ಪುಟ:ಬಾಳ ನಿಯಮ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ೪೩ ಸಾಕಷ್ಟು ಆತ್ಮರಕ್ಷಣೆ ಮಾಡಿಕೊಳ್ಳುತಿದ್ದನು. ಸ್ಯಾಂಡಲ್‌ನ ಪ್ರಗತಿಗೆ ವಾಮನ ಮಂದಗತಿ ತೀರ ವಿರುದ್ಧವಾಗಿತ್ತು. ಟಾಮ್ ಕಿಂಗ್ ನೋವಿನಿಂದ ಹಲ್ಲುಕಿರಿದನು. ಪೆಟ್ಟು ತಿಂದ ಅವನ ಮುಖಭಾವ ಮರುಕ ಹುಟ್ಟಿಸುವಂತಿತ್ತು. ವಯಸ್ಸಾದವರು ಮಾತ್ರ ಅಸೂಯೆ ಯಿಂದ ವರ್ತಿಸಬಲ್ಲರು; ಹಾಗೆಯೆ ಅವನು ಸ್ಯಾಂಡಲ್‌ನ ಶಕ್ತಿಯ ಬಗ್ಗೆ ಯೋಚಿಸತೊಡಗಿದನು. ಸ್ಯಾಂಡಲ್ ಎಷ್ಟಾದರೂ ಯುವಕ; ಯೌವನದ ಬಿಸಿರಕ್ತವನ್ನು ಧಾರಾಳವಾಗಿ ಚೆಲ್ಲಬಲ್ಲ. ಆದರೆ ಟಾಮ್‌ಗೆ ಕುಸ್ತಿ ಅಖಾ. ಡದ ಇಡೀ ತಂತ್ರ ಗೊತ್ತಿದೆ; ಬಹು ವರ್ಷಗಳ ಧೀರ್ಘ ಕಾದಾಟಗಳಲ್ಲೇ ಬೆಳೆದ ಆತನಿಗೆ ಬುದ್ದಿಯ ಬಲವಿದೆ. ಸ್ಯಾಂಡಲ್‌ನ ಬಿಸಿ ಆರುವ ತನಕ, ಯಾವ ಉದ್ರೇಕಕ್ಕೂ ಒಳಗಾಗದೆ ಟಾಮ್ ಕಿಂಗ್ ಕಾಯುತ್ತಿದ್ದನು. ಆದರೆ ಪ್ರೇಕ್ಷಕರಲ್ಲಿ ಮುಕ್ಕಾಲು ಜನ ಇನ್ನು ಕಿಂಗ್ ತಲೆಯೆತ್ತಲಾರ' ಎಂದು ತೀರ್ಮಾನಿಸಿದರು. ಅವರ ನೋಟಕ್ಕೆ ತಿಳಿದಂತೆ ಕಿಂಗ್‌ನ ಸೋಲು ನಿಶ್ಚಯ ವಾಗಿತ್ತು. ಆದ್ದರಿಂದ ಆ ಜನ ಸ್ಯಾಂಡಲ್‌ನ ಹೆಸರಿನಲ್ಲಿ ಒಂದಕ್ಕೆ ಮೂರರಷ್ಟು ಬಾಜಿ ಕಟ್ಟಿದರು. ಆದರೆ ಹಿಂದಿನ ಕಾಲದ ಕಿಂಗ್ನನ್ನು ತಿಳಿದಿದ್ದ ಕೆಲವೇ ಮಂದಿ ಬುದ್ದಿವಂತರಿದ್ದರು; ಸುಲಭವಾಗಿ ಬರುವ ಹಣಕ್ಕೆ ಅವರು ಸಿದ್ಧರಾದರು. ಮೂರನೆಯ ರೌಂಡು ಹಿಂದಿನಂತೆ ಒಮ್ಮುಖವಾಗಿಯೇ ಪ್ರಾರಂಭ ವಾಯಿತು. ಅರ್ಧ ಮಿನಿಟು ಕಳೆದಮೇಲೆ ಸ್ಯಾಂಡಲ್ ತನ್ನ ಶಕ್ತಿಯ ಬಗ್ಗೆ ವಿಪರೀತ ಕಲ್ಪನೆಗೆ ಅವಕಾಶಕೊಟ್ಟನು. ಅದರ ಪರಿಣಾಮವಾಗಿ ಸ್ವಲ್ಪ ಸಡಿಲಗೊಂಡನು. ಅದೇ ರಸಘಳಿಗೆಯಲ್ಲಿ ಕಿಂಗ್ನ ಕಣ್ಣು ಗಳು ಚೇತರಿಸಿ ಕೊಂಡವು. ಆ ಕ್ಷಣದಲ್ಲಿ ಅವನ ಬಲತೋಳು ಮಿಂಚಿನ ವೇಗದಲ್ಲಿ ಕೆಲಸ ಸಾಗಿಸಿತು. ಅದು ಬಾಕಿಂಗ್ನ ಮೊದಲ ಸಾಚಾ ಹೊಡೆತ ! ಎದು ರಾಳಿಯನ್ನು ಮೊಣಕೈ ಬಾಗಿನಿಂದ ಹೊಡೆದನು. ಅದರಲ್ಲಿ ತಿರುಗುಗೂಟ ದಂತಿದ್ದ ದೇಹದ ತೂಕ ಕೇಂದ್ರೀಕೃತವಾಗಿತ್ತು. ನಿದ್ರಿಸುವಂತೆ ಕಾಣುತಿದ್ದ ಸಿಂಹ ಇದ್ದಕಿದ್ದಂತೆ ಮುಂಗಾಲಿನಿಂದ ಅಪ್ಪಳಿಸುವಂತಾಯಿತು. ಸ್ಯಾಂಡಲ್‌ನ ದವಡೆಯ ಸಾಲಿಗೆ ಬಲವಾದ ಪೆಟ್ಟು ಬಿತ್ತು. ಎತ್ತನ್ನು ಆಯುಧದಿಂದ ಹೊಡೆದು ಕೆಡವಿದಂತೆ ಭಾಸವಾಯಿತು. ಸಭಿಕರು ಆಶ್ಚರ್ಯ ಚಕಿತರಾಗಿ ಬಾಯಿಬಿಟ್ಟರು-ಅಂತೂ ಮನುಷ್ಯನ ಮಾಂಸಖಂಡಗಳು ಬಿಗಿಹಿಡಿದಿಲ್ಲ; ಆದ್ದ ರಿಂದಲೇ ಅವನು ಕೀಲು ಚಮ್ಮಟಿಗೆಯಂತೆ ಹೊಡೆಯಲು ಸಾಧ್ಯವಾಯಿತು. ಈ