ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ೮೭ ಹುಳು ಮುಂತಾದವು ಜೀವಿಸಲೂ ಸಾಧ್ಯವಿಲ್ಲವೆಂಬ ಅಂಶ ಅವನಿಗೆ ತಿಳಿಯದೆ ಇರಲಿಲ್ಲ. ಆದರೂ ಪಶು ಪ್ರವೃತ್ತಿ ! ಪ್ರತಿಯೊಂದು ನಡುವನ್ನೂ ನಿರರ್ಥಕವಾಗಿ ಕಣ್ಣಿಟ್ಟು ನೋಡಿದನು. ಅಷ್ಟರಲ್ಲಿ ಸಂಜೆ ಕಾಲಿಡುತ್ತಾ ಬಂತು. ಅಬ್ಬ ! ಎಂಥ ಅನ್ವೇಷಣೆ! ಸಿಕ್ಕೇಬಿಟ್ಟಿತು ; ಒಂದೇ ಒಂದು ಮಿಾನು ! ಆಕಾರದಲ್ಲಿ ಮಿನೋ ' ವಿನಷ್ಟೇ ಇತ್ತು, ಭುಜದ ತನಕ ನೀರಿನೊಳಗೆ ಕೈ ಇಳಿ ಬಿಟ್ಟನು. ಆದರೆ ಆ ಮಿಾನು ಚಾತುರ್ಯದಿಂದ ನುಣುಚಿಕೊಂಡಿತು. ನಾಯಕನು ಅದನ್ನು ಎರಡು ಕೈಗಳಿಂದಲೂ ಹಿಡಿಯಲು ಪ್ರಯತ್ನ ಪಟ್ಟು, ಇಡೀ ನೀರನ್ನು ಕೆಳಗಿನಿಂದ ಮೇಲಕ್ಕೆ ಕಲಕಿಬಿಟ್ಟನು. ಆ ಉತ್ಸಾಹದಿಂದ ಅವನೇ ಕೆಳಕ್ಕೆ ಬಿದ್ದನು. ಸೊಂಟದ ತನಕ ತೆಪ್ಪೋತ್ಸವವಾಯಿತು. ಆದರೆ ಮಾನಿನ ಗತಿ ? ಕೆಸರು ತುಂಬಿದ ನೀರಲ್ಲಿ ಇನ್ನು ಕಂಡುಹಿಡಿಯಲು ಸಾಧ್ಯವೇ ಇಲ್ಲ. ನೀರು ತಿಳಿಯಾಗುವ ತನಕ ಅವನು ಕಾಯಲೇಬೇಕಾಯಿತು. ಮತ್ತೆ ಪ್ರಯತ್ನ ಸಾಗಿತು; ಪುನಃ ನೀರು ಕೆಸರಾಯಿತು. ಎಲ್ಲಿಯ ತನಕ ಕಾಯುವುದು ? ಅವನಿಗಂತೂ ತಾಳ್ಮೆಯೇ ಇಲ್ಲ. ಮನಸ್ಸಿಗೆ ಏನೊ ಹೊಳೆಯಿತು ; ಟನ್ನಿನ ಬಕೆಟ್ಟನ್ನು ಬಿಚ್ಚಿ ಹೊರತೆಗೆದನು. ಅದರಿಂದ ಮಡುವಿನ ನೀರೆತ್ತಿ ಚಲ್ಲಲು ಆರಂಭಿಸಿದನು. ಮೊದಲ ರಭಸದಿಂದ ತನ್ನ ಮೇಲೆಯೆ ನೀರು ಸಿಡಿಯುತಿತ್ತು ; ಹತ್ತಿರವೇ ಬೀಳುತ್ತಾ ಪುನಃ ನಡುವನ್ನು ಸೇರುತಿತ್ತು. ಆದ್ದರಿಂದ ನಾಯಕನು ಮತ್ತೆ ತಾಳ್ಮೆ ವಹಿಸಲು ಬಹು ಕಷ್ಟ ಪಟ್ಟನು. ಆದರೂ ಹೃದಯ ಒಂದೇ ಸಮನೆ ಬಡಿಯುತಿತ್ತು. ಕೈಗಳು ನಡುಗುತಿದ್ದವು. ಅರ್ಧ ಘಂಟೆಯಾದ ಮೇಲೆ ಮಡು ಸಂಪೂರ್ಣ ಖಾಲಿ ಯಾಗುತ್ತ ಬಂತು. ಒಂದು ಬಟ್ಟಲನ್ನೂ ನೀರು ಉಳಿಯಲಿಲ್ಲ. ಆದರೆ ಮಿಾನು ಸಿಕ್ಕಲೇ ಇಲ್ಲ ! ಏನಾಗಿ ಹೋಯಿತು ? ನಾಯಕನು ಸುತ್ತಲೂ ಕಣ್ಣು ಹೊರಳಿಸಿದನು. ಹೊರನೋಟಕ್ಕೆ ಮರೆಯಾದಂತೆ ಕಲ್ಲುಗಳ ಮಧ್ಯೆ ಸಣ್ಣ ಬಿರುಕೊಂದು ಕಾಣಿಸಿತು. ಅದರ ಮೂಲಕವೇ ಮಾನು ತಪ್ಪಿಸಿಕೊಂಡು ಹೋಗಿದೆ ; ಈ ಬಿರುಕಿನ ಮತ್ತೊಂದು ಮುಖ ಹತ್ತಿರದ ಯಾವುದೋ ದೊಡ ಮಡುವಿನಲ್ಲಿ ಅಡಕವಾಗಿರಬೇಕು. ಅಂದಮೇಲೆ ಆ ಮಡುವಿನ ನೀರನ್ನು ಖಾಲಿಮಾಡಲು ಸಾಧ್ಯವೇ ? ರಾತ್ರಿ ಹಗಲು ಕಷ್ಟ ಪಟ್ಟರೂ ಆಗದ ಕೆಲಸ. ಅಂತೂ ಕಾರ್ಯ ಮಿಂಚಿಹೋಯಿತು.... ಮೊದಲೇ ಬಿರುಕಿನ ವಿಷಯ ತಿಳಿದಿದ್ದರೆ, ದೊಪ್ಪನೆ ಕಲ್ಲು ಹಾಕಿ ಮುಚ್ಚಿ ಬಿಡುತ್ತಿದ್ದೆ ! ಆಗ ಮಿಾನು