವಿಲ್ಲ....ತಗೋ ನನ್ನ ಬಾಜಿ ! ಸ್ಯಾಂಡಲ್‌ನ ಹೆಸರಿನಲ್ಲಿ ಒಂದಕ್ಕೆ ಎರಡರಷ್ಟು ?” ಮತ್ತೆ ಗಂಟೆ ಬಾರಿಸಿತು. ಮೂಲೆಗಳಿಂದ ಇಬ್ಬರೂ ಎದ್ದು ಬಂದರು. ಬೇಗನೆ ಪ್ರಾರಂಭಮಾಡಲು ಸ್ಯಾಂಡಲ್ ವೇಗವಾಗಿ ಮುಂದುವರಿದನು. ಆದರೆ ಕಿಂಗ್ ಮೆಲ್ಲಗೆ ಬಂದನು. ತೃಪ್ತನಂತೆ ಕಾಣುತಿದ್ದನು. ಅವನು ಎಷ್ಟಾದರೂ ಮಿತವಾದಿಯಲ್ಲವೇ ? ಸೂಕ್ತ ಅಭ್ಯಾಸವಿರಲಿಲ್ಲ. ತಿನ್ನಲು ಸಾಕಷ್ಟು ಆಹಾರವಿದ್ದಿಲ್ಲ. ಜೊತೆಗೆ ಎರಡು ಮೈಲಿ ದೂರ ನಡೆದು ಬಂದಿ ದ್ದನು. ಆದ್ದರಿಂದ ಆತನ ಪ್ರತಿಯೊಂದು ಹೆಜ್ಜೆಯೂ ಗಣನೀಯವಾದದ್ದು. * ಈ ಬಾರಿಯೂ ಕೂಡ ಮೊದಲ ರೌಂಡಿನ ಪುನರಾವೃತ್ತಿಯೆ ಆಯಿತು. ಯಥಾಪ್ರಕಾರ ಸ್ಯಾಂಡಲ್ ಸುಂಟರಗಾಳಿಯಂತೆ ಎದುರಿಸಿದನು; ಸಭಿಕರು ಕೂಗಾಡಿ, 'ಕಿಂಗ್, ಕಾದಾಡದಿರಲು ಕಾರಣವೇನು ?' ಎಂದು ಪ್ರಶ್ನಿಸತೊಡಗಿ ದರು. ಅಷ್ಟಾದರೂ ಕಿಂಗ್ ಸುಮ್ಮನಿದ್ದನು. ಕೆಲವು ವೇಳೆ ಪರಿಣಾಮಕಾರಿ ಯಲ್ಲದ ಗುದ್ದಾಟದಿಂದ ಮುನ್ನುಗ್ಗುವಂತೆ ನಟಿಸುತ್ತಿದ್ದನು; ಅಷ್ಟೆ. ಆದರೆ,