ಪುಟ:ಬೆಳಗಿದ ದೀಪಗಳು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಸಂಪೂರ್ಣ-ಕಥೆಗಳು

ನಡೆಸುವುದು ಅಸಾಧ್ಯವಾಗಿ, ಪ್ರಾಪ್ತವಾದ ಜಯದ ಪ್ರೌಢೆಯನ್ನು ಮೆರೆಸುತ್ತ ಅವನು ಸ್ವದೇಶಕ್ಕೆ ತೆರಳಿದನು. ಇದರಿಂದ ಪ್ರತಾಪನಿಗೂ ಅವನ ಅನುಯಾಯಿಗಳಿಗೂ ಅವಕಾಶ ದೊರೆಯಿತು. ಪ್ರತಾಪನು ಕವಳಮೇರದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಶತ್ರುಗಳು ಮರಳಿ ಬಂದರೆ ಯುದ್ಧಮಾಡಲು ಸಿದ್ಧತೆ ನಡೆಸಿದನು.

ಮಳೆಗಾಲವು ತೀರಲು ಮೊಗಲ ಸೈನ್ಯವು ಮತ್ತೆ ಸಾಗಿಬಂದು ಕಮಳ ಮೇರಕ್ಕೆ ಅನೇಕ ದಿವಸಗಳ ವರೆಗೆ ಮುತ್ತಿಗೆಯನ್ನು ಹಾಕಿಕೊಂಡು ಕುಳಿತಿತು. ಕಮಳಮೇರದಲ್ಲಿದ್ದ ಭಾವಿಗಳಲ್ಲಿಯ ನೀರು ಕೆಟ್ಟು ಅವುಗಳಲ್ಲಿ ಕ್ರಿಮಿಗಳಾಗಹತ್ತಿದ್ದರಿಂದ ಪ್ರತಾಪನಿಗೆ ತನ್ನ ರಾಜಧಾನಿಯನ್ನು ಬಿಟ್ಟು ಕೊಡಬೇಕಾಯಿತು. ಇದರಿಂದ ಕವಳಮೆರವು ಅನಾಯಾಸವಾಗಿಯೇ ಶತ್ರುಗಳ ಕೈವಶವಾಯಿತು, ಶತ್ರುಗಳು ಪ್ರತಾಪನ ಬೆನ್ನು ಹತ್ತಿದರು. ಪ್ರತಾಪನು ಅರವಳಿ ಪರ್ವತದೊಳಗಿನ ವನಪ್ರದೇಶವನ್ನು ಆಶ್ರಯಿಸಿಕೊಂಡನು. ಆದರೆ ಅಲ್ಲಿಯ ಶತ್ರುಗಳು ಅವನಿಗೆ ಗಂಟುಬಿದ್ದರು, ರೀತಿಯಾಗಿ ಪ್ರತಾಪನು ಈ ದಿವಸ ಒಂದು ವನದಲ್ಲಿದ್ದರೆ ಮಾರನೇ ದಿವಸ ಬೇರೊಂದು ಕಾಡಿನಲ್ಲಿ, ಈ ಕ್ಷಣದಲ್ಲಿ ಒಂದು ಗಿರಿಗವರದಲ್ಲಿದ್ದರೆ ಮತ್ತೊಂದು ಕ್ಷಣದಲ್ಲಿ ಬೇರೊಂದು ಗುಡ್ಡದಲ್ಲಿ, ಹೀಗೆ ಸ್ಥಳಾಂತರವನ್ನು ಮಾಡುತ್ತ ಮಾಡುತ್ತ ತನ್ನ ಹಾಗು ತನ್ನ ಕುಟುಂಬದವರ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದನು. ವನ್ಯ ಪದಾರ್ಥ, ಅಥವಾ ತೃಣಧಾನ್ಯಗಳ ಮೇಲೆ ಅವನು ಕಾಲಕಳೆಯುತ್ತಿದ್ದನು. ಮಳೆಗಾಲದಲ್ಲಿ ಅವನಿಗೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತಿತ್ತು. ಆದರೆ ಆ ಕಾಲವು ಗತಿ ಸಲು ಪುನಃ ಮೊಗಲರು ಬೇರೆ ಬೇರೆ ಮಾರ್ಗಗಳಿಂದ ಬಂದು ಪ್ರತಾಪನಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು, ಕಷ್ಟಾಪೇಷ್ಟೆಗಳನ್ನೂ ಸಂಕಟಗಳನ್ನೂ ಗಣನೆಗೆ ತಾರದೆ ಪ್ರತಾಪನು ಮೇಲಿಂದ ಮೇಲೆ ಶತ್ರುಗಳ ಮೇಲೆ ಹಲ್ಲೆಯನ್ನು ಮಾಡಿ ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದನು. ಇದೇ ಕ್ರಮವು ವರ್ಷಾನುವರ್ಷ ನಡೆಯುತ್ತಿತ್ತು. ಪ್ರತಾಪನು ತನಗೆ ಶರಣಾಗತನಾಗಿ ತನ್ನ ನಿಷ್ಕಂಟಕವಾದ ರಾಜ್ಯವನ್ನು ತಾನೇ ಆಳಲಿ' ಎಂಬದಾಗಿ ಅಕಬರನ ಆಗ್ರಹವಿತ್ತು. ಆದರೆ ಪ್ರತಾಪನು ಎಂಥ ಸತ್ಯನಿಷ್ಠನಾದ ಸ್ವದೇಶಭಕ್ತನು ಹಾಗೂ ಅಭಿ