ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ - ಸ್ಯಾಂಡಲ್ ನಡುಗಿಹೋದನು. ಕೆಳಗುರುಳಿ ಮೇಲೇಳಲು ಪ್ರಯತ್ನ ಪಟ್ಟನು. ಆದರೆ ಅವನ ಸಹಾಯಕರು ಓಡಿಬಂದು, ತಕ್ಷಣ ಏಳದೆ ಸೆಕೆಂಡು ಗಳ ಅವಧಿಯನ್ನು ಉಪಯೋಗಿಸಿಕೊಳ್ಳಲು ಒತ್ತಾಯಮಾಡಿದರು. ಮಂಡಿ ಯೂರಿ ಏಳಲು ಸಿದ್ಧನಾದವನು ಹಾಗೆಯೇ ಇದ್ದನು. ರೆಫರಿ ಅವನ ಬಳಿ ನಿಂತು ಕಿವಿಯ ಹತ್ತಿರ ಸೆಕೆಂಡುಗಳನ್ನು ಜೋರಾಗಿ ಎಣಿಸಲು ಆರಂಭಿಸಿ ದನು. ಒಂಬತ್ತನೆಯ ಸೆಕೆಂಡನ್ನು ಘೋಷಿಸಿದಾಗ, ಸ್ಯಾಂಡಲ್ ಕಾದಾಡುವ ಭಂಗಿಯಲ್ಲಿ ತಟಕ್ಕನೆದ್ದನು. * ಟಾಮ್ ಕಿಂಗ್ ಸ್ಯಾಂಡಲ್‌ನ ಮುಖ ನೋಡಿದನು. ತನ್ನ ಏಟು ದವಡೆಗೆ ಒಂದು ಇಂಚು ಹತ್ತಿರ ಬೀಳಲಿಲ್ಲವಲ್ಲಾ ಎಂದು ವ್ಯಥೆಪಟ್ಟನು. ಹಾಗೆ ಆಗಿದ್ದರೆ ಅದು ಎದುರಾಳಿಯನ್ನು ಸಂಪೂರ್ಣವಾಗಿ ಕೆಳಕ್ಕೆ ಹಾಕಿ ಬಿಡುತಿತ್ತು ; ಮತ್ತೆ ತಾನು ಸುಖವಾಗಿ ಮೂವತ್ತು ಪೌಂಡುಗಳನ್ನು ಮನೆಗೆ ಒಯ್ಯಬಹುದಿತ್ತು; ತನ್ನ ಹೆಂಡತಿ ಮಕ್ಕಳಿಗೆ !....

  • ಈ ರೌಂಡು ಮೂರು ನಿಮಿಷಗಳ ಕಾಲ ಮುಂದುವರಿಯಿತು. ಸ್ಯಾಂಡಲ್ ಪ್ರಥಮ ಬಾರಿಗೆ ತನ್ನ ಎದುರಾಳಿಯ ಬಗ್ಗೆ ಗೌರವ ಹೊಂದಿದ್ದನು. ಯಥಾ ಪ್ರಕಾರ ಕಿಂಗ್ ನಿದ್ದೆಗಣ್ಣುಗಳಿಂದ ನಿಧಾನವಾಗಿ ನಡೆಯುತ್ತಿದ್ದನು. ಕೊನೆಯ ಘಳಿಗೆ ಹತ್ತಿರಬಂದಂತೆ ಸಹಾಯಕರು ಹಗ್ಗದ ಮೇಲೆ ನೆಗೆಯಲು ಬಗ್ಗಿ ನಿಂತಿ ದ್ದರು. ಆ ಕಡೆ ನೋಡಿ ಕಿಂಗ್ ಎಚ್ಚರಗೊಂಡನು. ತನ್ನ ಕಡೆಯೇ ಆಟವಾಡುತ್ತ ಮೂಲೆಗೆ ಸರಿಯುತ್ತಿದ್ದನುಗಂಟೆ ಬಾರಿಸಿದಾಗ ತಕ್ಷಣ ತನ್ನ ಕುರ್ಚಿಯ ಮೇಲೆ ಕುಳಿತನು. ಆದರೆ ಸ್ಯಾಂಡಲ್ ಅಷ್ಟು ದೂರ ನಡೆದು ತನ್ನ ಮೂಲೆ ಸೇರಬೇಕಾಗಿತ್ತು. ಅದು ಸಣ್ಣ ವಿಷಯವಿರಬಹುದು, ಆದರೆ ಮುಷ್ಟಿ ಕಾಳಗದಲ್ಲಿ ಅಂಥ ಅಲ್ಪ ವಿಷಯಗಳೇ ಹೆಚ್ಚು ಪರಿಣಾಮಕಾರಿ ಯಾದುದು. ಕಾಳಗ ಮುಗಿದರೂ ಸ್ಯಾಂಡಲ್ ಕೆಲವು ಹೆಜ್ಜೆಗಳನ್ನು ಇಡ ಬೇಕಾಯಿತು; ಅಷ್ಟೇ ಪ್ರಮಾಣದ ಶಕ್ತಿ ಹೋಯಿತು ; ಅಲ್ಲವೇ ? ಮತ್ತೆ ಅಮೂಲ್ಯವಾದ ವಿಶ್ರಾಂತಿಯ ಘಳಿಗೆಗಳು ಕಳೆದುಹೋದವು.

ಪ್ರತಿ ಕೌಂಡಿನ ಪ್ರಾರಂಭದಲ್ಲೂ ಕಿಂಗ್ ನಿಧಾನವಾಗಿ ಸರಿಯುತ್ತ ತನ್ನ ಮೂಲೆಯ ಆವರಣದಲ್ಲೇ ಇರುತ್ತಿದ್ದನು. ಆದ್ದರಿಂದ ಎದುರಾಳಿ ಹೆಚ್ಚು ಹೆಜ್ಜೆಗಳನ್ನು ಹಾಕಲೇಬೇಕಾಗಿತ್ತು. ಹಾಗೆಯೇ ಪ್ರತಿ ಕೌಂಡಿನ ಕೊನೆ ಯಲ್ಲೂ ಕಿಂಗ್ ಹಿಮ್ಮೆಟ್ಟುತ್ತಾ ತಕ್ಷಣ ಕುಳಿತುಕೊಳ್ಳುವ ಏರ್ಪಾಟುಮಾಡಿ ಕೊಳ್ಳುತಿದ್ದನು !