ಪುಟ:ಬೆಳಗಿದ ದೀಪಗಳು.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೮೫

ಅಧಿಪತ್ಯವನ್ನು ಕೊಟ್ಟು ಯುದ್ಧಕ್ಕೆ ಕಳಿಸಿದ್ದನು. ಅಕಬರನ ಪ್ರಸಿದ್ದ ಸೇನಾ ನಾಯಕನಾದ ರಾಜಾ ಮಾನಸಿಂಗನೂ ತನ್ನ ಹೆಣ್ಣು ಮಕ್ಕಳನ್ನು ತುರ್ಕರಿಗೆ ಕೊಟ್ಟು ಅವರ ಕೂಡ ಸಂಬಂಧವನ್ನು ಮಾಡಿದ್ದಕ್ಕಾಗಿ ಪ್ರತಾಪನು ಅವನ ನಿರ್ಭತ್ಸನೆಯನ್ನು ಮಾಡಿದ್ದನು. ಇದರಿಂದ ಅವಮಾನಿತನಾದಂತಾದ ರಾಜಾ ಮನಸಿಂಗನು"ಪ್ರತಾಪನ ಗರ್ವವನ್ನು ಖಂಡಿಸದಿದ್ದರೆ ನಾನು ಮಾನಸಿಂಗನಲ್ಲ” ಎಂದು ಪ್ರತಿಜ್ಞೆ ಮಾಡಿದ್ದನು ಮೇವಾಡದ ಬಯಲು ಪ್ರದೇಶಕ್ಕೆ ಬರುವದರೊಳಗಾಗಿಯೇ ಆ ಪ್ರದೇಶವೆಲ್ಲ ನಿರ್ಜನವಾಗಿಹೋಗಿತ್ತು.

ಸೆಲೀಮನು ಪ್ರತಾಪಸಿಂಹನ ರಾಜಧಾನಿಯಾದ ಕವಳಮೇರದ ಮೇಲೆ ಹಳದೀಘಟ್ಟದ ಇಕ್ಕಟ್ಟಿನ ಮಾರ್ಗವಾಗಿ ಸಾಗಿವಡೆದನು. ಘಟ್ಟದ ಬಾಯಿಗೆ ಪ್ರತಾಪನು ತನ್ನ ಸೈನ್ಯ ಸಮೇತವಾಗಿ ನಿಂತಿದ್ದನು. ಪ್ರತಾಪಸಿಂಹನ ತಲೆಯಮೇಲೆ ಛತ್ರವಿದ್ದು, ಹತ್ತಿರದಲ್ಲಿಯೇ ಅವನ ಸುವರ್ಣಾದಿತ್ಯಾಂಕಿತವಾದ ರಕ್ತ ವರ್ಣದ ಧ್ವಜಸಟವು ಅಂತರಿಕ್ಷದಲ್ಲಿ ಸುಳಿದಾಡುತ್ತಿತ್ತು. ಘಟ್ಟದಲ್ಲಿ ಮೊಗಲರ ಪ್ರವೇಶವಾಗಲು, ರಜಪೂತರು ಅವರನ್ನು ಸುತ್ತು ಗಟ್ಟಿ ಯುದ್ಧವನ್ನು ಪ್ರಾರಂಭಿಸಿದರು, ಮಾನಸಿಂಗನನ್ನು ಬೆನ್ನಟ್ಟಿ ಅವನಿಗೆ ತನ್ನ ಶಸ್ತ್ರದ ಪ್ರತಾಪವನ್ನು ತೋರಿಸಿ ನಾಚಿ ಸಬೇಕೆಂದು ಪ್ರತಾಪಸಿಂಹನು ಅವನನ್ನು ಶೋಧಿಸಹತ್ತಿದನು. ಆದರೆ ಅವನು ಎಲ್ಲಿಯೂ ತಪ್ಪಿಸಿಕೊಂಡು ಶತ್ರುವಿಗೆ ಮೊರೆಯನ್ನ ತೋರಿಸಲಿಲ್ಲ. ಬಳಿಕ ಪ್ರತಾಪನು ಯಾವ ಸ್ಥಳದಲ್ಲಿ ಸೆಲೀಮನು ಆನೆಯನ್ನೇರಿಕೊಂಡು ತನ್ನ ಸೈನ್ಯದವರನ್ನು ಉತ್ತೇಜಿಸುತ್ತಿದ್ದನೋ ಆ ಸ್ಥಳಕ್ಕೆ ಹೋಗಬೇಕೆಂದು ಯೋಚಿಸಿ, ಶತ್ರು ಸೈನ್ಯದವರ ಸಾಲುಗಳನ್ನು ಮುರಿಯುತ್ತ ಮುರಿಯುತ್ತ ಸಲೀಮನ ಮುಂದೆ ಬಂದು ನಿಂತನು. ಸೆಲೀಮನ ಜೀವಕ್ಕೆ ಜೀವ ಕೊಡುವ ಸೈನಿಕರ ಶರತ್ವವು ಪ್ರತಾಪನ ಪರಾಕ್ರಮವನ್ನು ಕಟ್ಟಲು ಸಮರ್ಥವಾಗಲಿಲ್ಲ. ಪ್ರತಾಪನ ಕುದುರೆಯು ಸೆಲೀನನ ಆನೆಯ ಕಾಲ ಮೇಲೆ ತನ್ನ ಮುಂಗಾಲುಗಳನ್ನಿಟ್ಟುಕೊಂಡು ನಿಂತಿತು. ಕೂಡಲೆ ಪ್ರತಾಪನು ತನ್ನ ಭಾಲೆಯಿಂದ ಸಲೀಮನನ್ನು ಬಲವಾಗಿ ಇರಿದನು. ಈ ಇರಿತದಿಂದ ಸಲೀಮನು ಮೃತನಾಗಶಕ್ಕವನೇ ! ಆದರೆ ಅವನ ಅಂಬಾರಿಯು ಉಕ್ಕಿನ ದಪ್ಪಾದ ತಗಡುಗಳಿಂದ