ಪುಟ:ಬೆಳಗಿದ ದೀಪಗಳು.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ಸಂಪೂರ್ಣ-ಕಥೆಗಳು

ಆಚ್ಛಾದಿತವಾದ್ದರಿಂದ ಭಾಲೆಯ ಅಲಗು ಮೊಂಡಾಗಿ, ಆ ಇರಿತವು ನಿಷ್ಪಲವಾಯಿತು. ಅಷ್ಟರಲ್ಲಿ ಆನೆಯ ಮಾವುತನು ಕೊಲ್ಲಲ್ಪಟ್ಟನು, ಆನೆಯು ಅನಾವರವಾಗಿ ಓಡಹತ್ತಿತು. ಆಗ್ಗೆ ಆ ಸ್ಥಳದಲ್ಲಿ ಒಳ್ಳೇ ತುಮುಲವಾದ ಯುದ್ಧವಾಯಿತು. ಸೆಲೀಮನ ರಕ್ಷಣೆಗಾಗಿ ಮೊಗಲರೂ, ಪ್ರತಾಪಸಿಂಹನ ಸಂರಕ್ಷಣೆಗಾಗಿ ರಜಪೂತರೂ, ಪರಸ್ಪರರ ಮೇಲೆ ಕಡಿದು ಬಿದ್ದ ರು. ಈ ಘನಘೋರವಾದ ಸಂಗ್ರಾಮದಲ್ಲಿ ಪ್ರತಾಪನಿಗೆ ಏಳು ಗಾಯಗಳು ತಗಲಿದವು ; ಆದರೂ ಅವನು ಸೆಲೀಮನ ಬೆನ್ನು ಬಿಡಲಿಲ್ಲ; ಹಾಗೂ ತನ್ನ ಛತ್ರವನ್ನೂ, ರಕ್ತ ವರ್ಣದ ಧ್ವಜವನ್ನು ದೂರ ಮಾಡಲಿಲ್ಲ. ಅದರಿಂದ ಪ್ರತಾಪನ ಧ್ವಜವು ಕಾಣಬರುತ್ತಿದ್ದ ಸ್ಥಳಕ್ಕೆ ಮೊಗಲರು ರಭಸದಿಂದ ಸಾಗಹತ್ತಿದರು. ಇದನ್ನು ಕಂಡು ಝಾಲಾದ ಠಾಕುರನಾದ ಮಾನಾ ಎಂಬವನು ಪ್ರತಾಪನ ಛತ್ರವನ್ನೂ ಧ್ವಜವನ್ನೂ ತನ್ನ ವಶಕ್ಕೆ ತೆಗೆದುಕೊಂಡು ಒಂದು ಬಿಕ್ಕಟ್ಟನ ಸ್ಥಳಕ್ಕೆ ಪ್ರತಾಪನ ಮೇಲಾಗುತ್ತಿದ್ದ ಹಲ್ಲೆಗಳನ್ನು ತನ್ನ ಮೈ ಮೇಲೆ ತೆಗೆದುಕೊಂಡನು. ಈ ರೀತಿಯಾಗಿ ಆ ಸ್ವಾಮಿಭಕ್ತ ಠಾಕುರನು ತನ್ನ ರಾಜನ ಮುಕ್ತತೆಯನ್ನು ಮಾಡಲು, ಉಳಿದ ರಜಪೂತ ಸರದಾರರು ಪ್ರತಾಪನನ್ನು ರಣಾಂಗಣದಿಂದ ಹೊರಗೆ ಕರೆದೊಯ್ದರು. ಇತ್ತ ಮಾನಾನು ತನ್ನ ಶೂರ ಸೈನಿಕರೊಂದಿಗೆ ಮರಣ ಹೊಂದಿದನು ; ಹಾಗೂ ತನ್ನ ಪ್ರಾಣವನ್ನು ಸ್ವಾಮಿ ಭಕ್ತಿಗಾಗಿ ವೆಚ್ಚ ಮಾಡಿದನು.

ಮೊಗಲರ ಅಸಂಖ್ಯವಾದ ತೋಫುಗಳ, ಸವಾರರ ಹಾಗೂ ಕಾಲಾಳುಗಳ ಮುಂದೆ ರಜಪೂತರು ತೋರಿಸಿದ ಪ್ರತಾ ಕ್ರಮವು ಎಷ್ಟೊತ್ತು ತಾಳುವದು? ಈ ಹಳದೀ ಘಟ್ಟದ ಯುದ್ಧದಲ್ಲಿ ಇಪ್ಪತ್ತೆರಡು ಸಾವಿರ ರಜಪೂತರು ಪ್ರತಾಪನ ಧ್ವಜದ ಸುತ್ತಲೂ ನೆರೆದಿದ್ದರು. ಇವರಲ್ಲಿ ಎಂಟು ಸಾವಿರ ಜನರು ಮಾತ್ರ ಜೀವದಿಂದುಳಿದರು: ಜಾಣತನದಿಂದಲೂ ಉತ್ಸಾಹದಿಂದಲೂ ತನ್ನ ಯಜಮಾನನ ಸೇವೆಯನ್ನು ಮಾಡಿದ 'ಚೇತಕ ' ಎಂಬ ಹೆಸರಿನ ಕೃಷ್ಣವರ್ಣದ ವಾಜಿಯು ಪ್ರತಾಪನ ರಕ್ಷಣಾರ್ಥವಾಗಿ ಹರಿಹಳ್ಳಗಳನ್ನು ಹಾರುತ್ತ ಹಾರುತ್ತ ತನ್ನ ಯಜಮಾನನ ರಕ್ಷಣೆಯನ್ನು ಮಾಡುತ್ತಲೇ ಇತ್ತು. ಆದರೆ ಇಷ್ಟರಲ್ಲಿ ಶತ್ರುಗಳು ತೀರ ಸಮಾಸಕ್ಕೆ ಬಂದರು. ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ಚೇತಕವು ಒಂದು ಅಗಲವಾದ ಹರಿಯನ್ನು ಜಾರಿ