ಪುಟ:ಬೆಳಗಿದ ದೀಪಗಳು.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೦

ಸಂಪೂರ್ಣ-ಕಥೆಗಳು

ಕಷ್ಟಗಳನ್ನೂ ಲೆಕ್ಕಿಸದ ಧೈರ್ಯಶಾಲಿಯಾದ ರಾಜನ ಚಿತ್ತವು ಪ್ರೀತಿಯ ಮಗಳ ದುಃಖಾಕ್ರೋಶದಿಂದ ವೇಧಿಸಲ್ಪಟ್ಟು ಕ್ಷಣಹೊತ್ತು ಅವನು ಮೋಹಿತನಾದನು. 'ಈ ನಿರರ್ಥಕವಾದ ರಾಜ್ಯ ಪದದಲ್ಲಿ ಯಾವ ತಥ್ಯವಿದೆ? ನನ್ನ ಜೀವಿತದಕಿಂತ ವನವಾಸಿಗಳಾದ ಕಾಡುಜನರ ಜೀವಿತವೇ ಸುಖಕರವಾದದ್ದು. ಹೀಗೆ ವಿಚಾರಿಸಿ ದುಃಖಾವೇಶದಿಂದ ಅವನು ನನಗೆ ಸ್ವಲ್ಪ ಅವಕಾಶವನ್ನು ಕೊಡಬೇಕು' ಎಂಬ ಆಶಯದ ಪತ್ರವನ್ನು ಅಕಬರ ಬಾದಶಹನಿಗೆ ಬರೆದನು.

ಈ ಪತ್ರವು ಆಕಬರನ ಕೈಸೇರಲು ಅವನಿಗೆ ಅತ್ಯಂತ ಹರ್ಷವಾಗಿ, 'ಸ್ವಲ್ಪ ದಿವಸಗಳಲ್ಲಿಯೇ ಪ್ರತಾಪನು ದಿಲ್ಲಿಯ ಸಿಂಹಾಸನಕ್ಕೆ ಶರಣು ಬರುವನೆಂಬ ಅಭಿಪ್ರಾಯವನ್ನು ಈ ಪತ್ರವು ಸೂಚಿಸುವದೆಂದು ಅವನು ತನ್ನ ಸರದಾರರಿಗೆ ಒಳ್ಳೆ ಉಬ್ಬಿನಿಂದ ಹೇಳಿದನು, ಅಕಬರನ ಈ ಅಭಿಪ್ರಾಯವು ದರಬಾರದ ಮೊಗಲ ಹಾಗೂ ರಜಪೂತ ಸರದಾರರಿಗೆಲ್ಲ ಸರಿ ತೋರಿತು, ಆದರೆ ಇದರಿಂದ ಬಿಕಾನೇರದ ಪೃಥ್ವಿರಾಜ ರಾಠೋಡನಿಗೆ ಮಾತ್ರ ಅತ್ಯಂತ ಖೇದವಾಯಿತು. ಅವನು ಆಕಬರನಿಗೆ ಪ್ರಾರ್ಥಿಸಿದ್ದೆ೦ದರೆ : “ಗರಿಬ ನವಾಜ, ಕ್ಷಮೆಯಿರಲಿ, ನನಗೆ ಈ ಪತ್ರದ ಸಂಬಂಧವಾಗಿ ಸಂದೇಹವಿದೆ. ಈ ತರದ ಪತ್ರವನ್ನು ಪ್ರತಾಪನು ಕಳಿಸುವನೆಂಬ ನಂಬಿಕೆಯು ನನಗಾಗದು, ಈ ಪತ್ರವು ಕೃತ್ರಿಮವಾಗಿದ್ದು ಪ್ರತಾಪನ ಹೆಸರಿಗೆ ಕಳಂಕವನ್ನು ತರುವ ಉದ್ದೇಶದಿಂದ ಅವನ ವೈರಿಗಳಲ್ಲೊಬ್ಬನು ಈ ಪತ್ರವನ್ನು ಬರೆದಿರಬಹುದು. ಅದಕ್ಕಾಗಿ ದಿಲೀಶ್ವರರು ನನಗೆ ಅಪ್ಪಣೆಯನ್ನು ಕೊಟ್ಟರೆ ನಿಜವಾದ ಸಂಗತಿಯನ್ನು ಶೋಧಿಸಿ ಪ್ರಭುಗಳ ಚರಣಕ್ಕೆ ಅರಿಕೆ ಮಾಡುವನು.” ಅಕಬರನು ಈ ಅವನ ವಿನಂತಿಯನ್ನು ಮಾನ್ಯ ಮಾಡಿದನು. ಸೃಥ್ವಿರಾಜನು ಪ್ರತಾಪಸಿಂಹನಿಗೆ ಪದ್ಯರೂಪದಿಂದ ಒಂದು ಪತ್ರವನ್ನು ಬರೆದನು, ಅದರ ಭಾವಾರ್ಥವಂದರೆ:'ಎಲ್ಲಿ ಭಾರತ ಪುತ್ರರು ಆಶಾಪೂರ್ಣವಾದ ದೃಷ್ಟಿಯಿಂದ ಪ್ರತಾಪಸಿಂಹನನ್ನೇ ನೋಡುತ್ತಿದ್ದಾರೆ. ಉಳಿದ ರಜಪೂತರೆಲ್ಲ ತಮ್ಮ ಪರಾಕ್ರಮವನ್ನೂ ತಮ್ಮ ಸ್ತ್ರೀಯರ ಮರ್ಯಾದೆಯನ್ನೂ ಆಕಬರನಿಗೆ ಎಂದೋ ಮಾರಿಕೊಂಡಿದ್ದಾರೆ. ಸಂಪೂರ್ಣ ಸೃಷ್ಟಿಯಲ್ಲಿ ತನ್ನ ದೇಶಾಭಿಮಾನವನ್ನು ಬಿಡದೆ ಧೈರ್ಯದಿಂದಲೂ ಪರಾಕ್ರಮದಿಂದಲೂ ಕಾತ್ರತೇಜ