ಪುಟ:ಬೆಳಗಿದ ದೀಪಗಳು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೮೭

ತನ್ನ ಯಜಮಾನನನ್ನು ಆಚೆಯ ದಂಡೆಗೆ ಒಯ್ದು ಬಿಟ್ಟಿತು. ಆದರೆ ಪ್ರತಾಪನಂತೆ ಚೇತಕವಾದರೂ ಯುದ್ಧದಲ್ಲಿ ಗಾಯಪಟ್ಟಿತ್ತು. ಪ್ರತಾಪನನ್ನು ಬೆನ್ನಟ್ಟದ ಶತ್ರುಗಳು ತೀರ ಸಮೀಪಕ್ಕೆ ಬರಲು, ಅಷ್ಟರಲ್ಲಿ 'ಎಲೈ ಕಂಗುದುರೆಯ ಮೇಲಿನ ಸವಾರನೇ, ನಿಲ್ಲ!” ಎಂದು ಸ್ವಭಾಷೆ ಯಲ್ಲಿ ಪ್ರತಾಪನನ್ನುದ್ದೇಶಿಸಿ ಯಾರೋ ಕೂಗಿದಂತಾಯಿತು; ಹಿಂದುರಿಗಿ ನೋಡುತ್ತಾನೆ, ತನ್ನ ತಮ್ಮನಾದ ಸೂಕ್ತನು ಓಡಿಬರುತ್ತಲಿದ್ದಾನೆ. ಸೂಕ್ತನು 'ಫಿತೂರ'ನಾಗಿ ಆಕಬರನನ್ನು ಕೂಡಿದ್ದರೂ ಈಗ್ಗೆ ತನ್ನ ಅಣ್ಣನಾದ ಮೇವಾಡದ ಅರಸನು ಏಕಾಂಗಿಯಾಗಿ ಓಡುತ್ತಿರುವದನ್ನೂ ಇಬ್ಬರು ಪಠಾಣರು ಅವನ ಬೆನ್ನು ಹತ್ತಿರುವದನ್ನೂ ನೋಡಿ, ಅವನ ಮನಸ್ಸು ಪಶ್ಚಾತ್ತಾಪದಿಂದಲೂ, ಬಂಧುಪ್ರೇಮದಿಂದಲೂ ಕರಗಿತು. ಸೂಕ್ತನು ಆ ಇಬ್ಬರೂ ಪಠಾಣರನ್ನು ಛೇದಿಸಿ ತನ್ನ ಅಣ್ಣನನ್ನು ಉಳಿಸಿದನು. ಇಂಥ ಗಂಡಾಂತರದ ಸಮಯದಲ್ಲಿ ತನ್ನ ತಮ್ಮನ ತನ್ನ ರಕ್ಷಣೆಗಾಗಿ ಬಂದದ್ದನ್ನು ನೋಡಿ ಪ್ರತಾಪನು ಸದ್ದಿತನಾದನು. ಬಂಧುಪ್ರೇಮದಿಂದ ಪರಸ್ಪರರು ಪರಸ್ಪರರನ್ನು ಆಲಿಂಗಿಸಿದರು. ಅಷ್ಟರಲ್ಲಿ ಪ್ರತಾಪನ ಚೇತಕ ಕ್ಕೆ ಗಾಯಗಳ ವೇದನೆಯಿಂದ ಬವಳಿ ಬಂದಂತಾಗಿ ಅದು ನೆಲಕ್ಕೆ ಬಿದ್ದು ಪ್ರಾಣವನ್ನು ಬಿಟ್ಟಿತು. ಚೇತಕವು ಜೀವವನ್ನು ಬಿಟ್ಟ ಸ್ಥಳದಲ್ಲಿ ಪ್ರತಾಪನು ಅದರ ಸ್ಮರಣಾರ್ಥವಾಗಿ ಒಂದು ಛತ್ರವನ್ನು ಕಟ್ಟಿಸಿದ್ದಾನೆ. ಅದು 'ಚೇತಕ - ಚಬುತ್ತಾ' ಎಂಬ ಹೆಸರಿನಿಂದ ಮೇವಾಡದಲ್ಲಿ ಪ್ರಸಿದ್ಧವಿದೆ.

ಈ ಪ್ರಕಾರವಾಗಿ ಹಳದೀ ಘಟ್ಟವ ಯುದ್ಧವು ಮುಗಿಯಿತು. ಥರ್ಮಾಪಲಿಯ ಗಿರಿಕಂದರದ ಬಿಕ್ಕಟ್ಟಿನ ಮಾರ್ಗದಲ್ಲಿ ಸತ್ಯಪ್ರತಿಜ್ಞನಾಗಿದ್ದ 'ಲಿವೊ ನಿಡಾಸ'ನ ಸ್ಟಾರ್ಟನ್ ಜನರು ಯಾವ ಆಭಿಮಾನವನ್ನೂ ಕಾರ್ಯವನ್ನೂ ತೋರಿಸಿದರೆ ಅಥವಾ ಘೋಡಖಿಂಡಿಯಲ್ಲಿ ಬಾಜಿ ಪ್ರಭುವಿನ ಮಾವಳೇ ಜನರು ಯಾವ ಸ್ವಾಮಿನಿಷ್ಠೆಯನ್ನೂ ಶೌರ್ಯವನ್ನೂ ತೋರಿಸಿದರೋ ಅದೇ ಪ್ರಕಾರದ ದೇಶಾಭಿಮಾನವನ್ನೂ ಶೌರ್ಯವನ್ನೂ ಸ್ವಾಮಿನಿಷ್ಠೆಯನ್ನೂ ಮೇವಾಡದ ರಜಪೂತರು - ಹಳದೀಘಾಟ ” ದಲ್ಲಿ ಜಗತ್ತಿನ ನಿದರ್ಶನಕ್ಕೆ ತಂದುಕೊಟ್ಟರು. ಈ ಯುದ್ಧದಲ್ಲಿ ಪ್ರತಾಪನ ಐನೂರು ಜನ ಆಪ್ತರೂ ಝಾಲಾದ ಠಾಕೂರನೂ ಆವನ ಇನ್ನೂರೈವತ್ತು ಜನರ ಪತನ ಹೊಂದಿದರು. ಸೆಬೀಮನಿಗೆ ಜಯಪ್ರಾಪ್ತಿಯಾದರೂ ಮುಂದೆ ಯುದ್ಧವನ್ನು