ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಲಿ ೭೧ ಬೇಕು. ಆಗ ಅವು ಕಾಡಿನ ಧೀರ ತೋಳಗಳೊಡನೆ ಸಂಪರ್ಕ ಬೆಳೆಸುತ್ತವೆ.... ಹೊಸಪೀಳಿಗೆಯು ನಮ್ಮ ನಾಯಿಗಳು ಬಲಿಷ್ಟವಾಗುತ್ತವೆ. “ ಆ ಮಾತುಗಳು ನಮ್ಮನ್ನು ಹುರಿದುಂಬಿಸಿದುವು ; ಏಕೆಂದರೆ ನಮ್ಮ ವೈಟ್ ಫಿಶ್ ಜನ ನಾಯಿಗಳಿಗಾಗಿ ಪ್ರಸಿದ್ಧರಾಗಿದ್ದರು. ಆ ನಾಯಿಗಳಿಗೆ ನಾಡಿ ನಲ್ಲೆಲ್ಲ ಪ್ರಥಮ ಸ್ಥಾನವಿತ್ತು. ಆದರೆ ವೈಟ್ ಫಿಶ್ ಜನಾಂಗವೆಲ್ಲಿದೆ ? ಮುಖ್ಯ ರಾಗಿದ್ದ ಯುವಕ ಯುವತಿಯರು ಬಿಳಿಯರೊಡನೆ ಭೂಮಿ ನದಿಗಳನ್ನು ದಾಟಿ ಹೊರಟುಹೋಗಿದ ರು. ಮರಳಿ ಬಂದ ಯುವತಿಯರು ನೋಡಾಳಂತೆ ಸತ್ವ ಹೀನರಾಗಿ ವಯಸ್ಸು ಮಾರಿದಂತಿದ್ದರು. ಯುವಕರು ಕೆಟ್ಟ ಮಾತುಗಳ ನಾಡುತ್ತ ನಮ್ಮೊಡನೆ ಬೆಂಕಿಯ ಬಳಿ ಕುಳಿತು ಕೀಳು ದರ್ಜೆಯ ಸಾರಾಯಿ ಗಳನ್ನು ಕುಡಿಯುತಿದ್ದರು. ರಾತ್ರಿ ಹಗಲೆನ್ನದೆ ಜೂಜಾಡುತಿದ್ದರು. ಅವರಿಗೆ ಹೃದಯದಲ್ಲಿ ಯಾವಾಗಲೂ ತಳಮಳ, ಮತ್ತೆ ಬಿಳಿ ಮನುಷ್ಯನ ದರ್ಶನ ವಾದೊಡನೆ ಅವನನ್ನು ಹಿಂಬಾಲಿಸಿ, ಕಂಡುಕೇಳದ ಸ್ಥಳಗಳಿಗೆ ಪ್ರಯಾಣ ಬೆಳಸುತಿದ್ದರು. ಅವರಿಗೆ ಮಾನ, ಮಯ್ಯಾದೆ, ಗೌರವ ಯಾವುದೂ ಇರಲಿಲ್ಲ. ಹಿಂದಿನ ಪದ್ಧತಿಗಳನ್ನು ಗೇಲಿಮಾಡುತಿದ್ದರು ; ನಾಯಕರನ್ನೂ ಹೀಯಾಳಿಸು ತಿದ್ದರು. “ ಆಗಲೇ ಹೇಳಿದಂತೆ ನಮ್ಮ ವೈಟ್ ಫಿಕ್ ಜನಾಂಗ ದುರ್ಬಲವಾಯಿತು. ಬೆಚ್ಚನೆಯ ಚರ್ಮಗಳನ್ನು ಹೊಗೆಸೊಪ್ಪು ಮೈ ಸ್ತಿಗಳಿಗೆ ಮಾರಿ ತೆಳುವಾದ ಹತ್ತಿ ಬಟ್ಟೆಯನ್ನು ಹಾಕಿದ್ದರಿಂದ ಚಳಿಯಲ್ಲಿ ನಡುಗಬೇಕಾಯಿತು. ಗಂಡಸರೂ ಹೆಂಗಸರೂ ಇಡೀ ರಾತ್ರಿಗಳನ್ನು ಕೆನ್ನುತ್ತಾ ಕಳೆಯಬೇಕಾಯಿತು. ದಾರಿ ಸವೆಸಿ ಬಂದಿದ್ದ ಬೇಟೆಗಾರರು ಹಿಮದ ಮೇಲೆ ರಕ್ತ ಕಾರಿದರು. ಒಬ್ಬೊಬ್ಬರಾಗಿ ಅದೇ ಕಾಯಿಲೆಯಿಂದ ಬಾಯಿ ತೆರೆದು ಸತ್ತರು. ಹುಟ್ಟುವ ಸಂಖ್ಯೆ ಕಡಿಮೆ ಯಾಗುತ್ತ ಬಂದಿತು. ಹುಟ್ಟಿದವರು ತಕ್ಷಣ ಕಾಯಿಲಿಗೆ ತುತ್ತಾದರು. ನಾವು ಎಂದೂ ಕಂಡು ಕೇಳದ ಕಾಯಿಲೆಗಳು ಬಿಳಿಯರಿಂದ ಬಂದವು. ಸಿಡಬು, ದಡಾರ ಎಂಬುದೇ ಅವು ಎಂದು ಈಗ ನಾನು ಕೇಳಿದ್ದೇನೆ. ಸಿರವಾಗಿ ನಿಂತ ನೀರುಸುಳಿಯಲ್ಲಿ ಮೊಟ್ಟೆಯೊಡುಯುತಿದ್ದಾಗ ಸಾಯುವ ಸಾಮನ್ ಮಿಾನು ಗಳಂತೆ ನಿರಾತಂಕವಾಗಿ ಪ್ರಾಣಬಿಟ್ಟರು. - “ ಆದರೂ ಅದರಲ್ಲಿ ಆಶ್ಚರ್ಯವಿರುವುದು- ಬಿಳಿಯ ಜನ ಸಾವಿನ ಉಸಿರಿನಂತೆ ಬರುತ್ತಲೇ ಇದ್ದರು. ಅವರ ಮಾರ್ಗವೇ ಮೃತ್ಯುಮಯ ವಾಗಿತ್ತು. ಅಷ್ಟಾದರೂ ಅವರು ಮಾತ್ರ ಸಾಯುತ್ತಿರಲಿಲ್ಲ. ಅವರಿಗೆ ನಮಗಿಂತ