ಪುಟ:ಬೆಳಗಿದ ದೀಪಗಳು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೯೧

ವನ್ನು ಪ್ರಕಟಿಸಿದ ಪುರುಷನೆಂದರೆ ಪ್ರತಾಪಸಿಂಹನೊಬ್ಬನೇ. ಅವನೊಬ್ಬನು ತನ್ನ ಶಿರವನ್ನು ತನ್ನು ಮಾಡಿದನೆಂದರೆ ಹಿಂದೂ ಮಾತ್ರ, ವಿಶೇಷತಃ ರಜಪೂತರ ಉಳಿದಿರುವ ಅಲ್ಪ ಸ್ವಲ್ಪ ಪ್ರತಿಷ್ಠೆಯ ಕೂಡ ಸಂಪೂರ್ಣವಾಗಿ ಇಲ್ಲದಂತಾಗುವದು. ಸಕಲ ಹಿಂದೂ ಜನರ ಉತ್ಸಾಹವು ಪ್ರತಾಪಸಿಂಹನನ್ನು ಅವಲಂಬಿಸಿರಲು ಆವನೇ ನಮ್ಮನ್ನು ಬಿಡುವನೆಂದು ಕೇಳುತ್ತೇವೆ. ಹೀಗೆ ತಾನು ವರ್ತಿಸುವ ಚಿತ್ರೀಡದ ರಾಣಾನಿಗೆ ಸರಿಯಾದದ್ದೆಂದು ತೋರುತ್ತದೆಯೋ ? ' ಈ ಆಶಯದ ಅತ್ಯಂತ ಉತ್ತೇಜನಜನಕವಾದ ಪತ್ರದನ್ನು ಅವನು ಪ್ರತಾಪನಿಗೆ ಕಳಿಸಿದನು. ಪತ್ರವು ಪ್ರತಾಪನಿಗೆ ಮುಟ್ಟಲು ಅವನಿಗೆ ಹತ್ತು ಸಾವಿರ ಜನರ ಸಹಾಯದಿಂದ ಬರುವಂಥ' ಬಲವು ಕೂಡ ಬಂದಿತು. ಇದೇ ಕಾಲಕ್ಕೆ ಮೇವಾಡದ ಆಕೆಯನ್ನು ಬಿಟ್ಟು, ಸಿಂಧಪ್ರಾಂಶದಲ್ಲಿ ಹೊಸದಾಗಿ ಸ್ವತಂತ್ರವಾದದ್ದೊಂದು ರಾಜ್ಯವನ್ನು ಸ್ಥಾಪಿಸಿ ತುರ್ಕರ ಕೈಯೊಳಗಿಂದ ಪಾರಾಗಬೇಕೆಂದು ಪ್ರತಾಪಸಿಂಹನು ಯೋಚಿಸಿದ್ದನು. ಆದರೆ ಈ ಪತ್ರವನ್ನೋದಿ ತತ್ಕ್ಷಣವೇ ಅವನು ಆ ಆಲೋಚನೆಯನ್ನು ಬಿಟ್ಟು ಕೊಟ್ಟನು. ಇದೇ ಕಾಲಕ್ಕೆ ರಾಣಾನ ವಂಶಪರಂಪರಾಗತ ದಿವಾಣನಾದ ಭಾಮಾಶಹಾ ಎಂಬವನು ಇಪ್ಪತ್ತೈದು ಸಹಸ್ರ ಸೈನಿಕರಿಗೆ ಹನ್ನೆರಡು ವರ್ಷಗಳ ವರೆಗೆ ಸಾಕಾಗುವಷ್ಟು ತನ್ನ ಪಿತ್ರಾರ್ಜಿತ ದ್ರವ್ಯವನ್ನೆಲ್ಲ ಪ್ರತಾಪಸಿಂಹನ ಚರಣಕ್ಕೆ ಅರ್ಪಿಸಿದನು. ಇದರಿಂದ ಪ್ರತಾಪನ ವಿಮನಸ್ಕಫೆಯು ಅಸ್ತ್ರವಾಗಿ ಅವನಿಗೆ ಧೈರ್ಯವು ಇಮ್ಮಡಿಯಾಗಿ ಬಂದಿತು. ಕೂಡಲೆ ಪ್ರತಾಪನು ದೇವೇರದ ಮೊಗಲರನ್ನು ಪೂರ್ಣವಾಗಿ ಪರಾಜಯಗೊಳಿಸಿ ಅಮೇಟದ ಠಾಣ್ಯವನ್ನು ತನ್ನ ಕೈವಶ ಮಾಡಿಕೊಂಡನು. ಆ ಬಳಿಕ ಕವಳಮೇರಕ್ಕೆ ಸಾಗಿ ಹೋಗಿ ಅಲ್ಲಿಯ ಸರದಾರನಾಗಿದ್ದ ಅಬದುಲ್ಲಾ ಹಾಗು ಅವನ ಕೈ ಕೆಳಗಿನ ಸೈನಿಕರನ್ನೆಲ್ಲ ಕೊಂದು ಅದನ್ನೂ ತನ್ನ ಹಸ್ತಗತ ಮಾಡಿಕೊಂಡನು, ಈ ಪ್ರಕಾರವಾಗಿ ಒಂದರ ಹಿಂದೆ ಒಂದು, 'ಹೀಗೆ ಮುವತ್ತೆರಡು ಕೋಟೆ ಕೊತ್ತಳಗಳನ್ನು ಸಂಪಾದಿಸಿದನು. ಚಿತೋಡಗಡ, ಅಜರ್ಮರ ಹಾಗು ಮಂಗಳಗದ ಈ ಮರು ಸ್ಥಳಗಳನ್ನು ಳಿದು ಮೇವಾಡ ಪ್ರಾಂತವೆಲ್ಲ ಪ್ರತಾಪನ ಸ್ವಾಧೀನವಾಯಿತು.”

ಪ್ರತಾಪಸಿಂಹನ ಈ ಮುಂದಿನ ಕಾಲವು ಸುಖಸಮಾಧಾನದಲ್ಲಿ ಸಾಗ