ಪುಟ:ಬೆಳಗಿದ ದೀಪಗಳು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೮೯

ಮಾನಿಯಾದ ಪುರುಷನು ? 'ನಾನು ಬಾಪ್ಪಾ ರಾವಣನ ವಂಶಜನಿದ್ದು ನನ್ನ ದೇಶವನ್ನು ಶತ್ರುಗಳ ಕೈಯಲ್ಲಿ ಕೊಟ್ಟು ಅವರ ಮುಂದೆ ನನ್ನ ಶಿರವನ್ನು ಬಾಗಿಸಬೇಕೆ? ಎಂದೂ ಆಗದು.' ಇಂಥ ಸ್ವಾಭಿಮಾನ ಪೂರ್ಣನಾದ ರಾಜನು ವ್ಯಾಘ್ರಾದಿ ಹಿಂಸ್ರ ಪಶುಗಳಿಂದ ಆಶ್ರಿತವಾದ ಅರಣ್ಯಗಳಲ್ಲಿ ಅನೇಕ ವರ್ಷಗಳನ್ನು ಕಳೆದನೇ ಹೊರತು ಅಕಬರನಿಗೆ ಶರಣಾಗತನಾಗಲಿಲ್ಲ. ಶತ್ರುಗಳ ಅಂಕಿತವಾದ ಸ್ವದೇಶದ ಮುಕ್ತತೆಯನ್ನು ಮಾಡದ ಹೊರತು, ಬೆಳ್ಳಿ-ಬಂಗಾರದ ಪಾತ್ರೆಗಳಲ್ಲಿ ಭೋಜನವನ್ನು ಮಾಡದೆ ಪತ್ರಾವಲಿಯಲ್ಲಿ ಭುಂಜಿಸುವ, ರಾಜಮಂದಿರಗಳಲ್ಲಿ ವಾಸಿಸದೆ ಪರ್ಣಕುಟೀರದಲ್ಲಿಕಾಲಹರಣ ಮಾಡುವ, ಗಾದಿ ಶುಭಾಮ'ಗಳ ಮೇಲೆ ಶಯನವನ್ನು ಮಾಡದೆ ಹುಲ್ಲು ಚಾಪೆಯ ಮೇಲೆ ದೇಹವನ್ನು ಅವಶ್ಯವಾದ ವಿಶ್ರಾಂತಿಗಾಗಿ ಚಲ್ಲುವ ಪ್ರತಿಜ್ಞೆಯನ್ನು ಪ್ರತಾಪನು ಮಾಡಿದ್ದನು. ಈ ಪ್ರತಿಜ್ಞೆಯನ್ನು ಅವನು ಯಾವಜೀವ ಪರಿಪಾಲಿಸಿದನು. ಅವನ ರಾಣಿಯ ಸೊಸೆಯ ವನ್ಯ ತೃಣಧಾನ್ಯಗಳ ಹಿಟ್ಟಿನ ಭಕ್ಕರಿಗಳನ್ನು ತಿಂದು ಜೀವಿಸುತ್ತಿದ್ದರು, ಆದರೆ ಅವು ಕೂಡ ಒಮ್ಮೊಮ್ಮೆ ದೊರೆಯದೆ ಎರಡೆರಡು ದಿವಸಗಳ ವರೆಗೆ ಉಪವಾಸದಲ್ಲಿಯೇ ಅವರು ಕಾಲಕಳೆಯುತ್ತಿದ್ದರು.

ಈ ರೀತಿಯಾಗಿ ಕಾಲಕ್ರಮಣ ಮಾಡುತ್ತಿರಲು ಒಂದಾನೊಂದು ದಿವಸ ಚಿಕ್ಕ ಮಗಳು ಒಂದು ಭಕ್ಕರಿಯೊಳಗಿನ ಅರ್ಧ ಭಾಗವನ್ನು ಮಧ್ಯಾನದಲ್ಲಿ ತಿಂದು ಉಳಿದರ್ಧವನ್ನು ಸಂಜೆಗಾಗಿ ಮುಚ್ಚಿಡಲು, ಅಷ್ಟರಲ್ಲಿ ಜಪ್ಪಿಸಿಕೊಂಡು ಕುಳಿತಿದ್ದ ಒಂದು ಅಡವಿಯ ಬೆಕ್ಕು ಟಣ್ಣನೇ ಹಾರಿ ಆ ಬಕ್ಕರಿಯ ಚೂರನ್ನು ಕಚ್ಚಿ ಕೊಂಡು ಹೋಯಿತು. ಹುಡುಗಿಯು ಚಿಟ್ಟನೆ ಚೀರಿದಳು. ರಾಜನು ಶತ್ರುವಿನ ಮೇಲೆ ಹೇಗೆ ಕಡಿದು ಬೀಳಬೇಕೆಂಬ ವಿಚಾರದಲ್ಲಿ ಮಗ್ನನಾಗಿರಲು, ಮಗಳ ಆರ್ತಧ್ವನಿಯನ್ನು ಕೇಳಿ ಆವನ ಹೃದಯವು ಕಲ್ಲಿನಂತೆ ಕಠೋರವಾಗಿದ್ದರು ಆ ಪ್ರಸಂಗದಲ್ಲಿ ಕಳವಳಗೊಂಡಿತು. 'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಹೀಗೆ ಲೋಕೋತ್ತರ ಪುರುಷರ ಚಿತ್ರಗಳಿರುತ್ತವೆಂದು ಒಬ್ಬ ಕವಿಯು ವರ್ಣಿಸಿದ್ದು ತೀರ ಸತ್ಯವಿದೆ. ಪ್ರಾಣದ ಮೇಲೆ ಬಂದೊದಗಿದ ಅಸಂಖ್ಯಾತ ಸಂಕಟಗಳನ್ನೂ, ಕಾಡುಜನರಿಗೂ ಕೂಡ ಸಹಿಸಲು ಅಸಾಧ್ಯವಾದ