ಪುಟ:ಬಾಳ ನಿಯಮ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಹತ್ತಿರಕ್ಕೆ ಬರುತ್ತಿದ್ದನು. ಮುಷ್ಟಿ ಗೊಂಡ ತನ್ನ ತೋಳಿನಿಂದ ಎದುರಾಳಿಯ ಪಕ್ಕೆಲುಬಿಗೆ ನೋಯುವಂತೆ ಹೊಡೆಯುತ್ತಿದ್ದನು. ಮಲ್ಲಯುದ್ದದ ತತ್ವ ಗಳಲ್ಲಿ ಭುಜದ ಹೊಡೆತವೂ ಒಂದು; ಅದು ಮುಷ್ಟಿಯುದ್ಧದಷ್ಟೇ ಅಪಾಯಕರ ವಾದುದು. ಆದರೆ ಅದಕ್ಕೆ ಹೆಚ್ಚಿನ ಪ್ರಯತ್ನ ಬೇಕಿಲ್ಲ. ತನ್ನ ತೂಕವನ್ನೂ ಕಿಂಗ್ ಎದುರಾಳಿಯ ಮೇಲೆ ಹೇರುತ್ತಿದ್ದನು. ಬಿಡಲು ಇಷ್ಟವಿಲ್ಲದೆ ಹಿಡಿಯು ತಿದ್ದನು. ಆಗ ರೆಫರಿ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಲೇ ಬೇಕಾಯಿತು. ಸ್ಯಾಂಡಲ್‌ಗೆ ವಿಶ್ರಾಂತಿ ತೆಗೆದುಕೊಳ್ಳುವ ಅಭ್ಯಾಸ ಇನ್ನೂ ಬಂದಿರಲಿಲ್ಲ. ಇದರಿಂದ ರೆಫರಿಗೂ ಸಹಾಯವಾಗಿತ್ತು. ಸ್ಯಾಂಡಲ್ ಹೊರ `ಳಾಡುತಿದ್ದರೂ, ತನ್ನ ಕೈಗಳನ್ನು ಬೀಸದಿರಲು ಸಾಧ್ಯವಿರಲಿಲ್ಲ. ಕೆಲವು ವೇಳೆ ಯಂತೂ ಹಿಂದಿನಿಂದ ಟಾಕಿಂಗ್ನ ಚಾಚಿದ ಮುಖಕೆ ತಿವಿಯುತಿದ ನು. ಆಗ ಸಭಿಕರು ಹೊಗಳುತಿದ್ದರು. ಆದರೆ ಆ ಏಟು ಯಾವ ಅಪಾಯವನ್ನೂ ಮಾಡದೆ ಸುಮ್ಮನೆ ಶಕ್ತಿ ವ್ಯಯವಾಗುತ್ತಿತ್ತು. ಆದರೂ ಸ್ಯಾಂಡಲ್ ಆಯಾಸ ಪಡುತ್ತಿರಲಿಲ್ಲ; ಇತಿ ಮಿತಿಗಳ ಕಡೆ ಅವನಿಗೆ ಅರಿವೇ ಇರಲಿಲ್ಲ. ಸ್ಯಾಂಡಲ್‌ನ ಬಲಗೈ ಗುದ್ದು ತೀಕ್ಷ್ಯವಾಗಿತ್ತು. ಕಿಂಗ್ ಜೋರಾದ ಶಿಕ್ಷೆಯನ್ನೇ ಅನುಭವಿಸುತಿದ್ದಾನೆಂದು ಭಾಸವಾಯಿತು. ಮುದುಕ ಜೆಟ್ಟಗಳು ಮಾತ್ರ, ಕಿಂಗ್ ಏಟುಬೀಳುವ ಮೊದಲು ತನ್ನ ಎಡಕೈಗವಸಿನಿಂದ ಎದು ರಾಳಿಯ ಸ್ನಾಯುವಿಗೆ ಮುಟ್ಟಿಸುತಿದ್ದ ರೀತಿಯನ್ನು ಮೆಚ್ಚಿದರು; ನಿಜ ವಾಗಿಯೂ ಅದು ಪಳಗಿದ ಕೈಚಳಕ, ಎದುರಾಳಿಯ ಏಟಿನ ಬಲ ಕುಗ್ಗಿಸಲು ಅದು ಸಾಧನವಾಗಿತ್ತು. ಪ್ರತಿ ಸಲವೂ ಸ್ವಲ್ಪಸ್ವಲ್ಪವಾಗಿ ಏಟಿನ ರಭಸ ಕಡಿಮೆಯಾಗಲು ಕಾರಣವಾಯಿತು. ಒಂಬತ್ತನೇ ರೌಂಡಿನಲ್ಲಿ ನೋಡಬೇಕು ! ಒಂದೇ ಮಿನಿಟಿನಲ್ಲಿ ಮೂರುಬಾರಿ ಕಿಂಗ್‌ನ ಬಲಗೈ ಸುರಳಿಸುತ್ತಿ ದವಡೆಗೆ ಹೊಡೆಯಿತು. ತೂಕವಾಗಿದ್ದ ಸ್ಯಾಂಡಲ್‌ನ ದೇಹ ಮೂರು ಸಲವೂ ಕೆಳಕ್ಕೆ ಬಿತ್ತು. ಪ್ರತಿ ಆವೃತ್ತಿಯೂ ಒಂಬತ್ತು ಸೆಕೆಂಡುಗಳಲ್ಲೇ ಎದ್ದು ಬಿಟ್ಟನು. ಮುರಿದುಬಿದ್ದವನಂತೆ ಕಾಣುತ್ತಿದ್ದರೂ, ಯಾವನವೆಂಬ ಪ್ರಧಾನ ಆಸ್ತಿಯ ಹಕ್ಕುದಾರನಂತೆ ಚೇತರಿಸಿಕೊಂಡನು. ಉರಿಮೋರೆಯಿಂದಲೇ ಯುದ್ಧ ಮಾಡುತಿದ್ದನು....ಕಿಂಗ್‌ನ ಪ್ರಧಾನ ಆಸ್ತಿ ಅನುಭವ. ತನ್ನ ಶಕ್ತಿ ಸಾಮರ್ಥ್ಯ ಕಡಿಮೆಯಾದಂತೆ, ಅದಕ್ಕೆ ಬದಲಾಗಿ ಯುಕ್ತಿಯನ್ನೂ ಮತ್ತು ಧೀರ್ಘಕಾಲದ ಕಾದಾಟದಿಂದ ಗಳಿಸಿದ ಬುದ್ದಿವಂತಿಕೆಯನ್ನೂ ಇರಿಸುತಿದ್ದನು. ಶಕ್ತಿಯನ್ನು ವಿನಿಯೋಗಿಸುವಲ್ಲಿ - ಅತಿ ಜಾಗರೂಕನಾಗಿರುತಿದ್ದನು. ಎದುರಾಳಿಯ