ಪುಟ:ಬೃಹತ್ಕಥಾ ಮಂಜರಿ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


• ಸ ತ ಥ ಮ ೧ ರಿ ರಿತಿರುವರು ಆದ್ದರಿಂದ ನೀವವರ ದೃಷ್ಟಿಗೋಚರರಾಗದೇ ಜಾಗ್ರತೆಯಾಗಿ ಇಲ್ಲಿಂ ದ ತೆರಳಬೇಕು, ಇದ್ದ ಸಂಗತಿಯನ್ನು ಮರೆಗೈಯ್ಯದೆ ಅರಿಕೆ ಮಾಡಿದ್ದೇನೆ ಇದರ ಮೇಲೆ ಸ್ವಾಮಿಚಿತ್ರವಿದ್ದಂತೆ ಮಾಡಬಹುದೆಂದು ಹೇಳುತ್ತಿರುವ ಭೇತಾಳನಂ ಕು ತು ಎಲೈ ಭೂತಾಧಿಸತಿಯೇ ! ಪ್ರಪಂಚದಲ್ಲಿ ಇಂಥಾ ಶೆರವುಳ್ಳ ಪ್ರೌಢಾಂಗನೆ ಯರಿರುತ್ತಾರೆಯೇ ? ಅಹಹಾ ! ಇದು ಪರಮಾಶ ರಕರವಾಗಿರುವದು, ಆಕೆಯಂ ಕಂಡು ಮಾತಾಡಿದ ಹೊರ್ತು ಮನಃ ಚಾಂಚಲ್ಯ ವಂ ಕೋಗಗೊಳಿಸಲಾರೆನು, ಈಛಾ ಗದೊಳು ನೀನೂ ಪ್ರತಿಕಲನಾಗದೇ ಸಹಾಯಕನಾಗಿರಬೇಕೆಂದು ಬೇಡಿಕೊಳ್ಳು 'ನೆಂದು ಹೇಳಿ ಆ ಸದಾನತಿಯ ನೋಡುವ ತವಕದಿಂದ ಹೊರಟು ಮಣಿಪುರವಂ ಪ್ರವೇಶಿಸಿ ಅರಮನೆಯ ಬಾಗಿಲು ಸರಿ ಆ ಬಳಿಯೊಳು ನಿಂತಿದ್ದ ದ್ವಾರಪಾಲಕಳಂ ಸವಿಾಪಕ್ಕೆ ಕರೆದು ಎಲ್‌ ರಾಜೀ ಸೇವಕಳೆ ನಾನು ವಿಕ್ರಮಾದಿತ್ಯರಾಯನು, ನಿ ಮೊಡೆಯಳಾದ ಪದ್ಮಾವತಿಯೊಳು ಸಂಭಾಷಿಸೆ ಕೌತುಕನಾಗಿ ಬಂದಿರುವೆನು ಈ ವಾರ್ತೆಯಂ ಅತಿಭರದೊಳು ಅರಿಕೆ ಮಾಡುವದೆಂದು ಹೇಳಲಾಗಿ ಆ ದೈವಾರಿಯು ಮಂದಿರದೊಳು ಹೊಕ್ಕು ಪದ್ಮಾವತಿಯಂ ಕ೦ದು ಭಯಭಕ್ತಿಗಳೊಡನೆ ನುತಿಗೈದು ಎಲೌ ತಾಯಿಯೇ ವಿಕ್ರಮಾರ್ಕರಾಯನಂತೆ ತಮ್ಮನ್ನು ಸಂದರ್ಶಿಸಿ ಸಂಭಾಷಿಸ ಲೋಸುಗ ಕಾದಿರುವನೆಂದರಿಕೆ ಮಾಡುತ್ತಿರುವ ದ್ವಾರಪಾಲಕಿಯನ್ನು ನೋಡಿ ಎಲ್ ಸೇವಕಳೇ ಇದೇನು, ವಿಕ್ರಮಾರ್ಕರಾಯನೇ ಬಂದಿರುವನು ? ಆತನ ಮಹಿ ಮಯನ್ನೆಲ್ಲ ನಂ ಪರೋಕ್ಷವಾಗಿ ಕೇಳೆಬಲೆ, ಎಂದು ಮಲಗಿದ್ದವಳು ಧಿಗ ನೆಯದ್ದು ಕುಳಿತು ನಾನು ಹೇಳುವ ಮಾತುಗಳನ್ನೆಲ್ಲಾ ಆರಾಯನಿಗೆ ಅರುಹಿ ಅದಕ್ಕೆ ಆತನಂಗೀಕರಿಸಿದರೆ, ಒಳಹೊಗಿದ್ದು, ಇಲ್ಲವಾದರೆ ಬೇಡವೆಂದು ಹೇಳಿ ಆತ ನೋಳು ಹೇಳುವ ಮಾತುಗಳಂ ಕೇಳುವಳು. ನಮಿಾ ಪೊಳಲನ್ನು ಹೊಗುವದಕ್ಕೆ ಯಾರಿಗೂ ಸಾಧ್ಯವಲ್ಲ, ಯಾರ ಸಹಾಯದಿಂದಲೋ ಬಂದಿರಬಹುದು. ಆದರೂ ಚಿಂತೆಯಿಲ್ಲ ಒಳಗೆ ಹೋಗಲು ಇಷ್ಟವಾದರೆ ನಮ್ಮ ಪ್ರತಿಜ್ಞೆಯನ್ನು ಅನುಸರಿಸಿ ಕಾಂಡಪದದ ಹೊರಗೆ ಕುಳಿತು ನಮ್ಮನ್ನು ಮಾತಾಡಿಸಬೇಕು, ನಾವಾಗಿ ನಾವೇ ಮೂರು ಮೂರು ಮಾತುಗಳನ್ನಾಡಿದ್ದೇ ಆದರೆ, ಆಗ ಅವನ ವರ್ತಿಗಳಾಗಿ ನಡೆದು ಕೊಳ್ಳುವವು. ಆತನಲ್ಲಿ ಅಂಥಾ ಸಾಹಸದೈಯ್ಯಲಕ್ಷ್ಮಿಯು ನೆಲಗೊಂಡಿದ್ದರೆ ಬರ ಬಹುದು ಎಂದು ತಿಳಿಯಮಾಡುವಂತೆ ಆಜ್ಞಾಪಿಸಿದ ವಡತಿಯ ಆಜ್ಞೆಯನ್ನು ತಿರಸಾ ವಹಿಸಿದವಳಾಗಿ ಹಿಂತಿರುಗಿ ಬಂದು, ತಮ್ಮ ರಾಣಿಯ ಪ್ರತಿಜ್ಞಾ ಪೂರಕವಾದ ಮಾ ತುಗಳನೆಲ್ಲಮಂ ವಿಕ್ರಮಾದಿತ್ಯರಾಯನಿಗೆ ಅರಿಕೆಮಾಡಲಾಗಾ ರಾಯನದಕೊಪ್ಪಲು ಈ ರಾಜನ ಅನುಮತಿಯಂ ತನ್ನೊಡತಿಗಾ ದೂತಿಕೆಯರುವಿದ ಕೂಡಲೆ ವಿಕ್ರಮಾದಿ ತ್ಯಸಂ ಮಯ್ಯಾದೆ ಪೂರಕವಾಗಿ ಒಳಹೊಗಿಸಿ ರಾಜೋಪಚಾರಾರ್ಹoಗಳಾದ ಸವ ಸ್ವ ಸಾಮಗ್ರಿಗಳೊಡನೆ ಸತ್ಕರಿಸಿ ಭೋಜನವಂಗಸಿ ರಾತ್ರಿಯಾಗುತ್ತಲೇ ಈ ವಿಕ್ರ