ಪುಟ:ಬಾಳ ನಿಯಮ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಂಡು ಮಾಂಸ ಇನ್ನೂ ಎರಡು ರೌಂಡುಗಳು ಕಳೆದವು ; ಕಿಂಗ್ ಜಾಗರೂಕತೆಯಿಂದ ಒಂದು ಮಿತಿಯಲ್ಲಿ ಶಕ್ತಿಯನ್ನು ಪ್ರದರ್ಶಿಸುತ್ತಿದ್ದನು. ಸ್ಯಾಂಡಲ್ ಮಾತ್ರ ಮಿತಿ ಮೀರಿ ತನ್ನ ಶಕ್ತಿಯನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದನು. ಬರಿಯ ಏಟುಗಳಿಂದ ಹೆಚ್ಚು ಪ್ರಯೋಜನವಾಗದಿರಲು ಅವನು ಕಾಲನ್ನು ನೆಲಕ್ಕೂರಿ ಒಂದು ಹೆಜ್ಜೆ ದೂರ ಛಂಗನೆ ನೆಗೆಯಲು ಪ್ರಯತ್ನ ಪಟ್ಟನು. ಆದರೂ ಕಿಂಗ್ ನಿಧಾನವಾಗಿ ಹಿಮ್ಮೆಟ್ಟುತ್ತಲೇ ಇದ್ದನು. ಮುಂದೆ ಹೋಗಿ ಯುದ್ದಮಾಡೆಂದು ಯುವಕ ಜನಸ್ತೋಮ ಕೂಗಾಡಿತು. ಕಿಂಗ್ ಯಾವು ದಕ್ಕೂ ಗಮನಕೊಡಲಿಲ್ಲ. ಪುನಃ ಆರನೇ ರೌಂಡಿನಲ್ಲಿ ಸ್ಯಾಂಡಲ್ ಬೇಜವಾ ಬ್ದಾರಿಯಿಂದ ಹೊಡೆಯಲು ಆರಂಭಿಸಿದನು. ಮತ್ತೆ ಟಾಮ್ ಕಿಂಗ್‌ನ ಭಯಂಕರ ಹೊಡೆತ 'ದವಡೆಗೆ ವಿದ್ಯುತ್ತಿನಂತೆ ತಾಕಿತು. ಹಿಂದಿನಂತೆ ಈ ಸಾರಿಯ ನ್ಯಾಂಡಲ್ ಒಂಬತ್ತು ಸೆಕೆಂಡುಗಳ ಕಾಲ ಕೆಳಗೆ ಬಿದಿ ದನು. ಏಳನೇ ಕೌಂಡಿನ ಹೊತ್ತಿಗೆ ನ್ಯಾಂಡಲ್‌ನ ಆದರ್ಶತಿ ಕಡಿಮೆಯಾಗಿತ್ತು, ತನ್ನ ಅನುಭವದಲ್ಲಿ ಅಚ್ಚಳಿಯದೆ ನಿಲ್ಲುವಂಧ ಕಾದಾಟವನ್ನು ಕಂಡನು. ಟಾಮ್ ಕಿಂಗ್‌ನಂತಹ ಮುದುಕನನ್ನು ಅವನು ಇಲ್ಲಿಯ ತನಕ ಎದುರಿಸಿರಲಿಲ್ಲ. ಏಕೆಂದರೆ ಜಾನಕಿಂಗ್ ಮುದುಕನಾದರೂ ಬುದ್ದಿವಂತ, ಆತ್ಮರಕ್ಷಣೆ ಮಾಡಿ ಕೊಳ್ಳುವುದರಲ್ಲಿ ರಕ್ತ ಮತ್ತು ಆತನ ಗುದ್ದುಗಳು ಮುಳ್ಳಿನ ತುದಿಯನ್ನು ಒತ್ತಿದಂತಿತ್ತು. ಎದುರಾಳಿಯನ್ನು ಕೆಡವಲು ಎರಡು ಕೈಗಳೂ ಸಮರ್ಥ ವಾಗಿದ್ದವು....ಆದರೂ ಟಾಕಿಂಗ್ ನಾಧಾರಣವಾಗಿ ಗುದ್ದಾಟಕ್ಕೆ ನಿಲ್ಲು ತಿರಲಿಲ್ಲ. ಜಜ್ಜಿ ಹೋಗಿದ್ದ ಗೆಣ್ಣುಗಳ ಬೆಲೆ ಅವನಿಗೆ ತಿಳಿದಿತ್ತು. ಮೂಲೆ ಯಲ್ಲಿ ಕುಳಿತು ಎದುರಾಳಿಯ ಕಡೆ ದೃಷ್ಟಿ ಬೀರಿದಾಗ, ಒಂದು ಯೋಚನೆ ಹೊಳೆಯಿತು. ತನ್ನ ಬುದ್ದಿವಂತಿಕೆ, ಯುವಕ ಸ್ಯಾಂಡಲ್‌ನ ಬಿಸಿರಕ್ತದೊಡನೆ ಸೇರಿದರೆ, ನಿಜವಾಗಿಯೂ ಪ್ರಪಂಚದಲ್ಲೇ ರಿಕಾರ್ಡ್ ಸ್ಥಾಪಿಸುವ 'ಹೆವಿವೈಟ್ ಛಾಂಪಿಯನ್' ಹುಟ್ಟುತ್ತಾನೆ! ಆದರೆ ಅದು ಕಷ್ಟ. ನ್ಯಾಂಡಲ್ ಎಂದೆಂದಿಗೂ ಪ್ರಪಂಚದ ಛಾಂಪಿಯನ್ ಆಗಲಾರ. ಬುದ್ಧಿವಂತಿಕೆ ಎಂಬುದು ಅವನ ತಲೆಯಲ್ಲಿಲ್ಲ. ಅದನ್ನು ಯಾವನದಿಂದಲೇ ಸಂಪಾದಿಸಲು ಪ್ರಯತ್ನ ಪಡ ಬಹುದು. ಬುದ್ದಿವಂತಿಕೆ ಅವನ ಕೈಸೇರುವ ಹೊತ್ತಿಗೆ ಯಾವನ ಮುಗಿದು ಹೋಗುತ್ತದೆ..... ಕಿಂಗ್ ತನಗೆ ಗೊತ್ತಿದ್ದ ಎಲ್ಲ ಉಪಾಯಗಳ ಉಪಯೋಗವನ್ನೂ ಪಡೆದನು. ಸಮಯ ಸಿಕ್ಕಾಗ ಅವನು ಪೂರಾ ಕೈನೀಡಿ ಗುದ್ದಲಾಗದಷ್ಟು